ವಡೋದರಾ (ಗುಜರಾತ್): ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ತೀವ್ರ ಕೊರತೆ ಎದುರಾಗಿರುವ ಕಾರಣ ವಡೋದರಾದ ಮಸೀದಿ 50 ಹಾಸಿಗೆಗಳ ಆರೋಗ್ಯ ಕೇಂದ್ರವಾಗಿ ಬದಲಾಗಿದೆ.
ಜಹಾಂಗೀರ್‌ಪುರ ಮಸೀದಿಯ ಟ್ರಸ್ಟಿ ಇರ್ಫಾನ್ ಶೇಖ್, "ಕಳೆದ ಕೆಲವು ದಿನಗಳಿಂದ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಗೆ ಕಾರಣವಾಗಿದೆ. ಈ ಕೊರತೆಯನ್ನು ನೀಗಿಸಲು 50 ಹಾಸಿಗೆಗಳ ಕೋವಿಡ್ ಸೌಲಭ್ಯ ಕೇಂದ್ರವನ್ನಾಗಿ ಮಸೀದಿಯನ್ನು ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಆಮ್ಲಜನಕ, ರೆಮಿಡಿಸಿವರ್ ಕೊರತೆ: ಮಧ್ಯಪ್ರದೇಶದಲ್ಲಿ 6 ಸೋಂಕಿತರು ಸಾವು
ಕಳೆದ 24 ಗಂಟೆಗಳಲ್ಲಿ ಗುಜರಾತ್‌ನಲ್ಲಿ 11,403 ಹೊಸ ಕೋವಿಡ್-19 ಪ್ರಕರಣಗಳು ಮತ್ತು 117 ಸಾವುಗಳು ವರದಿಯಾಗಿವೆ.