ETV Bharat / bharat

Uttarakhand Politics: ವರ್ಷದಲ್ಲೇ ಮೂವರು ಸಿಎಂ ಕಂಡ ಉತ್ತರಾಖಂಡ! - ಪ್ರಧಾನಿ ನರೇಂದ್ರ ಮೋದಿ

ನಿನ್ನೆಯಷ್ಟೇ ಉತ್ತರಾಖಂಡ ಸಿಎಂ ತಿರಥ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ, ಬಿಜೆಪಿ ಹೈಕಮಾಂಡ್​ ನೂತನ ಮುಖ್ಯಮಂತ್ರಿ ನೇಮಕಕ್ಕೆ ಶೋಧ ನಡೆಸಿದೆ.

Uttarakhand
Uttarakhand
author img

By

Published : Jul 3, 2021, 11:15 AM IST

ನವದೆಹಲಿ: ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಲ್ಲಿ ತಿರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದೇ ವರ್ಷದಲ್ಲಿ ಉತ್ತರಾಖಂಡ ಮೂವರು ಸಿಎಂ ಕಾಣ್ತಿರೋದು ಇದೇ ಮೊದಲು ಎನ್ನಲಾಗ್ತಿದೆ.

ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷವು ಹೊಸ ಸಿಎಂ ಆಯ್ಕೆ ಮಾಡಲು ಸಭೆ ನಡೆಸುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇತ್ತ ಹೈಕಮಾಂಡ್ ಶಾಸಕರಾದ ಸತ್ಪಾಲ್ ಮಹಾರಾಜ್ ಮತ್ತು ಧನ್ ಸಿಂಗ್ ರಾವತ್ ಅವರನ್ನು ದೆಹಲಿಗೆ ಕರೆಸಿದೆ. ಇದೆಲ್ಲದರ ಮಧ್ಯೆ ಕೇಂದ್ರ ಸಚಿವ ನರೇಂದ್ರ ಸಿಂಗ್​ ತೋಮರ್​ ಅವರನ್ನು ಡೆಹ್ರಾಡೂನ್​ನಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರನ್ನಾಗಿ ನೇಮಿಸಿದೆ.

ರಾಜೀನಾಮೆ ಬಳಿಕ ಮಾತನಾಡಿರುವ ತಿರಥ್ ಸಿಂಗ್ ರಾವತ್, ಹೈಕಮಾಂಡ್​​​ ನೀಡಿದ್ದ ಜವಾಬ್ದಾರಿಗೆ ಧನ್ಯವಾದ ಅರ್ಪಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಉತ್ತರಾಖಂಡ್​ನಲ್ಲಿ ಬೈ ಎಲೆಕ್ಷನ್ ನಡೆಯಲ್ಲ ಎಂಬುದು ರಾವತ್​ ರಾಜೀನಾಮೆಯೊಂದಿಗೆ ಮತ್ತೆ ಸಾಬೀತಾಗಿದೆ. ತಿರಥ್ ಸಿಂಗ್ ರಾವತ್​ ಸಿಎಂ ಆಗಿ ಮುಂದುವರಿಯಲು ಸೆಪ್ಟೆಂಬರ್ 10, 2020 ರೊಳಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಬೇಕಿತ್ತು. ಆದರೆ, ಕೋವಿಡ್​ ಎರಡನೇ ಅಲೆಯಿಂದಾಗಿ ಚುನಾವಣಾ ಆಯೋಗ ಎಲೆಕ್ಷನ್​ಗಳನ್ನು ನಡೆಸಲಿಲ್ಲ.

ಈ ಹಿಂದೆ ತ್ರಿವೇಂದ್ರ ಸಿಂಗ್ ರಾವತ್​ರನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಹೈಕಮಾಂಡ್,​ ತಿರಥ್ ಸಿಂಗ್ ರಾವತ್​ಗೆ ಸಿಎಂ ಪಟ್ಟ ನೀಡಿತ್ತು.

ಇದನ್ನೂ ಓದಿ:ಉತ್ತರಾಖಂಡದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ಸಿಎಂ ತಿರಥ್ ಸಿಂಗ್ ರಾವತ್ ರಾಜೀನಾಮೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.