ಡೆಹ್ರಾಡೂನ್, ಉತ್ತರಾಖಂಡ: ರಾಜಕಾರಣವೇ ಹಾಗೆ.. ಯಾವಾಗ, ಏನಾಗುತ್ತದೆಯೋ ಗೊತ್ತಾಗುವುದಿಲ್ಲ. ಈ ರೀತಿ ಹೇಳೋಕೆ ಕಾರಣ ಉತ್ತರಾಖಂಡದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ.. ಹೌದು ಉತ್ತರಾಖಂಡ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಲ್ಲಿ ತಿರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಸಿಎಂ ರಾವತ್ ಹೈಕಮಾಂಡ್ ಭೇಟಿಗೆ ತೆರಳಿದ್ದರು. ಇಂದು ಅವರು ತಮ್ಮ ಸಿಎಂ ಸ್ಥಾನ ತ್ಯಜಿಸಬೇಕೆಂದು ಪಕ್ಷದ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಪಕ್ಷದ ವರಿಷ್ಟರಿಗೆ ರಾಜೀನಾಮೆ ಪತ್ರ ರವಾನಿಸಿದ್ದ ಅವರು, ನಂತರ ಉತ್ತರಾಖಂಡ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
-
उत्तराखंड के मुख्यमंत्री श्री @TIRATHSRAWAT ने राजभवन में भेंट कर मुख्यमंत्री पद से त्याग पत्र सौंपा। pic.twitter.com/Vd1tB9f3W1
— Baby Rani Maurya (@babyranimaurya) July 2, 2021 " class="align-text-top noRightClick twitterSection" data="
">उत्तराखंड के मुख्यमंत्री श्री @TIRATHSRAWAT ने राजभवन में भेंट कर मुख्यमंत्री पद से त्याग पत्र सौंपा। pic.twitter.com/Vd1tB9f3W1
— Baby Rani Maurya (@babyranimaurya) July 2, 2021उत्तराखंड के मुख्यमंत्री श्री @TIRATHSRAWAT ने राजभवन में भेंट कर मुख्यमंत्री पद से त्याग पत्र सौंपा। pic.twitter.com/Vd1tB9f3W1
— Baby Rani Maurya (@babyranimaurya) July 2, 2021
ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ರಾಜೀನಾಮೆ ನೀಡುವುದು ಸರಿ ಎಂದು ನಾನು ಭಾವಿಸಿದ್ದೇನೆ. ಹೈಕಮಾಂಡ್ ಮತ್ತು ಪ್ರಧಾನಿ ಮೋದಿ ನನಗೆ ನೀಡಿದ ಅವಕಾಶ ನಾನು ಆಭಾರಿಯಾಗಿದ್ದೇನೆ ಎಂದು ತಿರಥ್ ಸಿಂಗ್ ರಾವತ್ ತಿಳಿಸಿದ್ದಾರೆ.
ಈ ಕುರಿತು ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಟ್ವೀಟ್ ಮಾಡಿದ್ದು, ತಿರಥ್ ಸಿಎಂ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ದೃಢಪಡಿಸಿದ್ದಾರೆ.