ETV Bharat / bharat

ಉತ್ತರಾಖಂಡ ಸುರಂಗ ಕುಸಿತ: ಕೊರೆಯುವ ಅಗರ್​ ಯಂತ್ರಕ್ಕೆ ಹಾನಿ, ರಕ್ಷಣಾ ಕಾರ್ಯಾಚರಣೆಗೆ ಹೊಸ ಅಡ್ಡಿ - workers trap inside tunnel

ಸೇತುವೆ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಗಳು ಉಂಟಾಗುತ್ತಿದ್ದು, ಕೊರೆಯುವ ಯಂತ್ರ ಹಾನಿಗೀಡಾಗಿದೆ. ಅದರ ಭಾಗಗಳನ್ನು ಏರ್​ಲಿಫ್ಟ್​ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೊರೆಯುವ ಅಗರ್​ ಯಂತ್ರಕ್ಕೆ ಹಾನಿ
ಕೊರೆಯುವ ಅಗರ್​ ಯಂತ್ರಕ್ಕೆ ಹಾನಿ
author img

By ETV Bharat Karnataka Team

Published : Nov 25, 2023, 5:32 PM IST

ಉತ್ತರಕಾಶಿ (ಉತ್ತರಾಖಂಡ) : ಕುಸಿದ ಸಿಲ್ಕ್ಯಾರ ಸೇತುವೆ ದುರಸ್ಥಿಗೆ ತೆರಳಿ, ಅದರಲ್ಲೇ ಕಳೆದ 14 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಅಡ್ಡಿಯುಂಟಾಗಿದೆ. 46 ಮೀಟರ್​ ಉದ್ದ ಕೊರೆದು, ಇನ್ನೇನು 15 ಮೀಟರ್​ನಷ್ಟು ದೂರ ಇರುವ ಕಾರ್ಮಿಕರನ್ನು ತಲುಪುವ ಮೊದಲು ಅಮೆರಿಕದ ಅಗರ್​ ಎಂಬ ಕೊರೆಯುವ ಯಂತ್ರ ಕೆಟ್ಟು ನಿಂತಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

  • #WATCH | Silkyara tunnel rescue operation | Vishal Chauhan, Member, NHAI says, "As we have reached 47 meters. We now have to go 12-15 meters more. It could be 10, 12 or 14 meters, that we have to go manually now...The environment impact assessment of this project has also been… pic.twitter.com/5l5FMCDYGX

    — ANI (@ANI) November 25, 2023 " class="align-text-top noRightClick twitterSection" data=" ">

ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಸುರಂಗ ತಜ್ಞ, ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಿರುವ ಅರ್ನಾಲ್ಡ್ ಡಿಕ್ಸ್, ಅವಶೇಷಗಳನ್ನು ಕೊರೆಯುವ ಅಗರ್​ ಯಂತ್ರ ಕೈಕೊಟ್ಟಿದೆ. ಬದಲಿ ಆಯ್ಕೆಯನ್ನು ಬಳಸಲಾಗುತ್ತಿದೆ. ಒಳಗಿರುವ ಕಾರ್ಮಿಕರನ್ನು ಹೊರ ತರುವುದು ಪಕ್ಕಾ. ಆದರೆ, ಯಾವಾಗ ಬರುತ್ತಾರೆ ಎಂಬ ಬಗ್ಗೆ ನಿಖರವಾಗಿ ಹೇಳಲಾರೆ. ಸಾಧ್ಯವಾದರೆ, ಇಂದು ಅಥವಾ ನಾಳೆ ಅವರು ಸುರಕ್ಷಿತವಾಗಿ ಹೊರಬರುವರು. ಕ್ರಿಸ್​ಮಸ್​ ಹಬ್ಬವನ್ನು ಅವರವರ ಮನೆಯಲ್ಲಿ ಆಚರಣೆ ಮಾಡುವುದು ಮಾತ್ರ ಖಂಡಿತ ಎಂದು ಅವರು ಭರವಸೆ ನೀಡಿದರು.

ನಿರೀಕ್ಷಿಸದ ಸಮಸ್ಯೆಗಳು ಎದುರು: ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ವಿಶಾಲ್ ಚೌಹಾಣ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಈಗಾಗಲೇ 47 ಮೀಟರ್​ನಷ್ಟು ಉದ್ದ ಕೊರೆಯಲಾಗಿದೆ. 12 ರಿಂದ 15 ಮೀಟರ್ ಬಾಕಿ ಉಳಿದಿದೆ. ಯಂತ್ರಗಳು ಸತತವಾಗಿ ಬಳಸಿದ್ದರಿಂದ ಅವುಗಳು ದುರಸ್ತಿಗೀಡಾಗಿವೆ. ಮತ್ತೊಂದು ತಂತ್ರ ಬಳಸಲಾಗುತ್ತಿದೆ. ನಿರೀಕ್ಷಿಸದ ಸಮಸ್ಯೆಗಳು ಎದುರಾಗುತ್ತಿವೆ. ಏನೇ ಆದರೂ ಕಾರ್ಮಿಕರನ್ನು ಹೊರತರುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.

  • #WATCH | On Silkyara tunnel rescue operation, International Tunneling Expert, Arnold Dix says, "It means some time from now until one month and 41 men will be home safe. I just don't know exactly when. I mean that we should not rush. We should just consider the most important… pic.twitter.com/XOdxWJVX5J

ರಕ್ಷಣಾ ಕಾರ್ಯಾಚರಣೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಪ್ರಶ್ನೆಗೆ, ಕಾರ್ಯಾಚರಣೆಯು ಜಟಿಲವಾಗುತ್ತಿದೆ. ಇದರ ಟೈಮ್‌ಲೈನ್ ನೀಡಲಾಗಲ್ಲ. ಇದು ಪ್ರಕೃತಿಯ ಸವಾಲಾಗಿರುವುದರಿಂದ ಭೇದಿಸುವುದು ವಿಳಂಬವಾಗುತ್ತಿದೆ. ಅಕ್ಷರಶಃ ಯುದ್ಧೋಪಾದಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ನಿರೀಕ್ಷೆಗೂ ಮೀರಿ ಕೆಲಸ ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ ಅಗರ್​ ಯಂತ್ರವನ್ನು ದುರಸ್ತಿ ಮಾಡಿ ಮತ್ತೆ ಕೊರೆಯುವಿಕೆ ಪ್ರಾರಂಭಿಸಲಾಗುವುದು. ಇದೆಲ್ಲದರ ಮಧ್ಯೆ ನಾವು ಕಾರ್ಮಿಕರು ಮತ್ತು ಅವರ ಕುಟುಂಬಸ್ಥರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕಾಗಿದೆ ಎಂದರು.

ಅಗರ್​ ಯಂತ್ರದ ಭಾಗಗಳು ಏರ್​ಲಿಫ್ಟ್: ಒಳಗೆ ಸಿಲುಕಿರುವ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಆಹಾರ, ನೀರು, ಗಾಳಿಯನ್ನು ಒದಗಿಸಲಾಗುತ್ತಿದೆ. ಕುಟುಂಬಸ್ಥರು ಕಾರ್ಮಿಕರೊಂದಿಗೆ ಮಾತನಾಡುತ್ತಿದ್ದಾರೆ. ಅಗರ್ ಯಂತ್ರ ಕೆಟ್ಟಿದೆ. ಅದರ ಕೆಲವು ಭಾಗಗಳು ಹಾನಿಯಾಗಿದ್ದು, ಭಾರತೀಯ ವಾಯುಪಡೆಯ ನೆರವಿನಿಂದ ಏರ್‌ಲಿಫ್ಟ್ ಮಾಡಲಾಗುವುದು. ಶೀಘ್ರದಲ್ಲೇ ಅವು ಸುರಂಗದ ಸ್ಥಳವನ್ನು ತಲುಪಲಿವೆ. ಸುಧಾರಿತ ಯಂತ್ರೋಪಕರಣಗಳ ಅಗತ್ಯ ಹೆಚ್ಚಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಉತ್ತರಕಾಶಿ: ಮತ್ತೊಂದು ತಾಂತ್ರಿಕ ದೋಷ: ಕಾರ್ಮಿಕರ ರಕ್ಷಣಾ ಕಾರ್ಯ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.