ETV Bharat / bharat

ಗ್ಯಾಂಗಸ್ಟರ್​ ಅಶ್ರಫ್ ಅಹ್ಮದ್ ಹಂತಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ

ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Uttar Pradesh: SIT files chargesheet against killers of gangster sublings Atique and Ashraf Ahmed

author img

By

Published : Jul 14, 2023, 5:50 PM IST

ಪ್ರಯಾಗರಾಜ್ (ಉತ್ತರ ಪ್ರದೇಶ): ಗ್ಯಾಂಗಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಟ್ಟು ಕೊಂದ ಹಂತಕರ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಆರೋಪಪಟ್ಟಿ ಸಲ್ಲಿಸಿದೆ. ಜೈಲಿನಲ್ಲಿರುವ ಶೂಟರ್‌ಗಳಾದ ಅರುಣ್ ಮೌರ್ಯ, ಲವಲೇಶ್ ತಿವಾರಿ ಮತ್ತು ಸನ್ನಿ ಸಿಂಗ್ ವಿರುದ್ಧ 1200 ಪುಟಗಳ ಚಾರ್ಜ್‌ಹೀಟ್ ಅನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಹಿಂದೆ ಈ ಶೂಟೌಟ್ ಘಟನೆಗೆ ಲವಲೇಶ್ ತಿವಾರಿ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿತ್ತು. ಆದರೆ, ಸಲ್ಲಿಕೆಯಾದ ಚಾರ್ಜ್ ಶೀಟ್​ನಲ್ಲಿ ಸನ್ನಿ ಸಿಂಗ್ ಈ ಘಟನೆಯ ಮಾಸ್ಟರ್ ಮೈಂಡ್ ಎಂದು ಉಲ್ಲೇಖ ಮಾಡಲಾಗಿದೆ. ಅವರ ಅಪರಾಧದ ಹಿನ್ನೆಯನ್ನು ಸಹ ಈ ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಪ್ರಯಾಗ್‌ರಾಜ್‌ನ ಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಆದರೆ, ಆರೋಪಪಟ್ಟಿಯಲ್ಲಿ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದ್ದು, ಈ ಮೂವರು ಶೂಟರ್‌ಗಳ ಹೊರತು ನಾಲ್ಕನೆ ವ್ಯಕ್ತಿಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಬಹುಶಃ ಇದರಿಂದಲೇ ತನಿಖೆ ಇನ್ನೂ ಮುಗಿದಿಲ್ಲ. ಇನ್ನೂ ಕೆಲವು ಸಾಕ್ಷ್ಯಗಳು ಸಿಕ್ಕರೆ ಪೂರಕ ಚಾರ್ಜ್ ಶೀಟ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಆರೋಪ ಪಟ್ಟಿಯ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳ ನ್ಯಾಯಾಂಗ ಬಂಧನ ಶುಕ್ರವಾರ (ಜು.14) ಅಂತ್ಯಗೊಳ್ಳಲಿದೆ. ಗುರುವಾರ ಸಂಜೆ ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ನೋಡಿದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್ ಗೌತಮ್ ಅವರು ಮೂವರು ಆರೋಪಿಗಳನ್ನು ಜುಲೈ 14 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪೊಲೀಸರಿಗೆ ಆದೇಶಿಸಿದ್ದರು. ಅವರ ಆದೇಶದ ಮೇರೆಗೆ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೋಷಾರೋಪ ಪಟ್ಟಿಯು ಪ್ರಥಮ ಮಾಹಿತಿ ವರದಿ, ನಕ್ಷೆ ವೀಕ್ಷಣೆ, ಮರಣೋತ್ತರ ಪರೀಕ್ಷೆ ವರದಿ, ಚಲನ್, ಫೋಟೋ, ಪರೀಕ್ಷಾ ವರದಿ ಹೊಂದಿದೆ.

ಅತೀಕ್ ಅಹಮದ್ ಮತ್ತು ಆತನ ಸಹೋದರ ಅಶ್ರಫ್ ಹಲವು ದಶಕಗಳಿಂದ ಮಾಫಿಯಾ ಡಾನ್​ ಆಗಿ ಹೆಸರು ಮಾಡಿದ್ದರು. ಪಾತಕ ಲೋಕದಲ್ಲಿ ಅವರಂತೆಯೇ ಹೆಸರು ಮಾಡುವ ಹುಚ್ಚುತದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದಲ್ಲದೇ ಇವರಿಗೆ ಪಿಸ್ತೂಲ್​ಗಳನ್ನು ನೀಡದವರಾರು? ಪ್ರೇರೇಪಣೆಗೆ ಕಾರಣ ಏನು ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ವಿವಿಧ ರೀತಿಯ ವೈಜ್ಞಾನಿಕ ಪುರಾವೆಗಳನ್ನೂ ಸಹ ಪೊಲೀಸರು ಚಾರ್ಜ್ ಶೀಟ್​ನಲ್ಲಿ ದಾಖಲಿಸಿದ್ದಾರೆ.

ಮೊಬೈಲ್ ಮತ್ತು ಕ್ಯಾಮೆರಾದ ವಿಡಿಯೊ ಸೇರಿ 15 ವಿಡಿಯೋ ರೆಕಾರ್ಡಿಂಗ್​ಗಳನ್ನು ವೈಜ್ಞಾನಿಕ ಪುರಾವೆಯಾಗಿ ನೀಡಿದ್ದಾರೆ. ಅದರಲ್ಲಿ ಶೂಟರ್‌ಗಳು ತಂಗಿದ್ದ ಹೋಟೆಲ್‌ ವಿಡಿಯೋ ಕೂಡ ಇದೆ. ಪ್ರಕರಣದಲ್ಲಿ 150ಕ್ಕೂ ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಇದರಲ್ಲಿ 21 ಪೊಲೀಸರು ಸೇರಿದಂತೆ ಮಾಧ್ಯಮದವರ ಹೆಸರನ್ನೂ ಪ್ರತ್ಯಕ್ಷದರ್ಶಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇನ್ನು ವೈಜ್ಞಾನಿಕ ಸಾಕ್ಷ್ಯವಾಗಿ ಆರೋಪಿಗಳ ಬೆರಳಚ್ಚು ವರದಿಯೊಂದಿಗೆ ಸ್ಥಳದಿಂದ ಪತ್ತೆಯಾದ ಪಿಸ್ತೂಲ್, ಕ್ಯಾಮೆರಾ, ಮೈಕ್ ಮತ್ತು ಹೋಟೆಲ್ ಕೊಠಡಿಯಲ್ಲಿ ಪತ್ತೆಯಾದ ಬೆರಳಚ್ಚು ವರದಿಯನ್ನು ಕೂಡ ಸಲ್ಲಿಸಲಾಗಿದೆ. ಇದರ ಜೊತೆಗೆ ಮೂವರು ಶೂಟರ್‌ಗಳಾದ ಲವಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಅವರ ಅಪರಾಧ ಇತಿಹಾಸವನ್ನು ಸೇರಿಸಿಕೊಳ್ಳಲಾಗಿದೆ.

ಶೂಟರ್ ಸನ್ನಿ ಸಿಂಗ್ ಒಬ್ಬ ಕ್ರಿಮಿನಲ್ ಆಗಿದ್ದು ಅವನ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಅವನ ಮೇಲೇ ರೌಡಿ ಶೀಟರ್​ ಕೂಡ ಇದೆ. ಅತೀಕ್ ಅಶ್ರಫ್ ಹತ್ಯೆಗೂ ಮುನ್ನ ಆತನ ವಿರುದ್ಧ 18 ಪ್ರಕರಣಗಳು ದಾಖಲಾಗಿದ್ದರೆ, ಬಂದಾ ಜಿಲ್ಲೆಯ ಬಾಬೇರು ಪೊಲೀಸ್ ಠಾಣೆಯ ನಿವಾಸಿ ಲವಲೇಶ್ ತಿವಾರಿ ವಿರುದ್ಧ ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಾಗಿದೆ.

ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಏಪ್ರಿಲ್ 15ರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿರುವ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರಂತೆ ಬಂದ ಶೂಟರ್​ಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಂಡು ತಿಂದ ಅತೀಕ್ ಮತ್ತು ಅಶ್ರಫ್ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ನಡೆದ ತಕ್ಷಣ ಮೂವರು ಶೂಟರ್​ಗಳನ್ನು ಬಂಧಿಸಿದ್ದ ಪೊಲೀಸರು, ಅವರ ವಿರುದ್ಧ ಐಪಿಸಿ ಸೆಕ್ಷನ್ 302, 307, 302, 120 ಬಿ, 419, 420, 467 ಮತ್ತು 468 ಅಡಿ ದೂರು ದಾಖಲು ಮಾಡಿಕೊಂಡಿದ್ದರು.

ಇದನ್ನೂ ಓದಿ: Crime news: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ತಂದೆ - ಮಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.