ETV Bharat / bharat

ಯೋಗಿ ಖಡಕ್​ ನಡೆ.. ಮಾಫಿಯಾ ಡಾನ್​ ಅತಿಕ್​ ಅಹ್ಮದ್​ನ 123 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ

ಅಪರಾಧ ಚಟುವಟಿಕೆಯಿಂದ ಬಂದ ಅಕ್ರಮ ಹಣದಿಂದ ಅತಿಕ್​ ಅಹ್ಮದ್​ 123 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದರು. ಗಂಗಾ ನದಿ ತೀರದಲ್ಲೂ ಈತ ಫಲವತ್ತಾದ ಭೂಮಿಯನ್ನು ಖರೀದಿಸಿದ್ದರು ಎಂದು ನಗರ ಎಸ್​ಪಿ ಸಂತೋಷ್​ ಕುಮಾರ್​ ಮೀನಾ ತಿಳಿಸಿದ್ದಾರೆ.

ಉತ್ತರ ಪ್ರದೇಶ: ಮಾಫಿಯಾ ಡಾನ್​ ಅತಿಕ್​ ಅಹ್ಮದ್​ನ 123 ಕೋಟಿ ರೂ ಅಕ್ರಮ ಆಸ್ತಿ ಜಪ್ತಿ
uttar-pradesh-mafia-don-atiq-ahmeds-rs-123-crore-illegal-property-seized
author img

By

Published : Nov 24, 2022, 12:52 PM IST

ಪ್ರಯಾಗ್​ರಾಜ್(ಉತ್ತರ ಪ್ರದೇಶ)​: ಸಿಎಂ ಯೋಗಿ ಆದಿತ್ಯಾನಾಥ್​ ಅವರ ಸರ್ಕಾರ ರೌಡಿಗಳಿಗೆ ಬಿಸಿ ಮುಟ್ಟಿಸುತ್ತಲೇ ಬಂದಿದೆ. ಇದೀಗ ಮಾಫಿಯಾ ಡಾನ್ ಅತೀಕ್ ಅಹ್ಮದ್​ಗೆ ಶಾಕ್​ ನೀಡಿದೆ. ಅತಿಕ್​ ಅವರಿಗೆ ಸೇರಿದ 123 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಜಪ್ತಿ ಮಾಡಿದ್ದಾರೆ. ಗ್ಯಾಂಗ್​ಸ್ಟರ್​ ಕಾಯ್ದೆ ಅಡಿ ಅತಿಕ್ ಅಹ್ಮದ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಅಕ್ರಮ ದಾರಿಯ ಮೂಲಕ ಮಾಫಿಯಾ ಡಾನ್​ ಅತಿಕ್​ ಅಹ್ಮದ್​ ಸಂಪಾದಿಸಿದ ಆಸ್ತಿಯ ವಿಚಾರಣೆ ನಡೆಸುವಂತೆ ಈ ಮೊದಲು ಪ್ರಯಾಗ್​ರಾಜ್​ ಡಿಎಂ ಸಂಜಯ್​ ಕುಮಾರ್​ ಕತ್ರಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ವಿಚಾರಣೆ ವರದಿ ಮಂಡಿಸಿದ ಬಳಿಕ ರಾಜಕಾರಣಿಯೂ ಆಗಿರುವ ಡಾನ್​ ಅತಿಕ್​ ಅಹ್ಮದ್​ ಅವರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಅಪರಾಧ ಚಟುವಟಿಕೆಗಳಿಂದ ಸಂಪಾದಿಸಿದ ಹಣದಿಂದಾಗಿ ಅತಿಕ್​ ಅಹ್ಮದ್,​ 123 ಕೋಟಿ ಮೌಲ್ಯದ ಮತ್ತು 6. 5 ಕೋಟಿಯ ಆಸ್ತಿಯನ್ನು ಪ್ರಯಾಗ್​ರಾಜ್​ನ ಫೌಲ್ಪುರ್​ ಮತ್ತು ಕಸರಿ ಮಸರಿಯಲ್ಲಿ ಖರೀದಿಸಿದ್ದರು. ಇದರ ಜೊತೆಗೆ ಪ್ರಯಾಗ್​ರಾಜ್​ನ ಝಾನ್ಸಿಯ ಹವೇಲಿಯಲ್ಲಿ 76 ಮತ್ತು 47 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇವರು ಹೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಹೊರತಾಗಿ ಕಸರಿ ಮಸರಿ ಪ್ರದೇಶದಲ್ಲಿ ಅತಿಕ್​ ಅವರಿಗೆ ಸೇರಿದ ಮೂರನೇ ಅಕ್ರಮ ಅಸ್ತಿಯನ್ನು ಜಪ್ತಿ ಮಾಡಲಾಗಿದ್ದು, ಇದರ ಮಾರುಕಟ್ಟೆ ಬೆಲೆ 6 ಕೋಟಿ ಇದೆ ಎಂದು ಮೂಲಗಳು ತಿಳಿಸಿದೆ.

ಅಪರಾಧ ಚಟುವಟಿಕೆಯಿಂದ ಬಂದ ಅಕ್ರಮ ಹಣದಿಂದ ಅತಿಕ್​ ಅಹ್ಮದ್​ 123 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದರು. ಗಂಗಾ ನದಿ ತೀರ ಪ್ರದೇಶದಲ್ಲೂ ಇವರು ಫಲವತ್ತಾದ ಭೂಮಿಯನ್ನು ಖರೀದಿಸಿದ್ದರು ಎಂದು ನಗರ ಎಸ್​ಪಿ ಸಂತೋಷ್​ ಕುಮಾರ್​ ಮೀನಾ ತಿಳಿಸಿದ್ದಾರೆ.

ಇದನ್ನೂ ಓದಿ: ಬಹುಭಾಷಾ ನಟ ಕಮಲ್​ ಹಾಸನ್​ ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.