ಕಾನ್ಪುರ್ (ಉತ್ತರ ಪ್ರದೇಶ): ಕ್ರೈಂ ಬ್ರಾಂಚ್ ಮತ್ತು ಕಾನ್ಪುರ್ ಪೊಲೀಸರ ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಕ್ಷ್ಮೀಪುರದಲ್ಲಿರುವ 20 ವರ್ಷದ ಯುವತಿಯೊಬ್ಬಳ ಮನೆಯೊಂದರಿಂದ ಶುಕ್ರವಾರ ಕನಿಷ್ಠ 288 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಚ್ಚಾ ಬಾಂಬ್ಗಳಲ್ಲಿ ವಶಪಡಿಸಿಕೊಂಡಿದ್ದರಿಂದ ದೊಡ್ಡ ಸಂಭವೀಯ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಶಿ ರಾಶಿ ಸ್ಫೋಟಕಗಳನ್ನು ಪತ್ತೆ ಮಾಡಿದ ಬಳಿಕ ಯುವತಿಯನ್ನು ಬಂಧಿಸಲಾಯಿತು. ಗುರುವಾರ ಬಂಧಿತ 16 ಕಚ್ಚಾ ಬಾಂಬ್‌ಗಳನ್ನು ಹೊತ್ತೊಯ್ಯುತ್ತಿದ್ದ ವ್ಯಕ್ತಿಯೊಂದಿಗೆ ಬಂಧಿತ ಈ ಯುವತಿ ಸಂಬಂಧ ಹೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬೇರೆಡೆ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಬದರ್ ಜಿಲ್ಲೆಯ ನಿವಾಸಿ ವಾಸು ಸೋಂಕರ್ ಎಂಬಾತನನ್ನು ಪೊಲೀಸರು ಗುರುವಾರ 16 ಕಚ್ಚಾ ಬಾಂಬ್‌ಗಳೊಂದಿಗೆ ಬಂಧಿಸಿದ್ದಾರೆ. ವಿಚಾರಣೆ ವೇಳೆ ಸೋಂಕರ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕ್ರೈಂ ಬ್ರಾಂಚ್‌ನೊಂದಿಗೆ ಲಕ್ಷ್ಮೀಪುರದಲ್ಲಿರುವ ವಾಸು ಅವರ ಗೆಳತಿ 20 ವರ್ಷದ ಟೀನಾ ಗುಪ್ತಾ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ಆಕೆಯ ನಿವಾಸದಿಂದ ಕನಿಷ್ಠ 288 ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸ್ಥಳದಲ್ಲೇ ಅವಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಚಮಂಗಂಜ್ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಮರನಾಥ್ ವಿಶ್ವಕರ್ಮ ಈ ಕುರಿತು ಮಾತನಾಡಿ, ವಾಸು ಸೋಂಕರ್ ಅವರ ವಿಚಾರಣೆಯ ಸಮಯದಲ್ಲಿ, ಲಕ್ಷ್ಮೀಪುರದಲ್ಲಿರುವ ತನ್ನ ಗೆಳತಿಯ ಸ್ಥಳದಲ್ಲಿ ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಕ್ರೈಂ ಬ್ರಾಂಚ್ ತಂಡದೊಂದಿಗೆ ಪೊಲೀಸರು ಟೀನಾ ಗುಪ್ತಾ ಅವರ ಮನೆ ಮೇಲೆ ದಾಳಿ ನಡೆಸಿ ಕಚ್ಚಾ ಬಾಂಬ್‌ಗಳನ್ನು ಅಧಿಖಾರಿಗಳು ವಶಪಡಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಕೀಲ ಉಮೇಶ್ ಪಾಲ್ ಹತ್ಯೆಗೆ ಕಚ್ಚಾ ಬಾಂಬ್‌ಗಳನ್ನು ಬಳಸಲಾಗಿದೆ. ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಾಥಮಿಕ ಸಾಕ್ಷಿಯಾಗಿದ್ದ ಉಮೇಶ್ ನನ್ನು ಫೆ.24ರಂದು ತನ್ನ ಪೊಲೀಸ್ ಗನ್ ಮ್ಯಾನ್ ಜತೆ ಸೇರಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಶಂಕಿತ ಗುಡ್ಡು ದಾಳಿಯ ವೇಳೆ ಕಚ್ಚಾ ಬಾಂಬ್ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲೂ ಕಚ್ಚಾ ಬಾಂಬ್ ವಶಕ್ಕೆ.. ಇದಕ್ಕೂ ಮೊದಲು, ನವೆಂಬರ್ 24, 2022 ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮನೆಯೊಂದರಿಂದ ಕನಿಷ್ಠ ಆರು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್ ಅಧಿಕಾರಿಗಳು ಪುರ್ಬಾಚಲ್ ಶ್ಯಾಮ್‌ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಮನೆಯನ್ನು ಬಾಡಿಗೆಗೆ ಬಿಡಲಾಗಿತ್ತು.
ಇದನ್ನೂ ಓದಿ..ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಟ್ರಕ್: ಸ್ಥಳದಲ್ಲೇ ಎಂಟು ಜನರ ದರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ