ನವದೆಹಲಿ: ಭಾರತ, ಚೀನಾ ಸಂಘರ್ಷದ ಮಧ್ಯೆಯೇ ಭಾರತೀಯ ನೌಕಾಪಡೆಗೆ ಅಮೆರಿಕ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಒದಗಿಸಲು ಮುಂದಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರಗಳು ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು, ಉಭಯ ರಾಷ್ಟ್ರಗಳ ಮಧ್ಯದ ಮಿಲಿಟರಿ ಒಪ್ಪಂದದ ಪ್ರಕಾರ 3,800 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಯುಎಸ್ ನೀಡಲಿದೆ. ಸದ್ಯಕ್ಕೆ ಅಮೆರಿಕ ತನ್ನ ಸ್ವಂತ ಖರ್ಚಿನಿಂದ ಭಾರತದ ಯುದ್ಧನೌಕೆಗಳನ್ನು 127 ಮಧ್ಯಮ ಶ್ರೇಣಿಯ ಗನ್ಗಳಿಂದ ಶಸ್ತ್ರಸಜ್ಜಿತಗೊಳಿಸಲಿದೆ.
ಭಾರತೀಯ ನೌಕಾಪಡೆಗೆ ಒದಗಿಸಬೇಕಾದ ಮೊದಲ ಮೂರು ಶಸ್ತ್ರಸಜ್ಜಿತ ನೌಕೆಗಳು ಅಮೆರಿಕಾದ ನೌಕಾಪಡೆಯ ದಾಸ್ತಾನುಗಳಿಂದ ಆಗಿದ್ದು, ಆದಷ್ಟು ಬೇಗ ತಯಾರಾಗುತ್ತವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಪಿ-8 ಐ ವಿಮಾನದಲ್ಲಿರುವ ರಷ್ಯಾದ ಉಪಕರಣಗಳನ್ನೂ ಸಹ ಬದಲಾಯಿಸಲಾಗಿದೆ. ಒಂದೇ ಸಮಯದಲ್ಲಿ ಹೆಚ್ಚು ಕಾರ್ಯಗಳನ್ನು ನಿರ್ವಹಿಸುವ ಹೆಲಿಕಾಪ್ಟರ್ಗಳನ್ನು ಸಹ ಅಮೆರಿಕಾದಿಂದ ತರಿಸಿಕೊಳ್ಳಲಾಗುತ್ತಿದೆ.
ಅಮೆರಿಕನ್ ಪ್ರಿಡೇಟರ್ ಡ್ರೋನ್‌ಗಳನ್ನು ಅಮೆರಿಕದ ಸಂಸ್ಥೆ ಜನರಲ್ ಅಟಾಮಿಕ್ಸ್‌ನಿಂದ ನೌಕಾಪಡೆಯು ಗುತ್ತಿಗೆಗೆ ಪಡೆದಿದೆ. ಇದರ ಭಾಗವಾಗಿ ಎರಡು ಮಾನವ ರಹಿತ ವಿಮಾನಗಳು ಸೇನೆಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ