ETV Bharat / bharat

'ಇದು ಯದ್ಧದ ಯುಗವಲ್ಲ' ಮೋದಿ G20 ಜಂಟಿ ಘೋಷಣೆಗೆ ಜೋ ಬೈಡನ್​ ಶ್ಲಾಘನೆ - G20 ಭಾರತದ ನೇತೃತ್ವ

ಉಕ್ರೇನ್-ರಷ್ಯಾ ಸಂಘರ್ಷದ ನಡುವೆಯೂ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ'ಇದು ಯುದ್ಧದ ಯುಗವಲ್ಲ' ಮೋದಿ ಹೇಳಿಕೆಯಿಂದ ಜಿ20 ಶೃಂಗಸಭೆ ಯಶಸ್ವಿಯಾಗಿದೆ ಎಂದು ಅಮೇರಿಕಾ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ತಿಳಿಸಿದ್ದಾರೆ.

Prime Minister Narendra Modi at the G20 Summit
ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
author img

By

Published : Nov 19, 2022, 1:31 PM IST

ವಾಷಿಂಗ್ಟನ್ (ಯುಎಸ್): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ‘ಇದು ಯುದ್ಧದ ಯುಗವಲ್ಲ’ ​​ಎಂಬ ಸಂದೇಶ ರವಾನಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಭಾಯಿಸಿದ ಪಾತ್ರವನ್ನು ಅಮೆರಿಕದ ಶ್ವೇತಭವನವು ಶುಕ್ರವಾರ ಶ್ಲಾಘಿಸಿದೆ.

ಉಕ್ರೇನ್-ರಷ್ಯಾ ಸಂಘರ್ಷದ ನಡುವೆಯೂ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಜಂಟಿ ಸಮಾರಂಭದಲ್ಲಿ 'ಇಂದು ಯುದ್ಧದ ಯುಗವಲ್ಲ' ಎಂಬ ಮೋದಿ ಹೇಳಿಕೆಯಿಂದ ಜಿ20 ಶೃಂಗಸಭೆ ಯಶಸ್ವಿಯಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ. ಈ ಕುರಿತಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪಿಎಂ ಮೋದಿ ಹಾಗೂ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಜತೆಗೆ ಮಾತನಾಡುವ ವೇಳೆ ಜಂಟಿ ಘೋಷಣೆ ಕುರಿತು ಭಾರತ ನಿರ್ವಹಿಸಿರುವ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೃಂಗಸಭೆಯ ಘೋಷಣೆ ವಿಚಾರದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಜೀನ್-ಪಿಯರ್ ಹೇಳಿದ್ದಾರೆ.

ಉಕ್ರೇನ್-ರಷ್ಯಾ ಸಂಘರ್ಷದ ಹಿನ್ನೆಲೆ ಹಿಂದಿನ ಸೆಪ್ಟೆಂಬರ್‌ನಲ್ಲಿ ಸಮರ್‌ಕಂಡ್‌ನಲ್ಲಿ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ನೇತೃತ್ವದಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪುಟಿನ್‌ಗೆ ನೀಡಿದ ಹೇಳಿಕೆಗೆ, ಇದು ಯುದ್ಧದ ಯುಗವಲ್ಲ ಎಂದು ಮೋದಿ ಘೋಷಿಸಿದ್ದು, ಇದು ಇಂದಿನ ಜಗತ್ತಿಗೆ ಅವಶ್ಯವಿದೆ ಎನ್ನಲಾಗಿದೆ.

G20 ಜಂಟಿ ಘೋಷಣೆ ಪ್ರಕಾರ, ಇದು ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಪ್ರತಿಪಾದಿಸಿದ ಉದ್ದೇಶ ಮತ್ತು ತತ್ವಗಳನ್ನು ರಕ್ಷಿಸುವುದು. ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ರಕ್ಷಣೆ ಮತ್ತು ಮೂಲಸೌಕರ್ಯ ಸೇರಿದಂತೆ ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬೆದರಿಕೆ ಸ್ವೀಕಾರಾರ್ಹವಲ್ಲ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರ, ಮತ್ತು ಬಿಕ್ಕಟ್ಟುಗಳನ್ನು ಬಗೆಹರಿಸುವ ಪ್ರಯತ್ನ, ಹಾಗೆಯೇ ರಾಜತಾಂತ್ರಿಕತೆ ಮತ್ತು ಸಂಭಾಷಣೆಯೂ ಮುಖ್ಯವಾಗಿದೆ.

ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ವಿಸ್ತೃತ ಮಾಹಿತಿ ನೀಡಿ, ಪ್ರಧಾನಿ ಮೋದಿಯವರ ಸಂದೇಶವು ಎಲ್ಲ ನಿಯೋಗಗಳ ವಿಭಾಗದಲ್ಲೂ ಆಳವಾಗಿ ಪ್ರತಿಧ್ವನಿಸಿತು. ವಿವಿಧ ಪಕ್ಷಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘೋಷಣೆ ಫಲಿತಾಂಶವೂ ಯಶಸ್ವಿ ಸಂಧಾನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ. ಜಿ 20 ಈ ವರ್ಷದ ಕರಡು ರಚನೆಗೆ ಭಾರತವು "ರಚನಾತ್ಮಕ" ಕೊಡುಗೆ ನೀಡಿದೆ ಎಂದು ಕ್ವಾತ್ರಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳನ್ನು ಎದುರಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರವನ್ನು ಶ್ಲಾಘಿಸಿದರು. G20 ಭಾರತದ ನೇತೃತ್ವವನ್ನು ಸ್ಥಾನಕ್ಕೆ ಬೆಂಬಲಿಸಿರುವ US ಬೆಂಬಲವನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಪುನರುಚ್ಚರಿಸಿದರು. ಪ್ರಸ್ತುತ ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳು, ಚೇತರಿಸಿಕೊಳ್ಳುವ ಜಾಗತಿಕ ಆರ್ಥಿಕತೆ ನಿರ್ಮಿಸುವ ಪ್ರಯತ್ನಗಳನ್ನು ಪರಿಹರಿಸಿದ್ದೇವೆ ಎಂದು ಜೀನ್-ಪಿಯರ್ ಹೇಳಿದರು.

ರಸಗೊಬ್ಬರ ಬಿಕ್ಕಟ್ಟು ತಡೆಗೆ ಪರಸ್ಪರ ಒಪ್ಪಂದ ಸಹಕಾರಿ: G20 ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಬಾಂಧವ್ಯ, ಸಲಹೆ ಬಹಳ ಮುಖ್ಯವಾಗಿದೆ. ಮುಂದಿನ ವರ್ಷ ಭಾರತದ G20 ನೇತೃತ್ವವನ್ನು ವಹಿಸಿಕೊಂಡಿದ್ದು, ಬೆಂಬಲಿಸುವ ಜತೆಗೆ ಬರುವಿಕೆಗೆ ಕಾಯುತ್ತಿದ್ದೇವೆ. ಕೊರೊನಾ ಸಮಯದಲ್ಲಿ ಭಾರತವು ತನ್ನ 1.3 ಬಿಲಿಯನ್ ನಾಗರಿಕರ ಆಹಾರ ಭದ್ರತೆ ನಿಭಾಯಿಸಿದ್ದು, ಖಾತ್ರಿಪಡಿಸಿತು. ಇದರ ಜತೆಗೆ ಹಲವು ದೇಶಗಳಿಗೆ ಆಹಾರ ಧಾನ್ಯ ಪೂರೈಸಿತ್ತು. ಆದರೆ ರಸಗೊಬ್ಬರ ಎಂಬ ಕೊರತೆಯೂ ಇಂದಿನ ದಿನಗಳಲ್ಲಿ ಆಹಾರ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಇಂದಿನ ರಸಗೊಬ್ಬರ ನಾಳಿನ ಆಹಾರ ಬಿಕ್ಕಟ್ಟಿಗೆ ಪರಿಹಾರ ಹೊಂದಿರುವುದಿಲ್ಲ. ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪಳಿ ಸ್ಥಿರ ಮತ್ತು ಖಾತ್ರಿಪಡಿಸಿಕೊಳ್ಳಲು ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು. ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗೆ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ. ರಾಗಿಯಂಥ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮರು ಜನಪ್ರಿಯಗೊಳಿಸುತ್ತಿದ್ದೇವೆ ಎಂದು ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿಯವರ ಈ ಘೋಷಣೆ ಅಪೌಷ್ಟಿಕತೆ ಮತ್ತು ಹಸಿವಿನಂಥ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಬಲ್ಲದು. ನಾವೆಲ್ಲರೂ ಮುಂದಿನ ವರ್ಷ ಅಂತಾರಾಷ್ಟ್ರೀಯ ರಾಗಿ ವರ್ಷವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನೇಪಾಳ ಚುನಾವಣೆ: ಇಂಡೋ-ನೇಪಾಳ ಗಡಿ ಇಂದು ಮಧ್ಯರಾತ್ರಿಯಿಂದಲೇ 72 ಗಂಟೆ ಬಂದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.