ETV Bharat / bharat

100 ಕೋಟಿ ವ್ಯಾಕ್ಸಿನೇಷನ್​ ಪೂರೈಸಿದ ಭಾರತ... ಐತಿಹಾಸಿಕ ಸಾಧನೆಗೆ ಬೆನ್ನುತಟ್ಟಿದ ಅಮೆರಿಕ, ಇಸ್ರೇಲ್​​ - ಭಾರತ 100 ಕೋಟಿ ವ್ಯಾಕ್ಸಿನ್​

ಕೋವಿಡ್​ ವ್ಯಾಕ್ಸಿನೇಷನ್​ ನೀಡುವ ವಿಚಾರದಲ್ಲಿ ಭಾರತ ಇದೀಗ ಐತಿಹಾಸಿಕ ಸಾಧನೆ ಮಾಡಿದ್ದು, 100 ಕೋಟಿ ಲಸಿಕೆ ನೀಡಿರುವ ದಾಖಲೆ ಬರೆದಿದೆ. ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Covid-19
Covid-19
author img

By

Published : Oct 21, 2021, 3:20 PM IST

Updated : Oct 21, 2021, 3:52 PM IST

ನವದೆಹಲಿ: ಕೊರೊನಾ ವೈರಸ್​ ವಿರುದ್ಧದ ಮಹಾಯುದ್ಧದಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಕಳೆದ 9 ತಿಂಗಳಲ್ಲಿ ಬರೋಬ್ಬರಿ 100 ಕೋಟಿ ಕೋವಿಡ್​ ವ್ಯಾಕ್ಸಿನೇಷನ್​ ಡೋಸ್​​ ನೀಡುವ ಮೂಲಕ ಹೊಸ ರೆಕಾರ್ಡ್​ ನಿರ್ಮಾಣ ಮಾಡಿದೆ. ಇದಕ್ಕೆ ಈಗಾಗಲೇ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತ ಸರ್ಕಾರದ ಈ ಐತಿಹಾಸಿಕ ಸಾಧನೆಗೆ ಇದೀಗ ಯುಎಸ್​​ ರಾಯಭಾರಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿರುವ ಅಮೆರಿಕ​​ ರಾಯಭಾರಿ (US Embassy India) 1 ಬಿಲಿಯನ್​ ಕೋವಿಡ್​ ವ್ಯಾಕ್ಸಿನೇಷನ್​ ಪೂರೈಕೆ ಮಾಡಿದಕ್ಕಾಗಿ ಅಭಿನಂದನೆಗಳು. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಹೊಸದೊಂದು ಮೈಲಿಗಲ್ಲು ನಿರ್ಮಾಣ ಮಾಡಿದೆ ಎಂದಿದೆ.

  • Congratulations to India on administering its 1 billionth dose of COVID-19 vaccine today – a major milestone in the world’s efforts to combat the global pandemic. #VaccineCentury #CongratulationsIndia

    — U.S. Embassy India (@USAndIndia) October 21, 2021 " class="align-text-top noRightClick twitterSection" data=" ">

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಇಡೀ ಪ್ರಪಂಚವೇ ಭಾಗಿಯಾಗಿದ್ದು, ಅನೇಕ ದೇಶಗಳು ಮಹಾಮಾರಿ ಹೊಡೆದೊಡಿಸಲು ಇನ್ನಿಲ್ಲದ ಕ್ರಮ ಕೈಗೊಂಡಿವೆ. ಮಹಾಮಾರಿ ವಿರುದ್ಧ ರಾಮಬಾಣವಾಗಿರುವ ವ್ಯಾಕ್ಸಿನೇಷನ್​ ನೀಡಲು ಎಲ್ಲ ರಾಷ್ಟ್ರಗಳು ಮೊದಲ ಆದ್ಯತೆ ನೀಡಿದ್ದು, ಈಗಾಗಲೇ ಚೀನಾ 1 ಬಿಲಿಯನ್ ವ್ಯಾಕ್ಸಿನ್​ ನೀಡಿದ್ದು, ಇದೀಗ ಭಾರತ ಕೂಡ ಈ ಸಾಧನೆ ಮಾಡಿದೆ.

ಇಸ್ರೇಲ್​ ಪ್ರಧಾನಿ ಅಭಿನಂದನೆ

100 ಕೋಟಿ ಕೋವಿಡ್​ ವ್ಯಾಕ್ಸಿನೇಷನ್​ ನೀಡಿರುವ ಭಾರತದ ಸಾಧನೆಗೆ ಇಸ್ರೇಲ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ನಿಮ್ಮ ನಿರ್ಧಾರ ಮಹತ್ವದ ಮೈಲುಗಲ್ಲು ಸಾಧಿಸಿದೆ ಎಂದು ಅಲ್ಲಿನ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ.

  • Congratulations to PM Modi on leading India's successful #COVID19 vaccination campaign that has now administered more than 1 billion vaccines to the Indian people. These life-saving vaccines are helping us all defeat the global pandemic: Naftali Bennett, PM of Israel

    (File pic) pic.twitter.com/RDzL1H3w9g

    — ANI (@ANI) October 21, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಭಾರತ ವಿಶ್ವಕಪ್​ ಗೆಲ್ಲುವ ಪ್ರಬಲ ಸ್ಪರ್ಧಿ, ಬಲಶಾಲಿ ತಂಡ ಹೊಂದಿದೆ ಎಂದ ಸ್ಟೀವ್ ಸ್ಮಿತ್

ಭಾರತದಲ್ಲಿ 100 ಕೋಟಿ ಕೊರೋನಾ ಲಸಿಕೆ ಡೋಸ್ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ವಿಮಾನಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಇದರ ಬಗ್ಗೆ ಘೋಷಣೆ ಮಾಡಲಾಗಿದೆ.

Last Updated : Oct 21, 2021, 3:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.