ETV Bharat / bharat

ಅತೀಕ್​ ಅಹ್ಮದ್​​​​​​​​​​​​​​ ಪತ್ನಿ ಇರುವ ಸ್ಥಳದ ಜಾಡು ಕಂಡು ಹಿಡಿದ ಪೊಲೀಸರು.. ಬಂಧನಕ್ಕಾಗಿ ತೀವ್ರ ಶೋಧ

ಅತೀಕ್ ಅಹ್ಮದ್‌, ಪತ್ನಿ ಶೈಸ್ತಾ ಪರ್ವೀನ್​ ಬಂಧಿಸಲು ಪ್ರಯಾಗರಾಜ್ ಪೊಲೀಸರು ಮುಂದಾಗಿದ್ದಾರೆ.

Atiq Ahmed wife Shaista Parveen
ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್
author img

By

Published : Apr 18, 2023, 7:03 PM IST

ಪ್ರಯಾಗರಾಜ್ (ಉತ್ತರ ಪ್ರದೇಶ) : ಮಾಜಿ ಶಾಸಕ, ಸಂಸದ ಹಾಗೂ ಮಾಫಿಯಾ ಡಾನ್​ ಅತೀಕ್ ಅಹ್ಮದ್, ಪತ್ನಿ ಶೈಸ್ತಾ ಪರ್ವೀನ್ ಕಳೆದ 50ಕ್ಕೂ ಹೆಚ್ಚು ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಈಗ ಅವರು ಇರಬಹುದಾದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಅವರ ಸುಳಿವು ಈವರೆಗೂ ಸಿಕ್ಕಿರಲಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಅತೀಕ್​ ಅವರ ಪತ್ನಿಗಾಗಿ ಬಲೆ ಬೀಸಿದ್ದ ಉತ್ತರಪ್ರದೇಶ ಪೊಲೀಸರು, ಪ್ರಯಾಗ್‌ರಾಜ್‌ನ ಭರೇತಾ ಗ್ರಾಮದಲ್ಲಿ ಶೈಸ್ತಾ ಇರುವ ಮಾಹಿತಿ ಪಡೆದುಕೊಂಡಿದ್ದಾರೆ. ಈ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದು, ಅವರು ಇರಬಹುದಾದ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಫ್ರೆಬವರಿ 24 ರಂದು ಉಮೇಶ್​ ಪಾಲ್​ ಹತ್ಯೆಯ ನಂತರ ಅತೀಕ್​ ಅಹ್ಮದ್​ ಪತ್ನಿ ಶೈಸ್ತಾ ಪರ್ವೀನ್​ ನಾಪತ್ತೆಯಾಗಿದ್ದರು. ರಾಜ್ಯದ ವಿವಿಧೆಡೆ ಪೊಲೀಸರು ಹಲವು ತಂಡಗಳನ್ನು ರಚನೆ ಮಾಡಿಕೊಂಡು ತೀವ್ರ ಶೋಧ ಕೈಗೊಂಡಿದ್ದಾರೆ. ಕಳೆದ 53 ದಿನಗಳಿಂದ ಸತತ ಪ್ರಯತ್ನಪಟ್ಟರೂ ಅವರ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಆದರೀಗ ಅವರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದಕ್ಕೂ ಹಿಂದೆ ಶೈಸ್ತಾ ಮಗ ಅಸದ್​ ಎಸ್​ಟಿಎಫ್​ನ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದ, ಆಗಲಾದರೂ ಮಗನ ಅಂತ್ಯಕ್ರಿಯೆಯಲ್ಲಿ ಪರ್ವೀನ್​ ಭಾಗವಹಿಸುತ್ತಾರೆ ಎಂದು ಪೊಲೀಸರು ಬಲವಾಗಿ ನಂಬಿದ್ದರು. ಆದರೆ ಪೊಲೀಸರ ನಿರೀಕ್ಷೆ ಸುಳ್ಳಾಗಿತ್ತು. ಶೈಸ್ತಾ ಮಗನ ಅಂತ್ಯ ಕ್ರಿಯೆಯತ್ತ ಸುಳಿದಿರಲೇ ಇಲ್ಲ.

ಇದನ್ನೂ ಓದಿ : ಅತೀಕ್ ಅಹ್ಮದ್​ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್​ ಸ್ಫೋಟ

ಇದಾದ ಮೂರು ದಿನಗಳ ಹಿಂದೆ ಅಂದರೆ, ಏಪ್ರಿಲ್​ 15ರ ರಂದು ಅತೀಕ್​ ಅಹ್ಮದ್​ ಮತ್ತು ಆತನ ಸಹೋದರ ಅಶ್ರಫ್ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುವ ವೇಳೆ ಪೊಲೀಸರ ಎದುರೇ ಭೀಕರ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಪತಿ ಹತ್ಯೆ ವಿಚಾರ ಗೊತ್ತಾಗಿ ಹಾಗೂ ಅತೀಕ್​​, ಅಶ್ರಫ್​ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕಾದರೂ ಶೈಸ್ತಾ ಬಂದೇ ಬರುತ್ತಾರೆ ಎಂಬ ಸಣ್ಣ ನಂಬಿಕೆ ಪೊಲೀಸರದ್ದಾಗಿತ್ತು. ಆಗಲೂ ಪರ್ವಿನ್​​​ ಅಡಗು ತಾಣದಿಂದ ಹೊರ ಬರಲೇ ಇಲ್ಲ.

ಇದರಿಂದ ಪ್ರಯಾಗರಾಜ್ ಪೊಲೀಸರು ಕಂಗಾಲಾಗಿ ಹೋಗಿದ್ದು, ಶೈಸ್ತಾ ಸುಳಿವು ಕೊಟ್ಟವರಿಗೆ 50,000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು. ಬಳಿಕ ಪೊಲೀಸರ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದರು. ಈ ನಡುವೆ ಇಂದು ಶೈಸ್ತಾ ಪರ್ವೀನ್ ಭರೇತಾ ಗ್ರಾಮದಲ್ಲಿ ಅಡಗಿಕೊಂಡಿರುವ ಸಂಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಭರೇತಾ ಗ್ರಾಮ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳನ್ನು ಸುತ್ತುವರೆದಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮೋದಿ ವಿರುದ್ಧ ಸ್ಪರ್ಧಿಸಿ 855 ವೋಟ್‌ ಪಡೆದಿದ್ದ ಅತೀಕ್ ಅಹ್ಮದ್; ಈತನ ಮೇಲಿತ್ತು 101 ಪ್ರಕರಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.