ETV Bharat / bharat

ಇದು ವಸಾಹತುಶಾಹಿ ಯುಗವೇ.. ವ್ಯಕ್ತಿಯ ಕೈಯಿಂದ ಕಾಲಿನ ಕವರ್​ ತೆಗೆಸಿದ ಯುಪಿ ಸಚಿವೆ ವಿರುದ್ಧ ಭಾರಿ ಟೀಕೆ - UP minister Baby Rani Maurya reminds of colonial era

ಉತ್ತರಪ್ರದೇಶ ಉನ್ನಾವೋದಲ್ಲಿನ ಪೌಷ್ಠಿಕ ಆಹಾರ ಘಟಕಕ್ಕೆ ಭೇಟಿ ನೀಡಿದ ವೇಳೆ ಸಚಿವೆ ಬೇಬಿ ರಾಣಿ ಮೌರ್ಯ ಅವರ ಕಾಲಿಗಿದ್ದ ಪ್ಲಾಸ್ಟಿಕ್​ ಕವರ್​ ಅನ್ನು ವ್ಯಕ್ತಿಯೊಬ್ಬರ ಕೈಯಿಂದ ತೆಗೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿ ಸಚಿವೆಯ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಇದು ಯೋಗಿ ಸರ್ಕಾರಕ್ಕೂ ಮುಜುಗರವನ್ನುಂಟು ಮಾಡಿದೆ.

up-minister-removed-the-foot-cover
ಕಾಲಿನ ಕವರ್​ ತೆಗೆಸಿದ ಯುಪಿ ಸಚಿವೆ
author img

By

Published : May 14, 2022, 8:43 PM IST

ಉನ್ನಾವೋ: ಉತ್ತರಪ್ರದೇಶ ಕ್ಯಾಬಿನೆಟ್ ಸಚಿವೆ ಬೇಬಿ ರಾಣಿ ಮೌರ್ಯ ಅವರು ವ್ಯಕ್ತಿಯೊಬ್ಬರಿಂದ ಕಾಲಿಗೆ ಧರಿಸಿದ ಶೂ ಕವರ್​ ಅನ್ನು ತೆಗೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.

  • भाजपा की मंत्री बेबी रानी मौर्या की ठाठ देखिये, सत्ता के नशे में चूर महोदया ने उन्नाव में पुष्टाहार उत्पादन इकाई का निरीक्षण करने के बाद अपने जूते के डिस्पोजल कवर भी वहां के कर्मियों से उतरवाए।

    सत्ताधारियों की ये मानसिकता उनके संगठन के आदर्शों को प्रदर्शित कर रही है।@BJP4UP pic.twitter.com/gcc7lZBfmB

    — Rashtriya Lok Dal (@RLDparty) May 14, 2022 " class="align-text-top noRightClick twitterSection" data=" ">

ಉನ್ನಾವೋ ನಗರದಲ್ಲಿರುವ ಪೌಷ್ಟಿಕ ಆಹಾರ ಘಟಕಕ್ಕೆ ಸಚಿವೆ ಬೇಬಿ ರಾಣಿ ಮೌರ್ಯ ಅವರು ಭೇಟಿ ನೀಡಿ ಹೊರಬಂದಾಗ ಕಾಲಿಗೆ ತೊಟ್ಟಿದ್ದ ಕವರ್​ ಅನ್ನು ಘಟಕದ ಉದ್ಯೋಗಿಯೊಬ್ಬ ತೆಗೆದಿದ್ದಾನೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸಚಿವರ ಈ ವರ್ತನೆ ಇದೀಗ ವಿವಾದ ಎಬ್ಬಿಸಿದೆ.

ಉತ್ತರಾಖಂಡದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿರುವ ಸಚಿವರ ಬೇಬಿ ರಾಣಿ ಮೌರ್ಯ ಅವರ ಈ ವರ್ತನೆಯ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಸಚಿವರ ಈ ವರ್ತನೆ ವಸಾಹತುಶಾಹಿ ಯುಗವನ್ನು ನೆನಪಿಸುತ್ತಿದೆ ಎಂದು ಟೀಕಿಸಿವೆ.

ಅಲ್ಲದೇ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎಸ್‌ಪಿ ಮತ್ತು ಆರ್‌ಎಲ್‌ಡಿ ಪಕ್ಷಗಳು ಸಚಿವರ ವರ್ತನೆಯ ವಿರುದ್ಧ ಹರಿಹಾಯ್ದಿವೆ. ಅಧಿಕಾರದ ಅಮಲಿನಲ್ಲಿರುವ ಸಚಿವರು ಅಹಂಕಾರಿಗಳಾಗಿದ್ದಾರೆ. ಕಾಲಿಗೆ ಹಾಕಿದ ಕವರ್​ ಅನ್ನು ವ್ಯಕ್ತಿಯೊಬ್ಬರಿಂದ ತೆಗೆಸಿದ್ದಕ್ಕೆ ಕ್ಷಮೆ ಕೋರಬೇಕು. ಇದು ಅಕ್ಷಮ್ಯ ಅಪರಾಧ ಎಂದು ಟೀಕಾಪ್ರಹಾರ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲೂ ಕೂಡ ಸಚಿವರ ಈ ನಡೆಗೆ ಭಾರಿ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಸಚಿವರು ಮೌನವಹಿಸಿದ್ದು, ಯಾವುದೇ ಸ್ಪಷ್ಟನೆ ನೀಡಿಲ್ಲ.

ಓದಿ: ಶರದ್​ ಪವಾರ್​ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್​ ವಶಕ್ಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.