ETV Bharat / bharat

ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಯ ಪುನರುತ್ಥಾನ ಅನಾವರಣ.. - ಸಿಖ್ಖರಿಗೆ ಪ್ರತ್ಯೇಕ ತಾಯ್ನಾಡು

ಪಂಜಾಬ್‌ನ ಅಜ್ನಾಲಾದಲ್ಲಿ ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಅವರ ಸಹಾಯಕ ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಬಲಿಗರು ಪೊಲೀಸರ ಮೇಲೆ ದಾಳಿ ನಡೆಸಿದರು. ಜರ್ನೈಲ್ ಸಿಂಗ್ ಬಿಂದ್ರವಾಲೆ ಅವರಿಂದ ಸ್ಫೂರ್ತಿ ಪಡೆದ ಅಮೃತಪಾಲ್ ಅವರ ಒತ್ತಡಕ್ಕೆ ಪೊಲೀಸರು ಹೇಗೆ ಮಣಿದರು ಎಂಬುದು ಆಶ್ಚರ್ಯಕರವಾಗಿದೆ. ರಾಜ್ಯದ ಹಿಂಸಾಚಾರ ಮತ್ತು ಪ್ರತ್ಯೇಕತಾವಾದದ ಇತಿಹಾಸವನ್ನು ಗಮನಿಸಿದರೆ, ಈ ಸಣ್ಣ ಘಟನೆಯು ಪಂಜಾಬ್ ರಾಜಕೀಯದ ಮೇಲೆ ಹೇಗೆ ದೊಡ್ಡ ಪ್ರಭಾವ ಬೀರಬಹುದು ಎಂದು ಈಟಿವಿ ಭಾರತ್‌ನ ನೆಟ್‌ವರ್ಕ್ ಸಂಪಾದಕ ಬಿಲಾಲ್ ಭಟ್ ಅವರು ವಿಶ್ಲೇಷಿಸಿದ್ದಾರೆ.

Unveiling the resurgence of Khalistan slogan in Punjab
ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಯ ಪುನರುತ್ಥಾನ ಅನಾವರಣ
author img

By

Published : Feb 25, 2023, 9:39 PM IST

ಹೈದರಾಬಾದ್: ಅಮೃತಸರದ ಬೀದಿಗಳಲ್ಲಿ ಗುರುವಾರ ಕೆರಳಿದ್ದ ಸಿಖ್ಖರು ಕಿರ್ಪಾನ್, ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾದ ಪರೇಡ್ ಮಾಡಿ, 1980ರ ದಶಕದಲ್ಲಿ ಪಂಜಾಬ್ ಉಗ್ರಗಾಮಿತ್ವದಿಂದ ಆಕ್ರಮಿಸಿಕೊಂಡಿದ್ದನ್ನು ನೆನಪಿಸಿದರು. ಆಕ್ರೋಶಿತ ಪ್ರತಿಭಟನಾಕಾರರು ಅಜ್ನಾಲಾದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದರು. ಲವ್‌ಪ್ರೀತ್ ಅಲಿಯಾಸ್ ತೂಫಾನ್ ಸಿಂಗ್​ ಬಿಡುಗಡೆಗೆ ಆಗ್ರಹಿಸಿದರು. ಈತನ ಬಂಧನವೇ ಈ ಪ್ರತಿಭಟನೆಗೆ ಮೂಲ ಆಗಿತ್ತು.

ಖಲಿಸ್ತಾನ್ ಪರ ನಾಯಕ, 29 ವರ್ಷದ ಇಂಜಿನಿಯರ್ ಅಮೃತಪಾಲ್ ಸಿಂಗ್ ಪಂಜಾಬ್‌ನ ಯುವಕರ ಮೇಲೆ ಖಲಿಸ್ತಾನ್, ಸಿಖ್ಖರಿಗೆ ಪ್ರತ್ಯೇಕ ತಾಯ್ನಾಡು ಎಂಬ ಘೋಷಣೆಗಳೊಂದಿಗೆ ಪ್ರಭಾವ ಬೀರಿದ್ದಾರೆ. ವ್ಯಕ್ತಿಯೊಬ್ಬನ ಅಪಹರಿಸಿದ ಆರೋಪದ ಮೇಲೆ ಬಂಧಿತನಾದ ತನ್ನ ಆಪ್ತ ಸಹಾಯಕ ತೂಫಾನ್ ಸಿಂಗ್​ ಬಿಡುಗಡೆಗಾಗಿ ಬೆಂಬಲಿಗರನ್ನು ಅಜ್ನಾಲಾದಲ್ಲಿ ಒಟ್ಟುಗೂಡಿಸಿ ಪ್ರತಿಭಟಿಸುವಂತೆ ಕೇಳಿಕೊಂಡಿದ್ದರು. ಆದರೆ, ಪರಿಸ್ಥಿತಿ ಹೇಗೆ ತಿರುಗುತ್ತದೆ ಎಂದು ಊಹಿಸದ ಪೊಲೀಸರಿಗೆ ಅಮೃತಪಾಲ್ ಕರೆಗೆ ಓಗೊಟ್ಟು ಬೆಂಬಲವಾಗಿ ಅಜ್ನಾಲಾ ಬೀದಿಗಳು ಯುವಕರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡು ಆಶ್ಚರ್ಯವಾಯಿತು. ಇದೇ ವೇಳೆ ದಂಗೆಕೋರ ಯುವಕರ ವಿರುದ್ಧ ರಾಜ್ಯ ಭದ್ರತಾ ಕ್ರಮವು ಸಡಿಲಗೊಂಡಿತು. ತೂಫಾನ್ ಸಿಂಗ್ ಅಪಹರಣ ಸ್ಥಳದಲ್ಲಿ ಇರಲಿಲ್ಲ ಎಂಬ ಆಧಾರದ ಮೇಲೆ ಬಿಡುಗಡೆ ಮಾಡುವುದಾಗಿ ಪಂಜಾಬ್ ಡಿಜಿಪಿ ಘೋಷಿಸಿದರು.

1981ರ ಘಟನಾವಳಿ.. ಡಿಜಿಪಿಯವರ ಈ ಹೇಳಿಕೆಯಿಂದ ಹಲವು ಪ್ರಶ್ನೆ ಉದ್ಭವಿಸಿದೆ. 1981ರಲ್ಲಿ ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಬಿಂದ್ರಾವಾಲೆ ಅವರನ್ನು ಬಿಡುಗಡೆ ಮಾಡುವಂತೆ ಆಗಿನ ಸರ್ಕಾರದ ಅಧಿಕಾರಿಗಳ ಮೇಲೆ ವಿಶೇಷವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆತನ ಸಹಚರರು ಹಿಂಸಾಚಾರ ಮಾರ್ಗ ಬಳಸಿದ ನಂತರ ಬಿಡುಗಡೆ ಹೇಗೆ ಸಾಧ್ಯವಾಯಿತು ಎಂಬುದರ ಕುರಿತೂ ಜನರು ಯೋಚಿಸುವಂತೆ ಮಾಡಿದೆ. ಇದರ ನಂತರ ಇಂದಿರಾ ಗಾಂಧಿಯವರ ಸಂಪುಟದಲ್ಲಿ ಆಗಿನ ಗೃಹ ಸಚಿವರಾಗಿದ್ದ ಜೈಲ್ ಸಿಂಗ್, ಪತ್ರಿಕೆಯ ಮಾಲೀಕನ ಹತ್ಯೆಗೆ ಬಿಂದ್ರವಾಲೆ ಹೊಣೆಗಾರನಲ್ಲ ಎಂದು ಹೇಳಿದ್ದರು.

ಪಂಜಾಬ್‌ನಲ್ಲಿ ನಡೆದ ರಕ್ತಸಿಕ್ತ ಘಟನೆಗಳ ಸಮಯದಲ್ಲಿ ಬಿಂದ್ರವಾಲೆ ಬಿಡುಗಡೆಯು ಖಲಿಸ್ತಾನ್ ಪರ ಪಡೆಗಳನ್ನು ಹುರಿದುಂಬಿಸಿದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದೇ ಪರಿಗಣಿಸಲಾಗಿತ್ತು. ಇದು ಅಂತಿಮವಾಗಿ ಆಪರೇಷನ್ ಬ್ಲೂ ಸ್ಟಾರ್ ಮತ್ತು ನಂತರ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾಯಿತು. ಇದೇ ಕ್ರಮದಲ್ಲಿ ಪ್ರತ್ಯೇಕ ರಾಷ್ಟ್ರದ ಉದ್ದೇಶವನ್ನು ಬೆಂಬಲಿಸಲು ಸಿಖ್ಖರನ್ನು ಮನವೊಲಿಸುವ ಸಲುವಾಗಿ ಖಲಿಸ್ತಾನ್, ಅಮೃತಪಾಲ್ ಸಿಂಗ್, ಬಿಂದ್ರವಾಲೆ ವೇಷಭೂಷಣವನ್ನು ಧರಿಸಿ, ಅವರ ಸಿದ್ಧಾಂತದಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ಹೋರಾಟದ ದಿನಗಳಲ್ಲಿ ಅವರು ಮಾಡಿದ ಅದೇ ಮಾತುಗಳನ್ನು ಪ್ರತಿಭಟನಾಕಾರರು ಉಚ್ಛರಿಸಿದರು.

ಪಂಜಾಬ್‌ನ ಚುಕ್ಕಾಣಿ ಹಿಡಿದವರು ಸಿಖ್ ಪ್ರತ್ಯೇಕತಾವಾದಿಗಳ ಈ ಹೊಸ ಪೇರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯುವ ಅಮೃತಪಾಲ್ ಸಿಂಗ್‌ನಿಂದ ಆಜ್ಞಾಪಿಸಲ್ಪಟ್ಟಿದ್ದಾರೆ. ಪಂಜಾಬ್ ಅಧ್ಯಾಯನವನ್ನು ಅವರಿಗಾಗಿ ಬರೆಯಲಾಗಿದೆ. ಹಳೆಯ ಪಠ್ಯಗಳನ್ನು ಯಾವುದೇ ಸಮಸ್ಯೆಯನ್ನು ಪರಿಹರಿಸಲು ಬಳಸಬಹುದು ಎಂದು ಅವರು ಬಹುಶಃ ನಂಬಿದ್ದಾರೆ. ತೂಫಾನ್ ಬಿಡುಗಡೆಯ ನಂತರ ಪರಿಸ್ಥಿತಿಯು ಹೇಗೆ ತೆರೆದುಕೊಂಡಿತು ಎಂಬುದರ ನಂತರ ಗೋಚರಿಸುತ್ತದೆ.

ಮತ್ತೆ ಪೊಲೀಸರಿಗೆ ಬೆದರಿಕೆ.. ಅಮೃತಪಾಲ್ ವಾಕ್ಚಾತುರ್ಯ ಕೊನೆಗೊಂಡಿಲ್ಲ. ತೂಫಾನ್ ವಿರುದ್ಧ ಪ್ರಕರಣ ದಾಖಲಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶನಿವಾರ ಮತ್ತೆ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಅಮೃತಪಾಲ್ ಅನ್ನು ಸ್ವಲ್ಪ ಸಮಯದವರೆಗೆ ಮುಕ್ತಗೊಳಿಸುವುದು ಎಎಪಿ ಮತ್ತು ಕೇಂದ್ರ ಸರ್ಕಾರ ಎರಡರ ಹಿತದೃಷ್ಟಿಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ. ಇಲ್ಲದಿದ್ದರೆ, ಇತರ ಸ್ಥಳಗಳಲ್ಲಿ ಜನರ ಪ್ರತಿಭಟನೆಯನ್ನು ಎದುರಿಸುವಂತೆ ಆಗಲಿದೆ. ಅಮೃತಪಾಲ್ ಈ ಕ್ರಮವು ರಾಜ್ಯವನ್ನು ಧ್ರುವೀಕರಿಸುತ್ತದೆ. 1980ರ ದಶಕದ ಖಾಲಿಸ್ತಾನ್ ಚಳವಳಿಯು ರಾಜ್ಯದ ಹಿಂದೂ ಜನಸಂಖ್ಯೆಯನ್ನು ಏಕೀಕರಿಸುತ್ತದೆ. ಇದು ಸಿಖ್ಖರನ್ನು ದೊಡ್ಡ ಪ್ರಮಾಣದಲ್ಲಿ ವಿಭಜಿಸುತ್ತದೆ. ಜಾತ್ಯತೀತ ಸಿಖ್ಖರು ತಟಸ್ಥರಾಗಿ ಉಳಿಯುತ್ತಾರೆ. ರಾಜ್ಯದಲ್ಲಿ ಯಾವುದೇ ಬದಲಾವಣೆಯ ಬಗ್ಗೆ ಇವರು ತಲೆ ಒಲವು ತೋರಲ್ಲ. ಆಮೂಲಾಗ್ರ ಧಾರ್ಮಿಕ ಸಿಖ್ಖರು ಅಮೃತಪಾಲ್​ರನ್ನು ಆಯ್ದುಕೊಳ್ಳುತ್ತಾರೆ. ಆದರೆ, ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.40ರಷ್ಟಿರುವ ಹಿಂದೂಗಳು ಎಎಪಿ ಅಥವಾ ಕಾಂಗ್ರೆಸ್​ಅನ್ನು ಬೆಂಬಲಿಸುವುದಿಲ್ಲ. ಬಿಜೆಪಿಯನ್ನು ಮಾತ್ರ ನಂಬುತ್ತಾರೆ.

2024ರ ಚುನಾವಣಾ ದೃಷ್ಠಿ: ಬಿಜೆಪಿಯು ತನ್ನ ಹಿಂದಿನ ಚುನಾವಣಾ ಸಂದರ್ಭಗಳನ್ನು ಗಮನಿಸಿದರೆ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಲು ಮತ್ತು ತನ್ನ ನೆಲೆಯನ್ನು ಸ್ಥಾಪಿಸಲು ಇನ್ನೂ ಸಾಧ್ಯವಾಗಿಲ್ಲ. ಈಗ ಪಕ್ಷವು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಂತಹ ನಾಯಕರನ್ನು ಹೊಂದಿದ್ದು, ಅವರು 2024ರ ಚುನಾವಣೆಯಲ್ಲಿ ಪಕ್ಷಕ್ಕೆ ಬದಲಾವಣೆ ತರುತ್ತಾರೆ ಎಂಬ ಭರವಸೆಯನ್ನು ಬಿಜೆಪಿ ಹೊಂದಿದೆ. ಅಮರಿಂದರ್ ಪಂಜಾಬ್ ಹಿಂಸಾಚಾರದ ವರ್ಷಗಳನ್ನು ಕಂಡಿದ್ದಾರೆ. ಅವರು 80ರ ದಶಕದ ಆರಂಭದಲ್ಲಿ ಅಕಾಲೀಸ್ ವಿರುದ್ಧ ಇಂದಿರಾ ಗಾಂಧಿಯವರ ದೃಷ್ಟಿಕೋನವನ್ನು ಪ್ರತಿನಿಧಿಸುವ ಪ್ರಮುಖ ಸಂಧಾನಕಾರರಲ್ಲಿ ಒಬ್ಬರಾಗಿದ್ದರು.

ಇದನ್ನೂ ಓದಿ: 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ.. ಪಂಜಾಬ್​​ ಘಟನೆಗೆ ಕಂಗನಾ ರಣಾವತ್ ಪ್ರತಿಕ್ರಿಯೆ

ಖಲಿಸ್ತಾನ್ ಪರ ವಾಕ್ಚಾತುರ್ಯದ ಹೊಸ ಅಲೆಯು ಬಿಜೆಪಿಗೆ ಹೆಚ್ಚು ಒಲವು ತೋರುತ್ತಿದೆ. ಅಮೃತಪಾಲ್ ಬೆಳವಣಿಗೆಯು ಕೇವಲ ಪಕ್ಷಕ್ಕೆ ಹಿಂದೂ ಮತಗಳನ್ನು ಕ್ರೋಢೀಕರಿಸುತ್ತದೆ. ಮತ್ತೊಂದೆಡೆ, ಕ್ಯಾಪ್ಟನ್ ಮತ್ತು ಅವರಂತಹ ನಾಯಕರು ಸಿಖ್ ಮತಗಳನ್ನು ಆಕರ್ಷಿಸಲು ಸಹಾಯ ಮಾಡುತ್ತಾರೆ. ಅದೇ ಸಮಯದಲ್ಲಿ ಕೇಜ್ರಿವಾಲ್ ಕೇವಲ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಎಚ್ಚರಿಕೆಯಿಂದ ವ್ಯವಹರಿಸುತ್ತಿದ್ದಾರೆ. ಏಕೆಂದರೆ ಅದು ಕೈ ತಪ್ಪಿದರೆ, ಅದು ರಾಜ್ಯದಲ್ಲಿ ಅವರ ಅಧಿಕಾರವನ್ನು ಕಸಿದುಕೊಳ್ಳುವುದಲ್ಲದೆ, ಮುಂದಿನ ಭವಿಷ್ಯವನ್ನು ಅಪಾಯಕ್ಕೆ ತರುತ್ತದೆ ಎಂದು ಅವರಿಗೆ ಗೊತ್ತಿದೆ. ರಾಷ್ಟ್ರೀಯ ಪಕ್ಷವಾದ ನಂತರ ಬೇರೆಡೆ ತಮ್ಮ ಕೈಗಳನ್ನು ಕೇಜ್ರಿವಾಲ್ ಚಾಚುತ್ತಿದ್ದಾರೆ.

ಕುತೂಹಲಕಾರಿ ಪ್ರಶ್ನೆ ಎಂದರೆ, ಅಜಿತ್ ದೋವಲ್ ಅವರಂತಹ ಅಧಿಕಾರಿಗಳು ಭದ್ರತಾ ಸಮಸ್ಯೆಗಳನ್ನು ನಿಭಾಯಿಸುತ್ತಿರುವ ಕೇಂದ್ರದ ಆಡಳಿತಾರೂಢ ಪಕ್ಷವು ಮುಂಬರುವ ಚುನಾವಣೆಯಲ್ಲಿ ಖಲಿಸ್ತಾನ್ ಚಳವಳಿಯನ್ನು ಚುರುಕುಗೊಳಿಸಲು ಮತ್ತು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸಲು ಕಾಯುತ್ತಿದೆಯೇ ಅಥವಾ ಅದಕ್ಕೆ ಕಡಿವಾಣ ಹಾಕುತ್ತದೆಯೇ ಎಂಬುದಾಗಿದೆ.

- ಬಿಲಾಲ್​ ಭಟ್​, ನೆಟ್​ವರ್ಕ್​ ಎಡಿಟರ್-​ ಈಟಿವಿ ಭಾರತ

ಇದನ್ನೂ ಓದಿ: Watch.. ವಾರಿಸ್ ಪಂಜಾಬ್ ಸಂಘಟನೆ ಕಾರ್ಯಕರ್ತರಿಂದ ಪೊಲೀಸ್​ ಠಾಣೆಗೆ ಮುತ್ತಿಗೆ.. ಭಾರಿ ಪ್ರತಿಭಟನೆ, ಪೊಲೀಸರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.