ETV Bharat / bharat

ನಾಪತ್ತೆಯಾದ ಪಂಜರದ ಗಿಳಿ.. ತನ್ನ ಮುದ್ದುಗಿಣಿ ಹುಡುಕಿ ಕೊಡುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ

ಗಿಳಿಯನ್ನು ಅತೀ ಪ್ರೀತಿಯಿಂದ ಸಾಕಿದ್ದೆ. ಕುಟುಂಬ ಸದಸ್ಯರು ಕಳೆದ 7 ವರ್ಷಗಳಿಂದ ಮುದ್ದು ಗಿಣಿಯನ್ನು ಬೆಳಗ್ಗೆ ಮತ್ತು ಸಂಜೆ ಮನೆಯವರಂತೆ ಕಣ್ಣು ರೆಪ್ಪೆಗಳಂತೆ ನೋಡಿಕೊಳ್ಳುತ್ತಿದ್ದರು. ತೀರಾ ಮುದ್ದು ಮುದ್ದಾಗಿ ಸಾಕಿದ ಪರಿಣಾಮ ಗಿಳಿ ಎಲ್ಲರನ್ನೂ ಕೆಣಕಲು ಆರಂಭಿಸಿತ್ತು. ಈಗ ಅದು ಪಂಜರದಿಂದಲೇ ತಪ್ಪಿಸಿಕೊಂಡು ಹೋಗಿದೆ ಎಂದು ಮನೀಶ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.​

Unique complaint of parrot absconding, owner reached the police station with a complaint
ನಾಪತ್ತೆಯಾದ ಪಂಜರದ ಗಿಳಿ.. ತನ್ನ ಮುದ್ದುಗಿಣಿ ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ
author img

By

Published : May 13, 2022, 10:05 PM IST

ಜಗದಲ್‌ಪುರ(ಛತ್ತೀಸ್‌ಗಢ): ಗಿಳಿಯೊಂದು ಕಾಣೆಯಾಗಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಛತ್ತೀಸ್​ಗಢದ ಜಗದಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗಿಣಿಯೊಂದನ್ನು ತಾನು ತುಂಬಾ ಪ್ರೀತಿಯಿಂದ ಸಾಕಿದ್ದೆ. ಆದರೆ, ಗಿಳಿ ದೇಶದ್ರೋಹಿ ಎಂದು ತಿಳಿದು ಬಂದಿದೆ. ಪಂಜರ ತೆರೆದ ತಕ್ಷಣ ಗಿಳಿ ಕೈಗೆ ಸಿಗದಂತೆ ಹಾರಿ ಹೋಗಿದೆ. ದಯವಿಟ್ಟು ಆ ಗಿಳಿಯನ್ನು ಹುಡುಕಿಕೊಡಿ ಎಂದು ದೂರು ನೀಡಲಾಗಿದೆ.

ಹೀಗಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ ವ್ಯಕ್ತಿಯ ಹೆಸರು, ಮಾಲೀಕ ಮನೀಶ್ ಠಕ್ಕರ್. ಈ ಠಕ್ಕರ್​ ನೀಡಿರುವ ದೂರು ಸ್ವೀಕರಿಸಿರುವ ಜಗದಲ್​ಪುರ ಪೊಲೀಸರು, ಗಿಳಿಯ ಹುಡುಕಾಟ ಆರಂಭಿಸಿದ್ದಾರೆ.

ಮನೀಶ್​ ದೂರಿನಲ್ಲಿರೋದೇನು? ಗಿಳಿಯನ್ನು ಅತೀ ಪ್ರೀತಿಯಿಂದ ಸಾಕಿದ್ದೆ. ಕುಟುಂಬ ಸದಸ್ಯರು ಕಳೆದ 7 ವರ್ಷಗಳಿಂದ ಮುದ್ದು ಗಿಣಿಯನ್ನು ಬೆಳಗ್ಗೆ ಮತ್ತು ಸಂಜೆ ಮನೆಯವರಂತೆ ಕಣ್ಣು ರೆಪ್ಪೆಗಳಂತೆ ನೋಡಿಕೊಳ್ಳುತ್ತಿದ್ದರು. ತೀರಾ ಮುದ್ದು ಮುದ್ದಾಗಿ ಸಾಕಿದ ಪರಿಣಾಮ ಗಿಳಿ ಎಲ್ಲರನ್ನೂ ಕೆಣಕಲು ಆರಂಭಿಸಿತ್ತು. ಈಗ ಅದು ಪಂಜರದಿಂದಲೇ ತಪ್ಪಿಸಿಕೊಂಡು ಹೋಗಿದೆ ಎಂದು ದೂರಿನಲ್ಲಿ ಮನೀಶ್​ ವಿವರಿಸಿದ್ದಾನೆ.

ಈ ಸಂಬಂಧ ನೀಡಿರುವ ದೂರನ್ನು ಸ್ವೀಕರಿಸಿರುವ ಜಗದಲ್​ಪುರ ಸಿಟಿ ಕೊಟ್ವಾಲಿ ಇನ್​ಚಾರ್ಜ್​​​​ ಎಮನ್​ ಸಾಹು ಮಾತನಾಡಿ, ಮನೀಶ್​ ನೀಡಿರುವ ದೂರು ಸ್ವೀಕರಿಸಲಾಗಿದೆ. ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನಗರದ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗಿಳಿಯನ್ನು ಪತ್ತೆಹಚ್ಚಿ ಅದರ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಮತ್ತು ಬರೋ ಔಷಧ ನೀಡಿ ಶಿಕ್ಷಕಿ ಮೇಲೆ ರೇಪ್: ಬ್ಲಾಕ್ ಮೇಲೆ ಮಾಡಿ, ಮತಾಂತರಕ್ಕೆ ಒತ್ತಡ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.