ಭೋಪಾಲ್(ಮಧ್ಯಪ್ರದೇಶ): ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವ ತಾವರ್ಚಂದ್ ಗೆಹ್ಲೋಟ್ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾಗಿರುವ ಎಲ್. ಮುರುಗನ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜುಲೈ 7ರಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಮುಂದಿನ ಆರು ತಿಂಗಳೊಳಗೆ ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಬೇಕಾಗಿದೆ. ಇದೀಗ ಅವರು ಮಧ್ಯಪ್ರದೇಶದಿಂದ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಸಂಸದರಲ್ಲದ ಕಾರಣ ಮುರುಗನ್ ಮುಂದಿನ 6 ತಿಂಗಳಲ್ಲಿ ಲೋಕಸಭೆ ಅಥವಾ ರಾಜ್ಯಸಭೆಯಿಂದ ಆಯ್ಕೆಯಾಗಬೇಕಾಗಿದೆ.
-
Bhopal: MoS and BJP leader L Murugan files his nomination for the upcoming by-polls to Rajya Sabha from Madhya Pradesh. CM Shivraj Singh Chouhan is also present with him. pic.twitter.com/BavJ9PjpZf
— ANI (@ANI) September 21, 2021 " class="align-text-top noRightClick twitterSection" data="
">Bhopal: MoS and BJP leader L Murugan files his nomination for the upcoming by-polls to Rajya Sabha from Madhya Pradesh. CM Shivraj Singh Chouhan is also present with him. pic.twitter.com/BavJ9PjpZf
— ANI (@ANI) September 21, 2021Bhopal: MoS and BJP leader L Murugan files his nomination for the upcoming by-polls to Rajya Sabha from Madhya Pradesh. CM Shivraj Singh Chouhan is also present with him. pic.twitter.com/BavJ9PjpZf
— ANI (@ANI) September 21, 2021
ಇದನ್ನೂ ಓದಿ: ನರೇಂದ್ರ ಗಿರಿ ನಿಗೂಢ ಸಾವಿನ ತನಿಖೆಯನ್ನು CBIಗೆ ವಹಿಸಬೇಕು: ಕೋರ್ಟ್ ಮೊರೆ ಹೋದ ಸುನಿಲ್ ಚೌಧರಿ
ಇಂದು ನಾಮಪತ್ರ ಸಲ್ಲಿಸಿರುವ ಮುರುಗನ್‌ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ, ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಹಾಗೂ ರಾಜ್ಯ ಸಚಿವರಾದ ನರೋತ್ತಮ್ ಮಿಶ್ರಾ ಹಾಗೂ ಭೂಪೇಂದ್ರ ಸಿಂಗ್ ಸಾಥ್ ನೀಡಿದರು.
ಐದು ರಾಜ್ಯಗಳ ಆರು ರಾಜ್ಯಸಭೆ ಸ್ಥಾನಗಳಿಗೋಸ್ಕರ ಚುನಾವಣೆ ಘೋಷಣೆಯಾಗಿದ್ದು, ರಾಜೀನಾಮೆ ಹಾಗೂ ನಿಧನದಿಂದಾಗಿ ಈ ಸ್ಥಾನಗಳು ತೆರವಾಗಿವೆ. ಅಕ್ಟೋಬರ್ 4ರಂದು ಮತದಾನ ನಡೆಯಲಿದೆ.