ETV Bharat / bharat

ಕುಡಿತಕ್ಕೆ ನನ್ನ ಮಗ ಬಲಿಯಾದ, ದಯವಿಟ್ಟು ನಿಮ್ಮ ಹೆಣ್ಣು ಮಕ್ಕಳನ್ನು ಕುಡುಕರ ಜೊತೆ ಮದುವೆ ಮಾಡಬೇಡಿ: ಕೇಂದ್ರ ಸಚಿವರ ಮನವಿ

author img

By

Published : Dec 25, 2022, 12:43 PM IST

Updated : Dec 25, 2022, 7:24 PM IST

ಸಮಾಜ ಹಾಳು ಮಾಡುವ ಕೆಟ್ಟ ಚಟಗಳಿಂದ ಎಲ್ಲರೂ ದೂರವಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಜೊತೆಗೆ, ನಿಮ್ಮ ಹೆಣ್ಣು ಮಕ್ಕಳನ್ನು ಹಾಗೂ ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಿಕೊಡಬೇಡಿ ಎಂದು ಕೇಂದ್ರ ಸಚಿವ ಕೌಶಲ್ ಕಿಶೋರ್ ಹೇಳಿದ್ದಾರೆ.

kaushal kishore
ಕೌಶಲ್ ಕಿಶೋರ್

ಸುಲ್ತಾನ್‌ಪುರ (ಉತ್ತರ ಪ್ರದೇಶ): ನಿಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಿ ಕೊಡಬೇಡಿ. ಈ ಮದ್ಯವ್ಯಸನಿಗಳಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಜನರಿಗೆ ಮನವಿ ಮಾಡಿದ್ದಾರೆ.

ಶನಿವಾರ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಡಿ-ಅಡಿಕ್ಷನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ. ನಾನು ಸಂಸದನಾಗಿದ್ದು ನನ್ನ ಪತ್ನಿ ಶಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ, ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ಸಾಮಾನ್ಯ ಜನರು ಏನು ಮಾಡುತ್ತಾರೆ?' ಎಂದು ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡರು.

ಇದನ್ನೂ ಓದಿ: ನಿಲ್ಲದ ಡ್ರಗ್ಸ್ ಅಮಲು.. ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?

'ನನ್ನ ಮಗ ಆಕಾಶ್ ಕಿಶೋರ್ ತನ್ನ ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವಿಸುವ ಅಭ್ಯಾಸ ಕಲಿತಿದ್ದ. ಬಳಿಕ ಅವನನ್ನು ಡಿ ಅಡಿಕ್ಷನ್ ಸೆಂಟರ್‌ಗೆ ಸೇರಿಸಲಾಯಿತು. ಕೆಟ್ಟ ಚಟವನ್ನು ಬಿಟ್ಟಿದ್ದಾನೆ ಎಂದು ಭಾವಿಸಿ ಆರು ತಿಂಗಳ ನಂತರ ಮದುವೆ ಮಾಡಲಾಯಿತು. ಆದರೆ ಮದುವೆಯ ನಂತರ ಅವನು ಮತ್ತೆ ಕುಡಿಯಲು ಪ್ರಾರಂಭಿಸಿದ. ಇದು ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ಹಿಂದೆ ಅಂದ್ರೆ ಅಕ್ಟೋಬರ್ 19 ರಂದು ಆಕಾಶ್ ನಿಧನವಾದಾಗ ಅವನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು' ಎಂದು ಕೇಂದ್ರ ಸಚಿವರು ಭಾವುಕರಾದರು.

ಅಂದು ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಇದರಿಂದ ಅವನ ಹೆಂಡತಿ ವಿಧವೆಯಾದಳು. ಇದರಿಂದ ನೀವೆಲ್ಲಾ ಪಾಠ ಕಳಿತುಕೊಳ್ಳಬೇಕು. ನಿಮ್ಮ ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು' ಎಂದು ಹೇಳಿದರು.

ಇದನ್ನೂ ಓದಿ: 1340ನೇ ಮದ್ಯವರ್ಜನ ಶಿಬಿರ: ದುಶ್ಚಟ ತ್ಯಜಿಸುವ ಶಪಥ ಮಾಡಿದ ಶಿಬಿರಾರ್ಥಿಗಳು

ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಸುಮಾರು 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ್ದರು. ಆದರೆ ಇದೀಗ ಕೆಟ್ಟ ವ್ಯಸನದಿಂದಾಗಿ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಿದ್ದಾರೆ. ಸುಮಾರು 80 ಪ್ರತಿಶತದಷ್ಟು ಜನ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ತಂಬಾಕು, ಸಿಗರೇಟ್ ಮತ್ತು ಬೀಡಿ ಸೇವನೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮೋಹನ್‌ಲಾಲ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೌಶಲ್‌ ಕಿಶೋರ್‌ ಎಲ್ಲರ ಗಮನ ಸೆಳೆದರು.

ಇದನ್ನೂ ಓದಿ: ಮದ್ಯ ವ್ಯಸನ ಮುಕ್ತಿ ಕೇಂದ್ರಕ್ಕೆ ಸೇರಿಸಿದ ಮಗ ಸಾವು: ಸಂಸ್ಥೆ ವಿರುದ್ಧ ತಂದೆ ದೂರು

ವ್ಯಸನಮುಕ್ತ ಸಮಾಜ ನಿರ್ಮಾಣ: ಜನರನ್ನು ವ್ಯಸನಮುಕ್ತಗೊಳಿಸುವಲ್ಲಿ ಎಲ್ಲರ ಸಹಕಾರ ಮುಖ್ಯ. ಈ ಕುರಿತು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಜಾಗೃತಿ ಮೂಡಿಸುವ ಮೂಲಕ ನಿಮ್ಮ ಕುಟುಂಬಸ್ಥರ ಪ್ರಾಣ ಉಳಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಸುಲ್ತಾನ್‌ಪುರ ಜಿಲ್ಲೆಯನ್ನು ವ್ಯಸನಮುಕ್ತವನ್ನಾಗಿ ಮಾಡಲು ಎಲ್ಲಾ ಶಾಲೆಗಳಲ್ಲಿ ವ್ಯಸನಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ಬೆಳಗ್ಗೆ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಸಲಹೆಗಳನ್ನು ನೀಡಬೇಕು ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ವ್ಯಕ್ತಿಯ ಹೊಟ್ಟೆಯಲ್ಲಿದ್ದವು 63 ಸ್ಪೂನ್​.. ಆಪರೇಷನ್​ ಮಾಡಿದ ವೈದ್ಯರಿಗೇ ಕಾದಿತ್ತು ಅಚ್ಚರಿ!

Last Updated : Dec 25, 2022, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.