ETV Bharat / bharat

ಕೇರಳದಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಕಾನೂನು: ಡಿವಿ ಸದಾನಂದಗೌಡ - ಕೇಂದ್ರ ಸಚಿವ ಡಿವಿ ಸದಾನಂದಗೌಡ ಕೇರಳದಲ್ಲಿ ಮಾಧ್ಯಮಗೋಷ್ಟಿ

ಕೇರಳದಲ್ಲಿ ಲವ್-ಜಿಹಾದ್ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಸಮುದಾಯ ಸಹ ಈ ಪಿಡುಗಿಗೆ ತುತ್ತಾಗಿದೆ. ನಾವು ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುತ್ತೇವೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆ ನೀಡಿದ್ದಾರೆ.

union minister DV sadanandagowda pressmeet in kerala
ಕೇಂದ್ರ ಸಚಿವ ಡಿವಿ ಸದಾನಂದಗೌಡ
author img

By

Published : Mar 23, 2021, 6:57 AM IST

ಬೆಂಗಳೂರು/ತಿರುವನಂತಪುರ : ನಾವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುತ್ತೇವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.

union minister DV sadanandagowda pressmeet in kerala
ಕೇಂದ್ರ ಸಚಿವ ಡಿವಿ ಸದಾನಂದಗೌಡ
ತಿರುವನಂತಪುರದಲ್ಲಿಮಾಧ್ಯಮ ಗೋಷ್ಠಿ ನಡೆಸಿ ಸಿಪಿಐಎಂ ನೇತೃತ್ವದ ಎಡರಂಗ ಸರ್ಕಾರದ ವಿರುದ್ಧ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಡಿವಿಎಸ್​, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸೇರಿದಂತೆ ರಾಜ್ಯಭಾರದ ಎಲ್ಲ ಮಜಲುಗಳಿಲ್ಲಿಯೂ ಎಡರಂಗ ಸರ್ಕಾರವು ವಿಫಲಗೊಂಡಿದೆ ಎಂದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ:
ಸಿಪಿಐಎಂ ನೇತೃತ್ವದ ಎಡರಂಗ ಸರ್ಕಾರದ ದುರಾಡಳಿತದಿಂದ ಕೇರಳ ಜನತೆ ರೋಸಿ ಹೋಗಿದ್ದು ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು ಮುಂಚೂಣಿ ಓಟಗಾರನಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗವೇ ಅಧಿಕಾರದಲ್ಲಿರಲಿ ಅಥವಾ ಎಡರಂಗದ ಸರ್ಕಾರವೇ ಆಗಿರಲಿ ಕೋಮು ಶಕ್ತಿಗಳಿಗೆ ಪುಷ್ಟಿ ನೀಡುವ ಕೆಲಸವಾಗುತ್ತಿದೆ. ಕೇರಳವು ಭಯೋತ್ಪಾದನಾ ಚಟುವಟಿಕೆಯ ಸ್ಥಾನವಾಗುತ್ತಿದೆ. ರಾಜಕೀಯ ಕೊಲೆಗಳು ಎಗ್ಗಿಲ್ಲದೆ ನಡೆದಿವೆ. ಕಳೆದೊಂದು ವರ್ಷದಲ್ಲಿ ಕನಿಷ್ಠ ಎಂದರೂ 22 ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.

ದೇವಸ್ಥಾನ ಆಡಳಿತ ಮಂಡಳಿಗಳಲ್ಲಿ ನಾಸ್ತಿಕರ ದರ್ಬಾರ್​
ನಾಸ್ತಿಕ ಕಮ್ಯುನಿಷ್ಟರು ರಾಜ್ಯದ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಲ್ಲಿ ತುಂಬಿಕೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿಯ ನಾಯಕ ಸದಾನಂದ ಗೌಡ ಪಕ್ಷವು ಅಧಿಕಾರಕ್ಕೆ ಬಂದರೆ ಈ ಎಲ್ಲ ಮಂಡಳಿಗಳನ್ನು ವಿಸರ್ಜಿಸಿ ಆಯಾ ದೇವಸ್ಥಾನಗಳ ಶ್ರದ್ಧಾಳುಗಳನ್ನು ಒಳಗೊಂಡ ನೂತನ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಅದು ಶಬರಿಮಲೆ ಸ್ವಾಮಿ ಅಯ್ಯಪ್ಪ ಪರಂಪರೆಯೇ ಇರಬಹುದು ಅಥವಾ ಇನ್ಯಾವುದೇ ಹಿಂದು ದೇವಸ್ಥಾನದ ರೀತಿ-ರಿವಾಜುಗಳೇ ಇರಬಹುದು. ಎಡರಂಗ ಸರ್ಕಾರವು ಹಿಂದುಗಳ ಆಸ್ಥೆಗೆ ಎಸಗುತ್ತಿರುವ ಅಪಚಾರ ಕೇರಳದ ಜನರಿಗೆ ಅರ್ಥವಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎನ್​ಡಿಎ ಶೇಕಡಾ 17ರಷ್ಟು ಮತ ಗಳಿಸಿದೆ. ಪಂಡಲಮ್ ನಗರಸಭೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.

ಎಡರಂಗ ಆಡಳಿತದಲ್ಲಿ ಭ್ರಷ್ಟಾಚಾರದ್ದೇ ಅಬ್ಬರ: ಸದಾನಂದಗೌಡ
ಎಡರಂಗ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಚಿನ್ನ ಕಳ್ಳಸಾಗಣೆ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿಯ ಹೆಸರು ತಳುಕು ಹಾಕಿಕೊಂಡಿದೆ. ಸರ್ಕಾರಿ ನೇಮಕ ಪ್ರಕ್ರಿಯೆಯಲ್ಲಿಯೂ ತೀವ್ರ ಭ್ರಷ್ಚಾಚಾರ ನಡೆದಿದೆ. ಸಚಿವರು, ಶಾಸಕರು ಮತ್ತು ಎಡಪಂಥೀಯ ನಾಯಕರ ಕೃಪಾಶೀರ್ವಾದ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡುತ್ತಿದೆ. ದೇಶದ ಎಲ್ಲ ರಾಜ್ಯಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಕೂಡಾ ಅಭಿವೃದ್ಧಿಯಾಗುತ್ತದೆ ಎಂಬುದು ನಮ್ಮ ಧೋರಣೆ. ಭಾರತವು ಒಂದು ಒಕ್ಕೂಟ ವ್ಯವಸ್ಥೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿಯೇ ಹೆಜ್ಜೆ ಹಾಕಬೇಕಾಗುತ್ತದೆ. ಆದರೆ ಪಿಣರಾಯಿ ಸರಕಾರದ ಮನಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಪಿಣರಾಯಿ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ರೈಲ್ವೆ ಯೋಜನೆಗಳ ವಿಳಂಬಕ್ಕೆ ವಿಜಯನ್​ ನೀತಿಯೇ ಕಾರಣ

ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಯೋಜನೆಗಳಿಗೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ. ಆದರೆ ಕೇರಳದಲ್ಲಿ ಅಗತ್ಯ ಭೂಮಿ ಲಭ್ಯವಾಗದೆ ಕೆಲವು ಮಹತ್ವದ ಹೆದ್ದಾರಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಕೇಂದ್ರ ಸಚಿವರು ಎಡರಂಗ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಭ್ರಷ್ಟಾಚಾರ-ರಹಿತ ಪಾರದರ್ಶಕ ಆಡಳಿತ, ಸುಶಾಸನ ಮತ್ತು ಅಭಿವೃದ್ಧಿಯೇ ಮೋದಿ ಸರ್ಕಾರದ ಮಂತ್ರವಾಗಿದೆ. ಕೇರಳವು ವಿದ್ಯಾವಂತರ ನಾಡಾಗಿದೆ. ಅದು ಇನ್ನಷ್ಟು ಅಭಿವೃದ್ಧಿಗೆ ಅರ್ಹವಾಗಿದೆ. ಆದರೆ ದಶಕಗಳಿಂದ ಕಾಂಗ್ರೆಸ್ ಮತ್ತು ಎಡಪಂಥೀಯರ ದುರಾಡಳಿತದಿಂದ ನಲುಗಿದೆ. ರಾಜ್ಯಕ್ಕೆ ಬದಲಾವಣೆ ಬೇಕು. ನಿಜವಾದ ಪರಿವರ್ತನೆ ಬೇಕು. ಹಾಗಾಗಿ ಎನ್​ಡಿಎಗೆ ಒಂದು ಅವಕಾಶ ನೀಡುವಂತೆ ಕೇರಳದ ಜನತೆಯನ್ನು ಕೋರುತ್ತಿದ್ದೇನೆ ಎಂದು ಸಚಿವ ಸದಾನಂದ ಗೌಡ ಹೇಳಿದರು. ಕೇರಳ ಬಿಜೆಪಿ ಉಸ್ತುವಾರಿ ಸಿ ಪಿ ರಾಧಾಕೃಷ್ಣನ್, ರಾಜ್ಯ ಎನ್​ಡಿಎ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.