ಬಕ್ಸರ್ (ಬಿಹಾರ) : ಕೇಂದ್ರ ಸಚಿವ ಮತ್ತು ಬಕ್ಸರ್ ಸಂಸದ ಅಶ್ವಿನಿ ಕುಮಾರ್ ಚೌಬೆ ಅವರು ರಸ್ತೆ ಅಪಘಾತದಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊರಂಸರೈ ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ವಾಹನದ ಚಾಲಕ ಗಾಯಗೊಂಡಿದ್ದಾರೆ. ಕೇಂದ್ರ ಸಚಿವರು ಬಕ್ಸರ್‌ನಿಂದ ಪಾಟ್ನಾಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಘಟನೆಯ ನಂತರ ಕೇಂದ್ರ ಸಚಿವರೇ ಎಲ್ಲ ಗಾಯಾಳುಗಳನ್ನು ದುಮ್ರಾವ್ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಾಟ್ನಾಗೆ ತೆರಳುತ್ತಿದ್ದ ಕೇಂದ್ರ ಸಚಿವ ಚೌಬೆ: ಕೇಂದ್ರ ಸಚಿವರು ಇಲ್ಲಿನ ಕೊರಂಸರೈ-ಮಥಿಲಾ-ನಾರಾಯಣಪುರ ರಸ್ತೆ ಮೂಲಕ ಪಾಟ್ನಾಗೆ ಹೋಗುತ್ತಿದ್ದರು. ಸಂಕಿ ಸೇತುವೆ ಬಳಿ ರಾತ್ರಿ 9.30ರ ಸುಮಾರಿಗೆ ಅವರ ಕಾರ್ಕೇಡ್‌ನಲ್ಲಿ ಸಾಗುತ್ತಿದ್ದ ಕೊರಂಸರೈ ಪೊಲೀಸ್ ಠಾಣೆಯ ವಾಹನ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಈ ವೇಳೆ ನಾಲ್ವರು ಪೊಲೀಸರು ಹಾಗೂ ವಾಹನದ ಚಾಲಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತರಾತುರಿಯಲ್ಲಿ ದುಮ್ರಾನ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸ್ ವಾಹನ ಪಲ್ಟಿ: ಅಶ್ವಿನಿ ಚೌಬೆ ಅವರ ಹಿಂದೆಯೇ ಇನ್ನೋವಾ ಕಾರು ಸಂಚರಿಸುತ್ತಿತ್ತು. ಕಾರು ಚಾಲಕನ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ. ಗಾಯಾಳು ಪೊಲೀಸರು ಮತ್ತು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯವನ್ನು ಅಶ್ವಿನಿ ಚೌಬೆ ವಿಚಾರಿಸಿದ್ದಾರೆ. ದುಮ್ರಾನ್ ಉಪವಿಭಾಗೀಯ ಆಸ್ಪತ್ರೆಗೆ ತೆರಳಿದ್ದ ಅವರು ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
ಟ್ವೀಟ್ ಮಾಡಿ ಮಾಹಿತಿ ನೀಡಿದ ಸಚಿವ: ಬಿಹಾರ ಸರ್ಕಾರದ ದಬ್ಬಾಳಿಕೆಯ ನೀತಿಗಳಿಗೆ ವಿರೋಧ ಮತ್ತು ರಾಮಚರಿತಮಾನಸ್‌ಗೆ ಉಂಟಾದ ಅವಮಾನದಿಂದ ಬೇಸರಗೊಂಡ ಸ್ಥಳೀಯ ಸಂಸದ ಮತ್ತು ಕೇಂದ್ರ ಸಚಿವ ಅಶ್ವಿನಿ ಚೌಬೆ ಶುಕ್ರವಾರದಿಂದ ಬಕ್ಸಾರ್‌ನಲ್ಲಿ ಮೌನ ಉಪವಾಸ ನಡೆಸುತ್ತಿದ್ದಾರೆ. ಈ ಸಂಬಂಧ ಕಳೆದ ಮೂರು ದಿನಗಳಿಂದ ಬಕ್ಸಾರ್‌ನಲ್ಲಿದ್ದರು. ಈ ಅಪಘಾತದ ಮಾಹಿತಿಯನ್ನು ಸ್ವತಃ ಕೇಂದ್ರ ಸಚಿವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಬಕ್ಸರ್‌ನಿಂದ ಪಾಟ್ನಾಗೆ ತೆರಳುವ ಮಾರ್ಗದಲ್ಲಿ ಬೆಂಗಾವಲು ಪಡೆಯಲ್ಲಿ ಸಾಗುತ್ತಿದ್ದ ಕೊರಂಸಾರೈ ಪೊಲೀಸ್ ಠಾಣೆಯ ಕಾರು ಅಪಘಾತವಾಗಿದೆ. ಶ್ರೀರಾಮನ ಕೃಪೆಯಿಂದ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶಿಶು ಬಲಿ ಪಡೆದ ಪೊಲೀಸ್ ವಾಹನ: ಹರಿಯಾಣದ ಗುರುಗ್ರಾಮದಲ್ಲಿ ಪೊಲೀಸ್ ವಾಹನವು ಕಾರಿಗೆ ಡಿಕ್ಕಿ ಹೊಡೆದು ಶಿಶು ಸಾವನ್ನಪ್ಪಿದೆ. ಹಲವರು ಗಾಯಗೊಂಡಿದ್ದಾರೆ. ಗುರುಗ್ರಾಮ್-ಫರಿದಾಬಾದ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಇಆರ್‌ವಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಭಾಗಿಯಾದ ಪೊಲೀಸರ ವಿರುದ್ಧವೂ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಗುರುಗ್ರಾಮನ ಎಸಿಪಿ ವಿಕಾಸ್ ಕೌಶಿಕ್ ತಿಳಿಸಿದ್ದಾರೆ
ಇದನ್ನೂ ಓದಿ: ಬೆಂಗಾವಲು ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು: ಬಿಜೆಪಿ ಸಂಸದನ ವಿರುದ್ಧ ಕೇಸ್ ದಾಖಲು