ETV Bharat / bharat

ಪ್ರತಿ ವಿಚಾರಣೆಗೆ 10-15 ಲಕ್ಷ ರೂ. ಪಡೆಯುವ ವಕೀಲರಿದ್ದಾರೆ: ಕೇಂದ್ರ ಕಾನೂನು ಸಚಿವ ರಿಜಿಜು - ಹೈಕೋರ್ಟ್​ಗಳಲ್ಲಿ ಸ್ಥಳೀಯ ಭಾಷೆ ಬಳಕೆ

ಸುಪ್ರೀಂಕೋರ್ಟ್​​ನಲ್ಲಿ ವಕೀಲರು ಪ್ರತಿ ವಿಚಾರಣೆಗೆ 10-15 ಲಕ್ಷ ರೂಪಾಯಿ ಶುಲ್ಕ ಪಡೆದುಕೊಳ್ಳುತ್ತಿದ್ದು, ಇಷ್ಟೊಂದು ದುಬಾರಿ ಶುಲ್ಕ ಪಾವತಿಸಲು ಸಾಮಾನ್ಯ ಜನರಿಗೆ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದ್ದಾರೆ.

Union Law Minister Kiren Rijiju in Jaipur

author img

By

Published : Jul 16, 2022, 7:54 PM IST

ಜೈಪುರ(ರಾಜಸ್ಥಾನ): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿವೆ. ಆದರೂ, ದೇಶಾದ್ಯಂತ ಸುಮಾರು 5 ಕೋಟಿ ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಬೇಸರ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ 18ನೇ ಆಲ್ ಇಂಡಿಯಾ ಕಾನೂನು ಸೇವೆಗಳ ಪ್ರಾಧಿಕಾರದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಸುಪ್ರೀಂಕೋರ್ಟ್​​ನಲ್ಲಿ ಕೆಲ ವಕೀಲರು ಪ್ರತಿ ವಿಚಾರಣೆಗೆ 10 ರಿಂದ 15 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಇಷ್ಟೊಂದು ಹಣ ಭರಿಸಲು ಜನಸಾಮಾನ್ಯರಿಗೆ ಅಸಾಧ್ಯ. ಹೀಗಾಗಿ, ಅವರಿಗೆ ನ್ಯಾಯ ಮರೀಚಿಕೆಯಾಗ್ತಿದೆ. ನ್ಯಾಯಾಲಯ ಕೇವಲ ಹಣವಂತರಿಗೆ ಇರಬಾರದು. ಅದರ ಬಾಗಿಲು ಎಲ್ಲರಿಗೂ ತೆರದಿರಬೇಕು ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯ ಜನರ ಜೀವನದ ಮೇಲೆ ಹೊರೆಯಾಗಿ ಕೆಲಸ ಮಾಡುತ್ತಿರುವ ಅನೇಕ ಕಾನೂನು ಕಡಿಮೆ ಮಾಡಿದ್ದೇವೆ. ಒಟ್ಟು 1486 ಬಳಕೆಯಿಲ್ಲದ ಕಾನೂನು ಮತ್ತು ನಿಬಂಧನೆ ತೆಗೆದುಹಾಕಿರುವುದಾಗಿ ಹೇಳಿರುವ ಅವರು, ಸದ್ಯ ಅಂತಹ 1824 ಕಾನೂನು ಗುರುತಿಸಿದ್ದೇವೆ ಎಂದರು. ಈ ಸಲದ ಸಂಸತ್​ ಅಧಿವೇಶನದಲ್ಲಿ 71 ಕಾಯ್ದೆ ತೆಗೆದುಹಾಕಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿರಿ: ಸುಪ್ರೀಂ ಕೋರ್ಟ್​ನಲ್ಲಿ 70 ಸಾವಿರ ಪ್ರಕರಣ ಬಾಕಿ.. ಮುಂದಿನ ದಾರಿಯೇನು?

ಹೈಕೋರ್ಟ್, ಅಧೀನ ನ್ಯಾಯಾಲಯಗಳಲ್ಲಿ ಮಾತೃಭಾಷೆ: ಸುಪ್ರೀಂಕೋರ್ಟ್​​ನಲ್ಲಿ ವಾದ-ಪ್ರತಿವಾದ ಅಥವಾ ತೀರ್ಪು ವೇಳೆ ಇಂಗ್ಲಿಷ್​ ಬಳಸಬಹುದು. ಆದರೆ, ಹೈಕೋರ್ಟ್​, ಅಧೀನ ನ್ಯಾಯಾಲಯಗಳು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಇದೇ ವೇಳೇ ಕಿರಣ್​ ರಿಜಿಜು ಹೇಳಿದ್ದಾರೆ. ದೇಶದಲ್ಲಿ ಯಾವುದೇ ಭಾಷೆಯನ್ನ ಕೇಳಾಗಿ ನೋಡಬಾರದು. ಕೋರ್ಟ್​​ಗಳಲ್ಲಿ ವಕೀಲರು ಹೆಚ್ಚು ಇಂಗ್ಲಿಷ್​ನಲ್ಲಿ ವಾದ ಮಾಡಿದರೆ ಅವರಿಗೆ ಹೆಚ್ಚಿನ ಪ್ರಕರಣ, ಶುಲ್ಕ ಹಾಗೂ ಗೌರವ ಸಿಗುತ್ತದೆ ಎನ್ನುವ ಇರಾದೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.