ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಟೆಲಿಕಾಂ ಹಾಗೂ ಅಟೋ ವಲಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ದೂರಸಂಪರ್ಕ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಪ್ರಾಮುಖ್ಯತೆ ಕೊಟ್ಟಿದೆ.
-
A moratorium of 4 years has been approved for the dues of telecom service providers. Those who avail of the moratorium, will have to pay interest on the moratorium amount at MCLR + 2% rate: Ashwini Vaishnaw, Minister for Communications pic.twitter.com/tTq3yKO0ne
— ANI (@ANI) September 15, 2021 " class="align-text-top noRightClick twitterSection" data="
">A moratorium of 4 years has been approved for the dues of telecom service providers. Those who avail of the moratorium, will have to pay interest on the moratorium amount at MCLR + 2% rate: Ashwini Vaishnaw, Minister for Communications pic.twitter.com/tTq3yKO0ne
— ANI (@ANI) September 15, 2021A moratorium of 4 years has been approved for the dues of telecom service providers. Those who avail of the moratorium, will have to pay interest on the moratorium amount at MCLR + 2% rate: Ashwini Vaishnaw, Minister for Communications pic.twitter.com/tTq3yKO0ne
— ANI (@ANI) September 15, 2021
ಟೆಲಿಕಾಂ ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಗೆ ನಾಲ್ಕು ವರ್ಷಗಳ ಗಡುವು ಹಾಗೂ ಶೇ. 100ರಷ್ಟು ವಿದೇಶಿ ಬಂಡವಾಳ ಹೂಡಿಕೆ(ಎಫ್ಡಿಎ) ಮಾಡಲು ಅವಕಾಶ ನೀಡಲಾಗಿದೆ.
ಈ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪ್ರಮುಖವಾಗಿ ಆಟೋಮ್ಯಾಟಿಕ್ ರೂಟ್ ಮೂಲಕ ಶೇ. 100ರಷ್ಟು ಎಫ್ಡಿಐಗೆ ಅವಕಾಶ ಕಲ್ಪಿಸಲಾಗಿದ್ದು, ಕಂಪನಿಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಇದು ಅನುಕೂಲವಾಗಲಿದೆ. ಆದರೆ ಮೊರಟೋರಿಯಂನ 4 ವರ್ಷದ ಅವಧಿಯ ಬಡ್ಡಿಯನ್ನು ಪಾವತಿಸುವಂತೆ ತಿಳಿಸಲಾಗಿದೆ.
-
Today the cabinet has decided to allow 100% FDI (Foreign Direct Investment) through automatic route in the telecom sector. All safeguards will be applicable: Ashwini Vaishnaw, Minister for Communications pic.twitter.com/0W7knYZ1Tn
— ANI (@ANI) September 15, 2021 " class="align-text-top noRightClick twitterSection" data="
">Today the cabinet has decided to allow 100% FDI (Foreign Direct Investment) through automatic route in the telecom sector. All safeguards will be applicable: Ashwini Vaishnaw, Minister for Communications pic.twitter.com/0W7knYZ1Tn
— ANI (@ANI) September 15, 2021Today the cabinet has decided to allow 100% FDI (Foreign Direct Investment) through automatic route in the telecom sector. All safeguards will be applicable: Ashwini Vaishnaw, Minister for Communications pic.twitter.com/0W7knYZ1Tn
— ANI (@ANI) September 15, 2021
ಎಜಿಆರ್, ತರಂಗಾಂತರ ಬಳಕೆ ಶುಲ್ಕ ವಾರ್ಷಿಕವಾಗಿ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ದೂರಸಂಪರ್ಕ ಆಪರೇಟರ್ಗಳು ತಮಗೆ ಲಾಭಕರ ಎನಿಸುವ ತರಂಗಾಂತರ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪ್ರಮುಖವಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವೊಡಾಫೋನ್, ಏರ್ಟೆಲ್ ನಿಟ್ಟಿಸಿರುಬಿಟ್ಟಿವೆ. ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಇವುಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ಹೊಸ ಸಿಮ್ ಕಾರ್ಡ್ ಖರೀದಿ ಡಿಜಿಟಲೀಕರಣ
ಇನ್ಮುಂದೆ ಗ್ರಾಹಕರು ಹೊಸದಾಗಿ ಸಿಮ್ ಖರೀದಿ ಮಾಡಲು ಯಾವುದೇ ರೀತಿಯ ಫಾರಂ ಭರ್ತಿ ಮಾಡಬೇಕಾಗಿಲ್ಲ. ಎಲ್ಲ ಕಾರ್ಯ ಡಿಜಿಟಲ್ ಮೂಲಕವೇ ನಡೆಯಲಿದೆ ಎಂದು ಸಚಿವರು ತಿಳಿಸಿದರು. ಪ್ರಮುಖವಾಗಿ ಮೊಬೈಲ್ ಸಿಮ್ ಕಾರ್ಡ್ ದಾಖಲೆ, ಕೆವೈಸಿ ಎಲ್ಲವೂ ಡಿಜಿಟೈಸ್ ಆಗಿರಲಿದೆ. ಮೊಬೈಲ್ ನಂಬರ್ ಕೆವೈಸಿ ಪ್ರಕ್ರಿಯೆ ಸರಳೀಕರಣ ಮಾಡಲಿದ್ದೇವೆ ಎಂದು ವಿವರಿಸಿದರು.
ಆಟೋವಲಯಕ್ಕೂ ಬಿಗ್ ಬೂಸ್ಟ್
ಕೇಂದ್ರ ಸಚಿವ ಸಂಪುಟ ಆಟೋ ವಲಯಕ್ಕೂ ಬಿಗ್ ರಿಲೀಫ್ ನೀಡಲಾಗಿದ್ದು, ಈ ವಲಯದ ಅಭಿವೃದ್ಧಿಗಾಗಿ 26,000 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದೆ. ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ಹಾಗೂ ಹೈಡ್ರೋಜನ್ ಇಂಧನ ವಾಹನಗಳ ಉತ್ಪಾದನೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ 7.5 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.