ಜಕಾರ್ತಾ: ಬಾಲಿ ದ್ವೀಪದ ಉತ್ತರದ ನೀರಿನಲ್ಲಿ ತಾಲೀಮು ನಡೆಸುತ್ತಿದ್ದಾಗ ನಾಪತ್ತೆಯಾಗಿರುವ ಜಲಾಂತರ್ಗಾಮಿ ನಂಗಲಾ -402 ನ ನೀರೊಳಗಿನ ಚಲನೆಯನ್ನು ಇಂಡೋನೇಷ್ಯಾ ಸೇನೆ ಪತ್ತೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಪರ್ಕವಾದ ಕೆಲ ನಿಮಿಷಗಳಲ್ಲಿ ಮತ್ತೆ ಸಂಪರ್ಕ ಕಳೆದು ಹೋಗಿದೆ. ಆದ್ದರಿಂದ ಇದು ಜಲಾಂತರ್ಗಾಮಿ ಎಂದು ಗುರುತಿಸಲು ಇನ್ನೂ ನಮ್ಮಲ್ಲಿ ಸಾಕಷ್ಟು ಮಾಹಿತಿ ಇಲ್ಲ ಎಂದು ಮಿಲಿಟರಿ ವಕ್ತಾರ ಅಚ್ಮದ್ ರಿಯಾದ್ ಹೇಳಿದ್ದಾರೆ. ಒಂದು ಹೆಲಿಕಾಪ್ಟರ್ ಮತ್ತು ಎರಡು ಮಿಲಿಟರಿ ಹಡಗುಗಳು ತೈಲ ಸೋರಿಕೆ ಮತ್ತು ಇಂಧನದ ವಾಸನೆಯನ್ನು ಕಂಡು ಕೊಂಡವು. ಆದರೆ, ಇದು ಜಲಾಂತರ್ಗಾಮಿಯ ಇಂಧನ ಎಂದು ತೀರ್ಮಾನಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಸಿಂಗಾಪುರ ಸ್ವಿಫ್ಟ್ ಹಡಗು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಶನಿವಾರ ಬಾಲಿಗೆ ಆಗಮಿಸುವ ನಿರೀಕ್ಷೆ ಇದೆ. ಮೆಗಾ ಬಕ್ಟಿ ಮಲೇಷ್ಯಾ ಹಡಗು ಏಪ್ರಿಲ್ 26 ರಂದು ಬರಲಿದೆ. ಯುಎಸ್, ಜರ್ಮನಿ, ಫ್ರಾನ್ಸ್, ಟರ್ಕಿ, ಭಾರತ, ರಷ್ಯಾ ಮತ್ತು ಆಸ್ಟ್ರೇಲಿಯಾದಿಂದಲೂ ಸಹಾಯ ಬಂದಿವೆ ಎನ್ನಲಾಗಿದೆ. ನಂಗಲಾ - 402 1981ರಲ್ಲಿ ಇಂಡೋನೇಷ್ಯಾ ನೌಕಾಪಡೆಗೆ ಸೇರಿತು. ಈ ಜಲಾಂತರ್ಗಾಮಿ ನಿನ್ನೆ ಮುಂಜಾನೆ ತಾಲೀಮಿನಲ್ಲಿ ತೊಡಗಿಕೊಂಡಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.