ETV Bharat / bharat

ಪುರಿ ನಿಶ್ಚಲಾನಂದ ಸರಸ್ವತಿ ಭೇಟಿಯಾದ ಉಮಾ ಭಾರತಿ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಭಾನುವಾರ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿ ಮಾಡಿದರು.

Senior BJP leader Uma Bharti
ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ
author img

By

Published : Jan 17, 2022, 6:56 AM IST

ಪುರಿ(ಓಡಿಶಾ): ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಭಾನುವಾರ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿ ಮಾಡಿದರು.

ಉಮಾ ಭಾರತಿ ಹಾಗೂ ನಿಶ್ಚಲಾನಂದ ಸರಸ್ವತಿ ಭೇಟಿ ಸಂದರ್ಭದಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೋವಿಡ್​ ​ಹಿನ್ನೆಲೆ ಪುರಾತನ (12 ನೇ ಶತಮಾನ) ಜಗನ್ನಾಥ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಹಿನ್ನೆಲೆ ಉಮಾ ಭಾರತಿ ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ನಿನ್ನೆ (ಭಾನುವಾರ) ದೇಗುಲಕ್ಕೆ ಭೇಟಿ ನೀಡುವ ಮುನ್ನ ಅವರು ಸಿಂಹದ್ವಾರದ ಬಳಿ ದೇವಾಲಯದ ಹೊರಗಿನಿಂದ ಪತಿತಪಾಬನ (ಜಗನ್ನಾಥನ ಪ್ರತಿರೂಪ) ದರ್ಶನ ಪಡೆದರು.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗೆ ಮುನ್ನ ನಿಶ್ಚಲಾನಂದ ಸರಸ್ವತಿ ಅವರ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬನದ ಹುಣ್ಣಿಮೆ ನಿಮಿತ್ತ ಸೋಮವಾರ ನಡೆಯಬೇಕಿದ್ದ ಸವದತ್ತಿ ಯಲ್ಲಮ್ಮದೇವಿ ಬೃಹತ್ ಜಾತ್ರೆ ರದ್ದು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.