ETV Bharat / bharat

ಜಿ-7 ಶೃಂಗಕ್ಕೆ ಭಾರತವನ್ನು ಆಹ್ವಾನಿಸಿದ ಇಂಗ್ಲೆಂಡ್: ಶೀಘ್ರದಲ್ಲೇ ಭಾರತಕ್ಕೆ ಬರ್ತಾರಾ ಬೋರಿಸ್‌?

author img

By

Published : Jan 17, 2021, 3:21 PM IST

ಜಿ-7 ಒಟ್ಟು ಏಳು ರಾಷ್ಟ್ರಗಳ ಸಂಘಟನೆಯಾಗಿದ್ದು, ಇದರಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್, ಅಮೆರಿಕ ರಾಷ್ಟ್ರಗಳಿವೆ. ಇವುಗಳಲ್ಲಿ ಕೆಲವು ರಾಷ್ಟ್ರಗಳು ಯೂರೋಪಿಯನ್ ಯೂನಿಯನ್ ಅನ್ನು ಕೂಡಾ ಪ್ರತಿನಿಧಿಸುತ್ತವೆ.

boris jonson and narendra modi
ಬೋರಿಸ್ ಜಾನ್ಸನ್ ಹಾಗೂ ನರೇಂದ್ರ ಮೋದಿ

ನವದೆಹಲಿ: ಇದೇ ವರ್ಷ ಜೂನ್​ ತಿಂಗಳಲ್ಲಿ ಇಂಗ್ಲೆಂಡ್​ನ ಕಾರ್ನ್​ವೆಲ್​ ಪ್ರಾಂತ್ಯದಲ್ಲಿ ನಡೆಯಲಿರುವ ಜಿ-7 ರಾಷ್ಟ್ರಗಳ ಶೃಂಗಸಭೆ ಸಮ್ಮೇಳನಕ್ಕೆ ಅತಿಥಿಯಾಗಿ ಭಾರತವನ್ನು ಇಂಗ್ಲೆಂಡ್ ಆಹ್ವಾನಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಭಾರತದ ಪ್ರಧಾನಿಯನ್ನು ಜಿ-7 ಶೃಂಗಸಭೆಗೆ ಆಹ್ವಾನಿಸಲಾಗಿದ್ದು, ತಾವೂ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಜಾನ್ಸನ್, ಜಗತ್ತಿಗೆ ಪೂರೈಕೆಯಾಗುತ್ತಿರುವ ಕೊರೊನಾ ಲಸಿಕೆಗಳಲ್ಲಿ ಶೇ. 50ರಷ್ಟು ಪಾಲನ್ನು ಭಾರತ ಪೂರೈಸುತ್ತಿದೆ. ಬ್ರಿಟನ್ ಮತ್ತು ಭಾರತ ಕೊರೊನಾ ಸೋಂಕಿನ ವಿರುದ್ಧ ಒಟ್ಟಾಗಿ ಹೋರಾಡುತ್ತಿವೆ ಎಂದು ಹೇಳಿದರು.

ಜನವರಿ 26ರಂದು ನಡೆಯಲಿರುವ ಭಾರತದ ಗಣರಾಜ್ಯೋತ್ಸವಕ್ಕೆ ಭೇಟಿ ನೀಡಬೇಕಿದ್ದ ಬೋರಿಸ್ ಜಾನ್ಸನ್, ಕೊರೊನಾ ಸೋಂಕಿನ ಕಾರಣಕ್ಕೆ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದರು. ಈಗ ಜಿ-7 ರಾಷ್ಟ್ರಗಳ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವುದಾಗಿ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ಜೂನ್ ಮೊದಲೇ ಬೋರಿಸ್ ಭಾರತಕ್ಕೆ ಬರುವ ಸೂಚನೆ ನೀಡಿದ್ದಾರೆ.

ಭಾರತದ ಜೊತೆಗೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ರಾಷ್ಟ್ರಗಳನ್ನೂ ಕೂಡಾ ಈ ಬಾರಿಯ ಜಿ-7 ರಾಷ್ಟ್ರಗಳ ಶೃಂಗಸಭೆಗೆ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ.

ಏನಿದು ಜಿ-7 ರಾಷ್ಟ್ರಗಳ ಸಂಘಟನೆ?

ಜಿ-7 ಒಟ್ಟು ಏಳು ರಾಷ್ಟ್ರಗಳ ಸಂಘಟನೆಯಾಗಿದ್ದು, ಈ ಸಂಘಟನೆಯಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್, ಅಮೆರಿಕ ರಾಷ್ಟ್ರಗಳಿವೆ. ಇವುಗಳಲ್ಲಿ ಕೆಲವು ರಾಷ್ಟ್ರಗಳು ಯೂರೋಪಿಯನ್ ಯೂನಿಯನ್ ಅನ್ನು ಕೂಡಾ ಪ್ರತಿನಿಧಿಸುತ್ತವೆ.

2018ರ ವರದಿಯಂತೆ ಜಿ-7 ರಾಷ್ಟ್ರಗಳು ಜಗತ್ತಿನ ಶೇ.46ರಷ್ಟು ಜಿಡಿಪಿ ಹೊಂದಿದ್ದವು. ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯನ್ನು ಹೊಂದಿರುವ ಜಾಗತಿಕ ಸಂಘಟನೆಗಳಲ್ಲಿ ಜಿ-7 ಒಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.