ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ಸೇರಿ ಆರು ರಾಜ್ಯಗಳಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಇದರಲ್ಲಿ ಅಂಧೇರಿ ಪೂರ್ವ ವಿಧಾನಸಭಾ ಮತ ಕ್ಷೇತ್ರದ ಮತದಾರರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ 66 ಸಾವಿರಕ್ಕೂ ಅಧಿಕ ಮತಗಳಿಂದ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನೋಟಾ (ಈ ಮೇಲಿನ ಯಾರೂ ಅಲ್ಲ) ಮತಗಳೇ ಎರಡನೇ ಸ್ಥಾನದಲ್ಲಿವೆ.
ನವೆಂಬರ್ 3ರಂದು ನಡೆದ ಅಂಧೇರಿ ಪೂರ್ವ ಉಪ ಚುನಾವಣೆಯ ಮತದಾನದಲ್ಲಿ ಒಟ್ಟಾರೆ 86,570 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ರುತುಜಾ ಲಟ್ಕೆ 66,530 (ಶೇ.76.30) ಮತಗಳನ್ನು ಪಡೆದಿದ್ದಾರೆ. ಇವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಅಭ್ಯರ್ಥಿ ಕೂಡ ಕಠಿಣ 2 ಸಾವಿರ ಮತಗಳನ್ನೂ ಪಡೆಯಲು ಸಾಧ್ಯವಾಗಿಲ್ಲ. ಸ್ವತಂತ್ರ ಅಭ್ಯರ್ಥಿಗಳಾದ ರಾಜೇಶ್ ತ್ರಿಪಾಠಿ 1,571 ಮತ್ತು ನೀನಾ ಖೇದೇಕರ್ 1,531 ಹಾಗೂ ಆಪ್ಕಿ ಆಪ್ನಿ ಪಕ್ಷದ ಬಿ.ವಿ.ವಿನಾಯಕ ನಡಾರ್ 1,515 ಮಾತ್ರ ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.
-
अंधेरी पोटनिवडणूकीत दणदणीत यश मिळवून विजयी झालेल्या श्रीमती ऋतुजा लटके यांच्या विजयाचा आनंद शिवसेना परिवारासह उद्धवसाहेबांच्या उपस्थितीत मातोश्रीवर साजरा केला. हा निष्ठेचा विजय आहे आणि विजयाची ही मशाल अखंड तेवत राहण्यासाठी आम्ही सारे शिवसैनिक सतत कार्यरत राहू! pic.twitter.com/UZdmG6RgYv
— Aaditya Thackeray (@AUThackeray) November 6, 2022 " class="align-text-top noRightClick twitterSection" data="
">अंधेरी पोटनिवडणूकीत दणदणीत यश मिळवून विजयी झालेल्या श्रीमती ऋतुजा लटके यांच्या विजयाचा आनंद शिवसेना परिवारासह उद्धवसाहेबांच्या उपस्थितीत मातोश्रीवर साजरा केला. हा निष्ठेचा विजय आहे आणि विजयाची ही मशाल अखंड तेवत राहण्यासाठी आम्ही सारे शिवसैनिक सतत कार्यरत राहू! pic.twitter.com/UZdmG6RgYv
— Aaditya Thackeray (@AUThackeray) November 6, 2022अंधेरी पोटनिवडणूकीत दणदणीत यश मिळवून विजयी झालेल्या श्रीमती ऋतुजा लटके यांच्या विजयाचा आनंद शिवसेना परिवारासह उद्धवसाहेबांच्या उपस्थितीत मातोश्रीवर साजरा केला. हा निष्ठेचा विजय आहे आणि विजयाची ही मशाल अखंड तेवत राहण्यासाठी आम्ही सारे शिवसैनिक सतत कार्यरत राहू! pic.twitter.com/UZdmG6RgYv
— Aaditya Thackeray (@AUThackeray) November 6, 2022
ನೋಟಾ ಮತಗಳಿಗೆ 2ನೇ ಸ್ಥಾನ: ಅಂಧೇರಿ ಪೂರ್ವ ಕ್ಷೇತ್ರದ ಜನತೆ ನೋಟಾಗೆ ಹೆಚ್ಚಿನ ಮಹತ್ವ ಕೊಟ್ಟಂತಿದೆ. ಯಾಕೆಂದರೆ, ಶೇ.14ರಷ್ಟು ಮತಗಳೆಂದರೆ ಒಟ್ಟಾರೆ 12,806 ಮತಗಳನ್ನು ನೋಟಾ ಒತ್ತಲಾಗಿದೆ. ವಿಜೇತ ಅಭ್ಯರ್ಥಿ ರುತುಜಾ ಲಟ್ಕೆ ಅವರಿಗೆ ಚಲಾವಣೆಯಾದ ಮತಗಳ ನಂತರ ನೋಟಾ ಮತಗಳ ಸಂಖ್ಯೆಯೇ ಅಧಿಕವಾಗಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ 56 ಸ್ಥಾನಗಳನ್ನು ಗೆದ್ದಿತ್ತು. ಇದರಲ್ಲಿ ಅಂಧೇರಿ ಪೂರ್ವ ಕ್ಷೇತ್ರದಿಂದ ಗೆದ್ದಿದ್ದ ರಮೇಶ್ ಲಟ್ಕೆ ಅಕಾಲಿಕ ನಿಧನ ಹೊಂದಿದ್ದರು. ಇದರಿಂದ ಈ ಕ್ಷೇತ್ರ ತೆರವಾಗಿತ್ತು. ಇದರ ನಡುವೆ ಜೂನ್ನಲ್ಲಿ ಏಕನಾಥ್ ಶಿಂದೆ ನೇತೃತ್ವದಲ್ಲಿ 40 ಜನ ಶಾಸಕರು ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದರು. ಹೀಗಾಗಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಪತನವಾಗಿತ್ತು.
ನಂತರದಲ್ಲಿ ಬಿಜೆಪಿಯೊಂದಿಗೆ ಸೇರಿಕೊಂಡು ಏಕನಾಥ್ ಶಿಂದೆ ಸರ್ಕಾರ ರಚಿಸಿ ಸಿಎಂ ಆಗಿದ್ದಾರೆ. ಇದೀಗ ಬಿಜೆಪಿ ಮತ್ತು ಏಕನಾಥ್ ಶಿಂದೆ ಬಣ ಅಧಿಕಾರಕ್ಕೆ ಬಂದ ನಂತರ ಮೊದಲ ಚುನಾವಣೆ ಇದಾಗಿತ್ತು. ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ ಅವರಿಗೆ ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ನೀಡಿದ್ದವು.
ಉಪಚುನಾವಣೆಯ ಫಲಿತಾಂಶದ ನಂತರ ವಿಜೇತ ಅಭ್ಯರ್ಥಿ ರುತುಜಾ ಲಟ್ಕೆ, ಶಿವಸೇನೆಯ ಉದ್ಧವ್ ಠಾಕ್ರೆ ನಿವಾಸ ‘ಮಾತೋಶ್ರೀ’ಗೆ ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, "ಇದು ಹೋರಾಟದ ಆರಂಭವಷ್ಟೇ. ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಮುಖ್ಯ. ಆದರೆ, ಜನತೆ ಚಾರಿತ್ರ್ಯವನ್ನೂ ನೋಡುತ್ತಾರೆ. ಈ ಉಪ ಚುನಾವಣೆಯ ಫಲಿತಾಂಶವು ನಮ್ಮ ಬೆಂಬಲವನ್ನು ಸಾಬೀತು ಪಡಿಸಿದೆ" ಎಂದು ಹೇಳಿದರು.
ಇದನ್ನೂ ಓದಿ: ಉಪ ಚುನಾವಣೆ ಗುದ್ದಾಟದಲ್ಲಿ 'ಕಮಲ' ಕಮಾಲ್; ಕೆಲವೆಡೆ ಅಚ್ಚರಿ ಫಲಿತಾಂಶ