ETV Bharat / bharat

ಬೈಕ್ ನಂಬರ್ '2611' ಉದಯಪುರ್ ಕೊಲೆಗಾರರಿಗೂ ಮುಂಬೈ ಸರಣಿ ದಾಳಿಗೂ ನಂಟು? - ರಾಜಸ್ಥಾನ್ ಕೊಲೆ

ಜೂನ್ 28 ರಂದು ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಭೀಭತ್ಸವಾಗಿ ಹತ್ಯೆ ಮಾಡಿರುವ ಪಾತಕಿಗಳಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ 2013ರಲ್ಲಿ ತಯಾರಾದ ಬೈಕ್ ಮೇಲೆ ಪರಾರಿಯಾಗುತ್ತಿದ್ದರು. ಆದರೆ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಭೀಮ್ ಎಂಬ ಪ್ರದೇಶದ ಬಳಿ ರಾಜಸಮಂದ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದರು.

Etv Bharat
Etv Bharat
author img

By

Published : Jul 1, 2022, 6:23 PM IST

ಉದಯಪುರ್: ಹಿಂದೂ ಟೈಲರ್ ಒಬ್ಬನ ಶಿರಚ್ಛೇದಗೊಳಿಸಿ ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಲು ಬಳಸಿದ ಬೈಕ್ ರಜಿಸ್ಟ್ರೇಶನ್ ನಂಬರ್ 2611 ಆಗಿದ್ದು, ಅಚ್ಚರಿಯ ಜೊತೆಗೆ ಆಘಾತವನ್ನುಂಟು ಮಾಡಿದೆ. 2008 ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಗೂ ಈ ಕೊಲೆಗಡುಕರಿಗೂ ಏನಾದರೂ ಸಂಬಂಧವಿದೆಯಾ ಎಂಬ ಸಂಶಯ ಮೂಡಿಸುತ್ತಿದೆ 2611 ಸಂಖ್ಯೆ.!

ಮುಂಬೈ ಮೇಲೆ ಸರಣಿ ಭಯೋತ್ಪಾದಕ ದಾಳಿ ನಡೆದ ದಿನಾಂಕ ನವೆಂಬರ್ 26 ರಂದು. ಇದನ್ನು ಸಾಮಾನ್ಯವಾಗಿ 26/11 ಎಂದು ಬಳಸಲಾಗುತ್ತದೆ.

ಜೂನ್ 28 ರಂದು ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಭೀಭತ್ಸವಾಗಿ ಹತ್ಯೆ ಮಾಡಿರುವ ಮತಾಂದರಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ 2013 ರಲ್ಲಿ ತಯಾರಾದ ಬೈಕ್ ಮೇಲೆ ಪರಾರಿಯಾಗುತ್ತಿದ್ದರು. ಆದರೆ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಭೀಮ್ ಎಂಬ ಪ್ರದೇಶದ ಬಳಿ ರಾಜಸಮಂದ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದರು.

"ಆರೋಪಿಗಳು RJ 27 AS 2611 ನಂಬರಿನ ಬೈಕ್ ಮೇಲೆ ಪರಾರಿಯಾಗುತ್ತಿದ್ದರು. ಬೈಕನ್ನು ಹೆಚ್ಚಿನ ತನಿಖೆಗಾಗಿ ಎಸ್​ಐಟಿ ವಶಕ್ಕೆ ಕೊಡಲಾಗಿದೆ." ಎಂದು ಭೀಮ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹೇಳಿದ್ದಾರೆ.

ಬೈಕ್ ರಿಯಾಜ್ ಅಖ್ತರಿ ಎಂಬಾತನ ಹೆಸರಿಗೆ 2013 ರಲ್ಲಿ ನೋಂದಣಿಯಾಗಿದ್ದು, ಅದಕ್ಕೆ 2611 ನಂಬರ್ ಪಡೆಯಲು 1000 ರೂಪಾಯಿಗಳನ್ನು ಪಾವತಿಸಲಾಗಿತ್ತು ಎಂದು ಉದಯಪುರ್ ಆರ್​ಟಿಓ ಪ್ರಭು ಲಾಲ್ ಬಾಮ್ನಿಯಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.