ETV Bharat / bharat

ಭಾರತದ ಕ್ರಿಕೆಟ್​ ಭವಿಷ್ಯ ಸುರಕ್ಷಿತವಾಗಿದೆ: ಅಂಡರ್​-19 ವಿಶ್ವಕಪ್​ ಗೆಲುವಿಗೆ ಮೋದಿ ಮೆಚ್ಚುಗೆ

author img

By

Published : Feb 6, 2022, 9:05 AM IST

ಭಾರತದ ಕ್ರಿಕೆಟ್ ಭವಿಷ್ಯವು ಸುರಕ್ಷಿತವಾಗಿದೆ ಮತ್ತು ಸಮರ್ಥರ ಕೈಯಲ್ಲಿದೆ ಎಂಬುದನ್ನು ಈ ಅಂಡರ್​-19 ವಿಶ್ವಕಪ್ ಪಂದ್ಯ ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

U19 WC triumph shows future of Indian cricket is in safe, able hands: PM Modi
ಭಾರತದ ಕ್ರಿಕೆಟ್​ ಭವಿಷ್ಯ ಸುರಕ್ಷಿತವಾಗಿದೆ: ಅಂಡರ್​-19 ವಿಶ್ವಕಪ್​ ಗೆಲುವಿಗೆ ಮೋದಿ ಮೆಚ್ಚುಗೆ

ನವದೆಹಲಿ: ಅಂಡರ್-19 ಕ್ರಿಕೆಟ್​​​ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಮ್ ಇಂಡಿಯಾವನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದು, ಭಾರತದ ಕ್ರಿಕೆಟ್ ಭವಿಷ್ಯವು ಸುರಕ್ಷಿತವಾಗಿದೆ ಮತ್ತು ಸಮರ್ಥರ ಕೈಯಲ್ಲಿದೆ ಎಂಬುದನ್ನು ಈ ವಿಶ್ವಕಪ್ ಪಂದ್ಯ ಸಾಬೀತುಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನಮ್ಮ ಯುವ ಕ್ರಿಕೆಟಿಗರ ಬಗ್ಗೆ ಅತ್ಯಂತ ಹೆಮ್ಮೆಯಿದೆ. ಐಸಿಸಿ ಅಂಡರ್​- 19 ಕ್ರಿಕೆಟ್​ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಅವರು ಈ ಪಂದ್ಯಾವಳಿಯಲ್ಲಿ ಉತ್ತಮ ಸ್ಥೈರ್ಯವನ್ನು ತೋರಿಸಿದ್ದಾರೆ. ಭಾರತದ ಕ್ರಿಕೆಟ್ ಭವಿಷ್ಯವು ಸುರಕ್ಷಿತವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Extremely proud of our young cricketers. Congratulations to the Indian team for winning the ICC U19 World Cup. They have shown great fortitude through the tournament. Their stellar performance at the highest level shows that the future of Indian cricket is in safe and able hands.

    — Narendra Modi (@narendramodi) February 6, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಟೀಂ ಇಂಡಿಯಾದಿಂದ ಇಂದು 1000ನೇ ಏಕದಿನ ಪಂದ್ಯ: ಸಜ್ಜಾಗಿದ್ದಾರೆ ಬ್ಲ್ಯೂ ಬಾಯ್ಸ್​

ಶನಿವಾರ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತವು ಐದನೇ ಅಂಡರ್ 19 ಕ್ರಿಕೆಟ್​ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಯಶ್ ಧುಲ್ ನೇತೃತ್ವದ ತಂಡ ಈ ಸಾಧನೆ ಮಾಡಿದ್ದು, ಇದಕ್ಕೂ ಮೊದಲು ಭಾರತ 2000, 2008, 2012 ಮತ್ತು 2018ರಲ್ಲಿ ಅಂಡರ್​-19 ಕ್ರಿಕೆಟ್​ ವಿಶ್ವಕಪ್ ಗೆದ್ದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.