ETV Bharat / bharat

ಪ್ರೀತಿ ಒಪ್ಪದಿದ್ದಕ್ಕೆ ಕುಡಿಯೋ ನೀರಲ್ಲಿ ಕೀಟನಾಶಕ ಬೆರೆಸಿ ದಲಿತ ಬಾಲಕಿಯರ ಕೊಲೆ: ಆರೋಪಿಗಳ ಸೆರೆ - ಬಾಲಕಿಯರಿಗೆನೀರಿನಲ್ಲಿ ವಿಷಪ್ರಾಶನ

ವಿನಯ್ ಮತ್ತು ರಾಜು ಬಂಧಿತ ಆರೋಪಿಗಳಾಗಿದ್ದು, ಪ್ರೇಮ ವೈಫಲ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಲಕ್ಷ್ಮೀ ಸಿಂಗ್ ಮಾಹಿತಿ ನೀಡಿದ್ದಾರೆ.

Two youths arrested for poisoning Unnao girls
ಪ್ರೀತಿ ಒಪ್ಪದ್ದಕ್ಕೆ ಕುಡಿಯೋ ನೀರಲ್ಲಿ ಕೀಟನಾಶಕ ಬೆರೆಸಿ ದಲಿತ ಬಾಲಕಿಯರ ಕೊಂದಿದ್ದವರ ಸೆರೆ
author img

By

Published : Feb 19, 2021, 9:49 PM IST

ಉನ್ನಾವೋ, ಉತ್ತರ ಪ್ರದೇಶ: ಉನ್ನಾವೋದಲ್ಲಿ ಇಬ್ಬರು ದಲಿತ ಬಾಲಕಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿನಯ್ ಮತ್ತು ರಾಜು ಬಂಧಿತ ಆರೋಪಿಗಳಾಗಿದ್ದು, ಪ್ರೇಮ ವೈಫಲ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಲಕ್ಷ್ಮೀ ಸಿಂಗ್ ಮಾಹಿತಿ ನೀಡಿದ್ದಾರೆ.

ಬಂಧಿತರಲ್ಲಿ ಓರ್ವ ವ್ಯಕ್ತಿ ದಲಿತ ಬಾಲಕಿಯನ್ನು ಪ್ರೀತಿಸುತ್ತಿದ್ದು, ಆಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಕಾರಣದಿಂದ ಕೋಪಗೊಂಡ ಯುವಕ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಕುಡಿಯುವ ನೀರಿನಲ್ಲಿ ಕೀಟನಾಶಕ ಬೆರೆಸಿ, ತನ್ನ ಸ್ನೇಹಿತನ ಮೂಲಕ ಬಾಲಕಿಗೆ ಕುಡಿಯಲು ಕೊಟ್ಟಿದ್ದನಂತೆ.

ಇದನ್ನೂ ಓದಿ: ಅತ್ಯಾಚಾರ ಮಾಡಿದ್ದೀರಿ, ಆದ್ರೆ ನನ್ನನ್ನು ಕೊಲ್ಲಬೇಡಿ; ಕಾಮುಕರ ಬಳಿ ಯುವತಿ ಮನವಿ!

ಈ ವೇಳೆ ಬಾಲಕಿಯ ಜೊತೆಗಿದ್ದ ಮೂವರು ಸ್ನೇಹಿತೆಯರೂ ಕೂಡ ನೀರನ್ನು ಕುಡಿದಿದ್ದಾರೆ. ಬಾಯಲ್ಲಿ ನೊರೆ ಬಂದು, ಬಾಲಕಿಯರು ಮೂರ್ಛೆ ಬಿದ್ದಾಗ ಯುವಕರು ಪರಾರಿಯಾಗಿದ್ದರು.

ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಮತ್ತೋರ್ವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.