ETV Bharat / bharat

ಬಿಸಿ ಸಾಂಬಾರು ಪಾತ್ರೆಯಲ್ಲಿ ಬಿದ್ದ ಪುಟ್ಟ ಬಾಲಕಿ..

author img

By

Published : Feb 15, 2022, 2:28 PM IST

ಕೇರಿಯ ಮನೆಯೊಂದರಲ್ಲಿ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ವೇಳೆ ಸಾಂಬಾರು ತಯಾರಿಸುತ್ತಿದ್ದ ಸ್ಥಳಕ್ಕೆ ಆಟವಾಡುತ್ತಾ ಬಂದ ಎರಡು ವರ್ಷದ ಮಗು ಸಾಂಬಾರು ಪಾತ್ರೆಗೆ ಬಿದ್ದಿದೆ. ಸ್ಥಳದಲ್ಲಿದ್ದವರು ಮಗುವನ್ನು ಪಾತ್ರೆಯಿಂದ ಮೇಲಕ್ಕೆ ಎತ್ತಿದ್ದಾರೆ..

two year old child dies after falling into sambar bowl in krishna district
ಬಿಸಿ ಸಾಂಬಾರು ಪಾತ್ರೆಯಲ್ಲಿ ಬಿದ್ದು ಪುಟ್ಟ ಬಾಲಕಿ ಮೃತ

ಕೃಷ್ಣಾ, ಆಂಧ್ರಪ್ರದೇಶ : ಸಾವು ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ ಬರಬಹುದು. ಸಾವನ್ನು ಯಾರೂ ಅಂದಾಜಿಸಲು ಸಾಧ್ಯವಿಲ್ಲ. ಆಂಧ್ರಪ್ರದೇಶದಲ್ಲಿ ಸಾಂಬಾರ್ ಪಾತ್ರೆಯೊಂದು ಪುಟ್ಟ ಬಾಲಕಿಯನ್ನು ಬಲಿ ತೆಗೆದುಕೊಂಡ ಘಟನೆ ನಡೆದಿದೆ.

ಸಾಂಬಾರ್ ಬಟ್ಟಲಿಗೆ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಸನ್ನಪೇಟೆಯ ದಲಿತವಾಡದಲ್ಲಿ ನಡೆದಿದ್ದು, ಮಗುವಿನ ತಂದೆ-ತಾಯಿ, ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.

ಕೇರಿಯ ಮನೆಯೊಂದರಲ್ಲಿ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ವೇಳೆ ಸಾಂಬಾರು ತಯಾರಿಸುತ್ತಿದ್ದ ಸ್ಥಳಕ್ಕೆ ಆಟವಾಡುತ್ತಾ ಬಂದ ಎರಡು ವರ್ಷದ ಮಗು ಸಾಂಬಾರು ಪಾತ್ರೆಗೆ ಬಿದ್ದಿದೆ. ಸ್ಥಳದಲ್ಲಿದ್ದವರು ಮಗುವನ್ನು ಪಾತ್ರೆಯಿಂದ ಮೇಲಕ್ಕೆ ಎತ್ತಿದ್ದಾರೆ.

ಮಗು ಗಂಭೀರವಾಗಿ ಗಾಯಗೊಂಡಿದ್ದು, ಪೋಷಕರು ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ಪತಿಗೆ ಜೀವ ಬೆದರಿಕೆ ಹಾಕಿದ ಪತ್ನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.