ಶ್ರೀನಗರ : ಶೋಪಿಯಾನ್ ಜಿಲ್ಲೆಯ ತ್ಸೆಮಾರ್ಗ್ ಗ್ರಾಮದಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಭಯೋತ್ಪಾದಕನನ್ನು ಯೋಧರು ಬೇಟೆಯಾಡಿದ್ದಾರೆ. ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ಕೈಗೊಂಡು ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ. ಈ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
14 ಗಂಟೆಗಳ ಕಾಲಾ ಈ ಕಾರ್ಯಾಚರಣೆ ನಡೆದಿತ್ತು. ಅವನೀರಾ ಮತ್ತು ತ್ಸೆಮಾರ್ಗ್ ಸಾಮಾನ್ಯ ಪ್ರದೇಶದಲ್ಲಿ ಭಯೋತ್ಪಾದಕರ ಬಗ್ಗೆ ಮಾಹಿತಿ ದೊರೆತು ತ್ಸೆಮಾರ್ಗ್‌ನಲ್ಲಿ ಭಯೋತ್ಪಾದಕ ಅಡಗಿರುವ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಭದ್ರತಾ ಪಡೆಗಳು ಶಂಕಿತ ಉಗ್ರರ ಮನೆಯ ಕಡೆಗೆ ಧಾವಿಸುತ್ತಿದ್ದಂತೆ ಅಲ್ಲಿ ಗುಂಡಿನ ದಾಳಿ ಶುರುವಾಗಿದೆ. ಕೂಡಲೇ ಎಚ್ಚೆತ್ತ ಸೈನಿಕರು ಸುತ್ತಲೂ ಇದ್ದ ಮನೆಗಳ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು. ಬಳಿಕ ಅಡಗಿ ಕುಳಿತಿದ್ದ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಉತ್ತರಪ್ರದೇಶದ ಸಂತೋಷ್ ಯಾದವ್ ಮತ್ತು ಮಹಾರಾಷ್ಟ್ರದ ರೋಮಿತ್ ಚವಾಣ್ ಎಂಬ ಯೋಧರು ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ.
ಹತನಾದ ಉಗ್ರನನ್ನು ಲಷ್ಕರ್ ಇ ತೊಯ್ಬಾ ದ ಮೊಹಮ್ಮದ್ ಖಯೂಮ್ ದಾರ್ ಎಂದು ಗುರುತಿಸಲಾಗಿದೆ. ಈತ ಪುಲ್ವಾಮ ಜಿಲ್ಲೆಯ ಕಾಕಪೊರದ ಲಾರೂ ನಿವಾಸಿ ಎಂದು ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ. ಹತನಾದ ಉಗ್ರನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಓದಿ : 12ನೇ ಅಂತಸ್ತಿನಲ್ಲಿ ವ್ಯಕ್ತಿಯಿಂದ ಅಪಾಯಕಾರಿ ವರ್ಕೌಟ್, ನೀವು ಪ್ರಯತ್ನಿಸಬೇಡಿ- ವೈರಲ್ ವಿಡಿಯೋ