ETV Bharat / bharat

ಜಮ್ಮು ಕಾಶ್ಮೀರ: ಕುಪ್ವಾರದಲ್ಲಿ ಇಬ್ಬರು ಉಗ್ರರ ಹತ್ಯೆಗೈದ ಸೇನೆ; ಅಪಾರ ಶಸ್ತ್ರಾಸ್ತ್ರ ವಶಕ್ಕೆ - ಗುಂಡಿನ ದಾಳಿ

ಜಮ್ಮು ಕಾಶ್ಮೀರದ ಕುಪ್ವಾರ ಮತ್ತು ಪುಲ್ವಾಮಾದಲ್ಲಿ ಇಂದು ಉಗ್ರರು ದಾಳಿ ನಡೆಸಿದ್ದಾರೆ.

Two Militants killed in Kupwara
ಪುಲ್ವಾಮಾ ಗುಂಡಿನ ದಾಳಿ
author img

By

Published : Jul 19, 2023, 1:15 PM IST

ಜಮ್ಮು- ಕಾಶ್ಮೀರ : ಉತ್ತರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡ ಉತ್ತರ ಸೇನಾ ಕಮಾಂಡರ್​, "ಮಚಿಲ್ ಸೆಕ್ಟರ್‌ ಗಡಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಾರತೀಯ ಸೇನೆ, ಬಿಎಸ್‌ಎಫ್ ಮತ್ತು ಜೆ & ಕೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರಗಾಮಿಗಳು ಕೊಲ್ಲಲಾಗಿದೆ. ನಾಲ್ಕು ಎಕೆ ರೈಫಲ್‌ಗಳು, ಆರು ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.

ಪೂಂಚ್‌ನಲ್ಲಿ ಭದ್ರತಾ ಪಡೆಗಳು ನಾಲ್ವರು ಭಯೋತ್ಪಾದಕರನ್ನು ಹತ್ಯೆಗೈದ ಒಂದು ದಿನದ ನಂತರ ಇಂದು ಮತ್ತೆ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.

ಪುಲ್ವಾಮದಲ್ಲಿ ಗುಂಡಿನ ದಾಳಿ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಂಗ್ರುಣಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಬಗೀಂದರ್ ಸಂಗ್ರುನಿ ಸೇತುವೆಯ ಬಳಿ ಅರಣ್ಯ ಇಲಾಖೆಯ ಗಸ್ತು ಪಡೆ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಿಂದ ಮೊಹಮ್ಕಾ ಫಾರೆಸ್ಟ್‌ನ ಇಬ್ಬರು ನೌಕರರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಗೋಜಿ ಪಥೇರಿ ಬುಡ್ಗಾಮ್‌ನ ಫಾರೆಸ್ಟರ್ ಜಹಾಂಗೀರ್ ಅಹ್ಮದ್ ಚಾಚಿ ಮತ್ತು ಮೊಹಮ್ಕಾ ಫಾರೆಸ್ಟ್‌ನ ತಾತ್ಕಾಲಿಕ ಉದ್ಯೋಗಿ ಇಮ್ರಾನ್ ಯೂಸುಫ್ ವಾನಿ ಮೊನೋಚಾರಿ ಷರೀಫ್ ಎಂದು ಗುರುತಿಸಲಾಗಿದೆ. ಚಿಕಿತ್ಸೆಗಾಗಿ ಇಬ್ಬರನ್ನೂ ಮೊದಲು ಸಿಎಚ್‌ಸಿ ರಾಜಪುರಕ್ಕೆ ಕರೆದೊಯ್ಯಲಾಗಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎಂಹೆಚ್‌ಎಸ್ ಆಸ್ಪತ್ರೆ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳೀಯರು ಕೂಡ ಗುಂಡಿನ ದಾಳಿಯನ್ನು ದೃಢಪಡಿಸಿದ್ದು, ಘಟನೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ : ಮುಂಬೈನಲ್ಲಿ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಯ ಏಜೆಂಟ್ ಸೆರೆ;​ ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಇನ್ನೊಂದೆಡೆ, ಅಪರಿಚಿತ ಬಂದೂಕುಧಾರಿಯನ್ನು ಬಂಧಿಸಲು ಸೇನೆಯೊಂದಿಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಪುಲ್ವಾಮಾ ಜಿಲ್ಲೆಯ ರಾಜ್‌ಪುರ ಪ್ರದೇಶದ ಬಗೀಂದರ್ ಸೇತುವೆಯಿಂದ ಸ್ವಲ್ಪ ದೂರದಲ್ಲಿರುವ ಸೋನಾ ಬಂಜಾರ್‌ನಲ್ಲಿ ಚೌಕಾವೊಂದನ್ನು ನಿರ್ಮಿಸಿದ್ದರು. ಅರಣ್ಯದಲ್ಲಿ ಅಕ್ರಮವಾಗಿ ಮರ ಕಡಿಯುತ್ತಿರುವವರನ್ನು ಹಿಡಿಯಲು ಅರಣ್ಯ ಸಿಬ್ಬಂದಿಯೇ ಈ ಯೋಜನೆ ರೂಪಿಸಿದ್ದರು.

ನಿನ್ನೆ ಸಂಜೆ ಅನಂತನಾಗ್‌ನಲ್ಲಿ ಅಪರಿಚಿತ ಬಂದೂಕುಧಾರಿ ಇಬ್ಬರು ಸ್ಥಳೀಯರಲ್ಲದವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಶೋಪಿಯಾನ್‌ನಲ್ಲಿ ಸಹ ಇಂತಹದ್ದೇ ಘಟನೆ ನಡೆದಿತ್ತು.

ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಗುಂಡಿನ ದಾಳಿ, ಇಬ್ಬರಿಗೆ ಗಾಯ

ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು : ಐವರು ಶಂಕಿತ ಉಗ್ರರ ಬಂಧನ, ತನಿಖೆ ತೀವ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.