ETV Bharat / bharat

ಕುಲ್ಗಾಮ್​​ನಲ್ಲಿ ಇಬ್ಬರು ಉಗ್ರರನ್ನು ಹೆಡೆಮುರಿ ಕಟ್ಟಿದ ಭದ್ರತಾ ಪಡೆ

author img

By

Published : Jun 30, 2021, 5:19 PM IST

ಜಮ್ಮು ಕಾಶ್ಮೀರದ ಭದ್ರತಾ ಪಡೆಗಳ ಕ್ಯಾಂಪ್​ ಬಳಿ ಡ್ರೋನ್​ಗಳು ಹಾರಾಟ ನಡೆಸಿ ಆತಂಕಕ್ಕೆ ಕಾರಣವಾಗಿರುವ ನಡುವೆಯೇ ಉಗ್ರರು ಭದ್ರತಾ ಪಡೆಯ ಮೇಲೆ ದಾಳಿಗೆ ಮುಂದಾಗಿದ್ದರು. ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ.

two-militants-killed-in-jammu-and-kashmirs-kulgam-encounter
ಕುಲ್ಗಾಮ್​​ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಕುಲ್ಗಾಮ್​​ (ಜಮ್ಮು ಮತ್ತು ಕಾಶ್ಮೀರ): ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಬೇಟೆಯಾಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇಲ್ಲಿನ ಚಿಮ್ಮರ್ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ದಾಳಿ ವೇಳೆ ಈ ಘಟನೆ ನಡೆದಿದೆ.

ಇದಕ್ಕೂ ಮೊದಲು ಮಂಗಳವಾರ ತಡರಾತ್ರಿ ಶ್ರೀನಗರ ಜಿಲ್ಲೆಯ ಮಲ್ಹೋರಾ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಅಲ್ಲದೆ ಓರ್ವ ಶರಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಮ್ಮರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚುವರಿಯಾಗಿ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಜಮ್ಮುಕಾಶ್ಮೀರದ ಭದ್ರತಾ ಪಡೆಗಳ ಕ್ಯಾಂಪ್​ ಬಳಿ ಮತ್ತೆರಡು ಡ್ರೋನ್​ಗಳು ಪತ್ತೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.