ಸೋಪಿಯಾನ್(ಜಮ್ಮು-ಕಾಶ್ಮೀರ): ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಸೇನಾಪಡೆಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೇ, ಉಗ್ರರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಡೂಮ್ವಾನಿ ಕೀಗಾಂನ ಶಾಹಿದ್ ಅಹ್ಮದ್ ಗೇನೆ ಮತ್ತು ಪಿಂಜೂರ್ ಶೋಪಿಯಾನ್ನ ಕಿಫಾಯತ್ ಅಯೂಬ್ ಅಲಿ ಬಂಧಿತ ಉಗ್ರರು.
ಈ ಇಬ್ಬರು ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯ್ಬಾ(ಎಲ್‌ಇಟಿ) ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಭಾನುವಾರದಂದು ಇಲ್ಲಿನ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸಿಆರ್ಪಿಎಫ್ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆಗೆ ನಡೆಸಿದ್ದಾರೆ.
ಈ ವೇಳೆ ಸೇನಾಪಡೆಗಳಿಗೆ ಪ್ರತಿರೋಧವೊಡ್ಡಿದ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಉಗ್ರರ ಮೇಲೆ ದಾಳಿ ಮಾಡಿದ ಸೇನಾಪಡೆಯ ಯೋಧರು ಇಬ್ಬರು ಉಗ್ರರ ಹೆಡೆಮುರಿ ಕಟ್ಟವಲ್ಲಿ ಯಶಸ್ವಿಯಾಗಿದ್ದಾರೆ.