ಜಮ್ಮು ಕಾಶ್ಮೀರ: ಜಿಲ್ಲೆಯ ಬೊಟಿಂಗೂ ಗ್ರಾಮದಲ್ಲಿ ಪೊಲೀಸರು ಹಾಗೂ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್ ನೇತೃತ್ವದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಎಲ್‌ಇಟಿ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಭಯೋತ್ಪಾದಕರ ಚಲನವಲನದ ಖಚಿತ ಮಾಹಿತಿ ಆಧಾರದ ಮೇಲೆ ಸೋಪೋರೆ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಮ್ತಿಯಾಜ್ ಅಹ್ಮದ್ ಗನಿ ಮತ್ತು ವಸೀಮ್ ಅಹ್ಮದ್ ಲೋನ್ ಎಂಬ ಇಬ್ಬರು ಎಲ್‌ಇಟಿ ಸಂಘಟನೆಯ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್, 8 ಪಿಸ್ತೂಲ್ ಸುತ್ತುಗಳು, ಒಂದು ಚೀನಾದ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶೋಪಿಯಾನ್ನಲ್ಲಿ ಹತರಾದ ಸ್ಥಳೀಯ ಉಗ್ರರಿಗೆ ಎಲ್‌ಇಟಿ ನಂಟು