ETV Bharat / bharat

2014ರ ಶ್ರೀನಗರ ಆ್ಯಸಿಡ್ ದಾಳಿ 'ಭಯಾನಕ' ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ - ಜಮ್ಮು ಮತ್ತು ಕಾಶ್ಮೀರ

2014 Srinagar acid attack case: ಡಿಸೆಂಬರ್ 11, 2014 ರಂದು ಶ್ರೀನಗರದ ನೌಶೇರಾದಲ್ಲಿ 20 ವರ್ಷದ ಕಾನೂನು ವಿದ್ಯಾರ್ಥಿಯ ಮೇಲೆ ಆ್ಯಸಿಡ್ ಎರಚಿದ ಇಬ್ಬರು ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜವಾದ್ ಅಹ್ಮದ್ ಅವರು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ
author img

By ETV Bharat Karnataka Team

Published : Aug 23, 2023, 10:25 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 2014ರ ಶ್ರೀನಗರ ಆ್ಯಸಿಡ್ ದಾಳಿ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಶ್ರೀನಗರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ ಆದೇಶಿಸಿದೆ. ಮತ್ತು ದಾಳಿಯನ್ನು "ಭಯಾನಕ" ಎಂದು ಕಳವಳ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರ ಸಂತ್ರಸ್ತರ ಪರಿಹಾರ ಯೋಜನೆ 2019ರ ಪ್ರಕಾರ ಸಂತ್ರಸ್ತೆಗೆ ಗರಿಷ್ಠ ಪರಿಹಾರ ನೀಡುವಂತೆ ನ್ಯಾಯಾಲಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ.

11 ಡಿಸೆಂಬರ್ 2014ರಲ್ಲಿ ನೌಶೇರಾ-ಶ್ರೀನಗರ ಮಾರ್ಗದಲ್ಲಿ 20 ವರ್ಷದ ಕಾನೂನು ವಿದ್ಯಾರ್ಥಿಯ ಮೇಲೆ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಇರ್ಷಾದ್ ಅಮೀನ್ ವಾನಿ ಮತ್ತು ಉಮರ್ ನೂರ್ ತಪ್ಪಿತಸ್ಥರು ಎಂದು ಘೋಷಿಸಿದ ಆರು ದಿನಗಳ ನಂತರ ಶ್ರೀನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜವಾದ್ ಅಹ್ಮದ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ತೀರ್ಪಿನ ಆದೇಶದಲ್ಲಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ಆರ್​ಪಿಸಿ ಸೆಕ್ಷನ್ 120-B ಅಡಿ ಶಿಕ್ಷಾರ್ಹ ಅಪರಾಧಕ್ಕಾಗಿ ತಲಾ 25,000 ರೂ. ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾಗುತ್ತಾರೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ವಿವಿಧ ಅಪರಾಧಗಳಿಗಾಗಿ ನೀಡಲಾದ ಶಿಕ್ಷೆ ಏಕಕಾಲದಲ್ಲಿ ಜಾರಿ: ಆರ್​ಪಿಸಿ(ವೃತ್ತಿಪರ ನಡವಳಿಕೆಯ ನಿಯಮ) ಸೆಕ್ಷನ್ 326-A ಅಡಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಆರ್​ಪಿಸಿ ಸೆಕ್ಷನ್ 326-A ಹಾಗೂ 120-B ಅಡಿ ಅಪರಾಧಕ್ಕಾಗಿ ದಂಡ ವಿಧಿಸಲಾಗುತ್ತದೆ. ಈ ಶಿಕ್ಷೆಯ ಮರಣದಂಡನೆಯು ಸೆಕ್ಷನ್ 376 ಸಿಆರ್​ಪಿಸಿ ಕೋಡ್​ 1989 ರ ಪ್ರಕಾರ ಉಚ್ಚ ನ್ಯಾಯಾಲಯದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ. ದಂಡವನ್ನು ವಸೂಲಿ ಮಾಡಿದಾಗ, ಸಂತ್ರಸ್ತರಿಗೆ ಸೆಕ್ಷನ್ 1 ಮತ್ತು 2 ರ ನಿಯಮಗಳ ಪ್ರಕಾರ ಪಾವತಿಸಲಾಗುತ್ತದೆ.

ದಂಡವನ್ನು ಪಾವತಿಸಲು ತಪ್ಪಿದಲ್ಲಿ, ಅಪರಾಧಿಗಳು ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಆರ್​ಪಿಸಿ ಸೆಕ್ಷನ್ 201ರ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷಾರ್ಹ ಅಪರಾಧಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಜೊತೆಗೆ ಆರ್​ಪಿಸಿ ಸೆಕ್ಷನ್​ 120-B ಅಡಿ ತಲಾ ರೂ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆ ದಂಡ ಪಾವತಿಸಲು ತಪ್ಪಿದಲ್ಲಿ ಅವರು ಆರು ತಿಂಗಳವರೆಗೆ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ವಿವಿಧ ಅಪರಾಧಗಳಿಗಾಗಿ ಅಪರಾಧಿಗಳಿಗೆ ನೀಡಲಾದ ಶಿಕ್ಷೆಯು ಏಕಕಾಲದಲ್ಲಿ ಜಾರಿಯಲ್ಲಿರುತ್ತದೆ ಎಂದು ತೀರ್ಪನಲ್ಲಿ ಹೇಳಲಾಗಿದೆ.

ಗರಿಷ್ಠ ಪರಿಹಾರ ನೀಡುವಂತೆ ಸೂಚನೆ: ಸಂತ್ರಸ್ತೆಯ ಚಿಕಿತ್ಸೆಗೆ ತಗಲುವ ದೊಡ್ಡ ಮೊತ್ತ ಮತ್ತು ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವ ಮೊತ್ತವನ್ನು ಪರಿಗಣಿಸಿ ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಯಾಧೀಶರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಸಂತ್ರಸ್ತರ ಪರಿಹಾರ ಯೋಜನೆ, 2019ರ ಪ್ರಕಾರ ಸಂತ್ರಸ್ತೆಗೆ ಗರಿಷ್ಠ ಪರಿಹಾರ ನೀಡುವಂತೆ ಸೂಚಿಸಲಾಗಿದೆ.

ಎರಡೂ ಕಡೆಯವರ ವಾದ ಸಲಿಸಿ ಮತ್ತು ದಾಳಿಯ ಸ್ವರೂಪವನ್ನು ಗಮನಿಸಿ ಈ ತೀರ್ಪು ನೀಡಲಾಗಿದೆ. ಅಪರಾಧಿಗಳು ವಿನಾಶಕಾರಿ ವಸ್ತುವನ್ನು ಬಳಸಿದ್ದರಿಂದ ಸಂತ್ರಸ್ತೆಗೆ ಶಾಶ್ವತ ವಿರೂಪತೆ ಉಂಟಾಗಿದೆ. ಇದು ಸಂತ್ರಸ್ತೆಯ ದೈಹಿಕ ಮತ್ತು ಭಾವನಾತ್ಮಕ ಭವಿಷ್ಯದ ಜೀವನ ಮೇಲೆ ಪರಿಣಾಮ ಬೀರುತ್ತದೆ. ಅಪರಾಧಿಗಳು ಕ್ಷಮೆಗೆ ಅರ್ಹರಲ್ಲ. ಅವರ ಕೃತ್ಯಕ್ಕೆ ಕಾನೂನಿನಡಿ ಸೂಚಿಸಲಾದ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಶಿಕ್ಷೆ ಸಂತ್ರಸ್ತೆಗೆ ನಿಜವಾದ ಮತ್ತು ಸಂಪೂರ್ಣ ನ್ಯಾಯವನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂತ್ರಸ್ತರಿಗಾಗಿ ತನ್ನ ಹೋರಾಟ ಮುಂದುವರಿಯಲಿದೆ: ಶಿಕ್ಷೆಯ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತೆ 'ಈಟಿವಿ ಭಾರತ'ದೊಂದಿಗೆ ಮಾತನಾಡುತ್ತಾ"ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಸರ್ಕಾರದಿಂದ ಪುನರ್ವಸತಿಗೆ ಒತ್ತಾಯಿಸಿದರು. ಜತೆಗೆ ಇತರ ಆ್ಯಸಿಡ್ ದಾಳಿ ಸಂತ್ರಸ್ತರಿಗಾಗಿ ತನ್ನ ಹೋರಾಟ ಮುಂದುವರಿಯಲಿದೆ ಎಂದರು. ಅಲ್ಲದೇ ಆ್ಯಸಿಡ್ ಮಾರಾಟವನ್ನು ಸಂಪೂರ್ಣ ನಿಷೇಧಿಸುವಂತೆ ಅವರು ಒತ್ತಾಯಿಸಿದರು.

ಪ್ರಕರಣದ ಹಿನ್ನೆಲೆ: 2014ರ ಡಿಸೆಂಬರ್ 11 ರಂದು ಮಹಿಳಾ ಕಾನೂನು ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗ ನಗರದ ಹೊರವಲಯದ ನೌಶೇರಾ ಬಳಿ ಆ್ಯಸಿಡ್ ಎರಚಲಾಗಿತ್ತು. ಘಟನೆಯಲ್ಲಿ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿದ್ದರು. ಈ ಭೀಕರ ಕೃತ್ಯವು ಕಾಶ್ಮೀರ ಕಣಿವೆಯಾದ್ಯಂತ ಆತಂಕ ಸೃಷ್ಟಿಸಿತ್ತು. ದಾಳಿಯ ನಂತರ ಶ್ರೀನಗರ ಎಸ್‌ಪಿ ಅಮಿತ್ ಕುಮಾರ್ ಹಾಗೂ ಎಸ್‌ಪಿ ರಯೀಸ್ ಮೊಹಮ್ಮದ್ ಭಟ್ (ಪ್ರಸ್ತುತ ಡಿಐಜಿ ದಕ್ಷಿಣ ಕಾಶ್ಮೀರ)ರ ನೇತೃತ್ವದಲ್ಲಿ ಆಗಿನ ಐಜಿಪಿ ಎ.ಜಿ.ಮೀರ್ ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಈ ತಂಡ 15 ದಿನಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಪ್ರಕರಣ ಸಂಬಂಧ ಕಳೆದ ಗುರುವಾರ ಆರ್‌ಪಿಸಿಯ ಸೆಕ್ಷನ್ 326-ಎ (ಸ್ವಯಂಪ್ರೇರಿತವಾಗಿ ಆಸಿಡ್ ಬಳಕೆಯಿಂದ ತೀವ್ರವಾಗಿ ಗಾಯಗೊಳಿಸುವುದು) ಅಡಿ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಎ ಟೀಲಿ ಅವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಶನಿವಾರ ತೀರ್ಪನ್ನು ಕಾಯ್ದಿರಿಸಿತ್ತು. ಅವರು ತಪ್ಪಿತಸ್ಥರಿಗೆ ಗರಿಷ್ಠ ಜೀವಾವಧಿ ಶಿಕ್ಷೆಗೆ ಒತ್ತಾಯಿಸಿದ್ದರು.

ಇದನ್ನೂ ಓದಿ: ಶೃಂಗೇರಿ ಯುವತಿ ಮೇಲೆ ಆ್ಯಸಿಡ್​ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.