ನೆಲ್ಲೂರು(ಆಂಧ್ರಪ್ರದೇಶ): ಚಲಿಸುತ್ತಿದ್ದ ಗೂಡ್ಸ್ ರೈಲು ಹತ್ತಲು ಹೋಗಿ ಕೆಳಗೆ ಬಿದ್ದು ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಆಂಧ್ರಪ್ರದೇಶ ನೆಲ್ಲೂರು ಜಿಲ್ಲೆಯ ಗುಡೂರ್ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ದಾಟಿ ಹೋಗುತ್ತಿದ್ದ ಗೂಡ್ಸ್ ರೈಲು ಹತ್ತಲು ಯುವಕನೊಬ್ಬ ಮುಂದಾಗಿದ್ದಾನೆ. ಈ ವೇಳೆ, ಆಯಾತಪ್ಪಿ ಹಳಿ ಮೇಲೆ ಬಿದ್ದಿರುವ ಕಾರಣ ಚಿಕ್ಕಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಕೊರೊನಾ ಹೇಗೆ ಹರಡುತ್ತೆ ಗೊತ್ತಾ?... ಮಹತ್ವದ ಮಾಹಿತಿ ಹೊರಹಾಕಿದ ಭಾರತ ಸರ್ಕಾರ
ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆ ರೈಲ್ವೆ ಉದ್ಯೋಗಿ ರೂಪ್ ಕುಮಾರ್ ಯುವಕನ ಪ್ರಾಣ ಉಳಿಸಲು ಮುಂದಾಗಿ ಓಡಿ ಹೋಗಿದ್ದಾರೆ. ಈ ವೇಳೆ, ಅವರು ರೈಲ್ವೆ ಹಳಿ ಮೇಲೆ ಬಿದ್ದಿದ್ದಾರೆ. ಆದರೆ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.