ನವದೆಹಲಿ : ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಬೆಳಗಾವಿ ಕ್ಷೇತ್ರಕ್ಕೆ ಮಂಗಳಾ ಅಂಗಡಿ ಹಾಗೂ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಸಲ ಸಂಸದರಾಗಿದ್ದ ಸುರೇಶ್ ಅಂಗಡಿ ಕಳೆದ ವರ್ಷ ಕೋವಿಡ್ನಿಂದ ನಿಧನರಾಗಿದ್ದರು. ಈ ಕಾರಣದಿಂದಾಗಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ
ತಿರುಪತಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರನ್ನು ಪಕ್ಷ ಘೋಷಣೆ ಮಾಡಿದೆ. ತಿರುಪತಿ ಬಲ್ಲಿ ದುರ್ಜೆ ಪ್ರಸಾದ್ ರಾವ್ ಅವರು ಕೂಡ ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾಗಿದ್ದರು.
ಆರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 17 ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ರಾಜ್ಯ | ಕ್ಷೇತ್ರ | ಹೆಸರು | |
1 | ಆಂಧ್ರಪ್ರದೇಶ | ತಿರುಪತಿ (ಲೋಕಸಭೆ) | ರತ್ನಪ್ರಭಾ |
2 | ಕರ್ನಾಟಕ | ಬೆಳಗಾವಿ(ಲೋಕಸಭೆ) | ಮಂಗಳಾ ಸುರೇಶ್ ಅಂಗಡಿ |
3 | ಜಾರ್ಖಂಡ್ | ಮಾದಾಪುರ್ | ಗಂಗಾ ನಾರಾಯಣ್ ಸಿಂಗ್ |
4 | ಕರ್ನಾಟಕ | ಬಸವ ಕಲ್ಯಾಣ | ಶರಣು ಸಲಗಾರ್ |
5 | ಕರ್ನಾಟಕ | ಮಸ್ಕಿ | ಪ್ರತಾಪ್ ಗೌಡ ಪಾಟೀಲ್ |
6 | ಮಧ್ಯಪ್ರದೇಶ | ದಮೋಹ್ | ರಾಹುಲ್ ಸಿಂಗ್ |
7 | ಮಿಜೋರಾಂ | ಸೆರ್ಚಿಪ್ | ಲಾಲ್ಹರಿಯಾಟ್ರೆಂಗಾ ಚಂಗ್ತೆ |
8 | ಒಡಿಶಾ | ಪಿಪಿಲಿ | ಅಶ್ರಿತ್ ಪಟ್ನಾಯಕ್ |
9 | ರಾಜಸ್ಥಾನ | ಸಹರಾ | ರತನ್ ಲಾಲ್ ಜಟ್ |
10 | ರಾಜಸ್ಥಾನ | ಸುಜಂಗಢ | ಖೆಮರಾಮ್ ಮೆಘವಾಲ್ |
11 | ರಾಜಸ್ಥಾನ | ರಾಜಸಮಂದ್ | ದೀಪ್ತಿ ಮಹೇಶ್ವರಿ |