ETV Bharat / bharat

Anantapur Building Collapse: ಆಂಧ್ರದಲ್ಲಿ ವರುಣನ ರೌದ್ರಾವತಾರ.. ಅನಂತಪುರದಲ್ಲಿ ಕಟ್ಟಡ ಕುಸಿದು ಮೂವರು ಬಲಿ - Flood in Andhra Pradesh

ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಒಂದು ಕಟ್ಟಡ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡದ ಮೇಲೆ ಉರುಳಿ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದು, ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿಕೊಂಡಿದ್ದಾರೆ.

Anantapur Building Collapse
Anantapur Building Collapse
author img

By

Published : Nov 20, 2021, 7:34 AM IST

Updated : Nov 20, 2021, 9:58 AM IST

ಅನಂತಪುರ (ಆಂಧ್ರಪ್ರದೇಶ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ (depression over Bay of Bengal) ಪರಿಣಾಮ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ (Flood in Andhra Pradesh). ವರುಣನ ಅವಾಂತರಕ್ಕೆ ನಿನ್ನೆಯೇ 14 ಮಂದಿ ಮೃತಪಟ್ಟಿದ್ದರು.

ಇಂದು ಅನಂತಪುರ ಜಿಲ್ಲೆಯಲ್ಲಿ ಎರಡು ಕಟ್ಟಡಗಳು ಕುಸಿದು (building collapse in Anantapur) ಇಬ್ಬರು ಪುಟಾಣಿಗಳು ಸೇರಿ ಮೂವರು ಮೃತಪಟ್ಟಿದ್ದಾರೆ. ಒಂದು ಕಟ್ಟಡ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡದ ಮೇಲೆ ಉರುಳಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 15 ಮಂದಿಯಲ್ಲಿ ಆರು ಜನರನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: AP Floods: ಪ್ರವಾಹಕ್ಕೆ ಆಂಧ್ರ ತತ್ತರ: 14 ಮಂದಿ ಸಾವು

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Last Updated : Nov 20, 2021, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.