ETV Bharat / bharat

ಅಳುತ್ತಿದ್ದ 8 ತಿಂಗಳ ಮಗುವನ್ನು ಸುಮ್ಮನಿರಿಸಲು ಗಂಟಲಿಗೆ ಮದ್ಯ ಸುರಿದ ತಂದೆ-ಅಜ್ಜ!

author img

By ETV Bharat Karnataka Team

Published : Sep 9, 2023, 9:35 AM IST

ಅಳುತ್ತಿದ್ದ ಎಂಟು ತಿಂಗಳ ಮಗುವನ್ನು ಸುಮ್ಮನಿರಿಸಲು ಬಲವಂತವಾಗಿ ಮದ್ಯ ಕುಡಿಸಿದ ಆರೋಪದ ಹಿನ್ನೆಲೆ ಮಗುವಿನ ತಂದೆ ಹಾಗೂ ತಾತನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿಯ ಪಾಂಡುವಾದ ಐಚ್‌ಗಢ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Two arrested after they force-fed country liquor to 8-month-old baby in Bengal's Pandua

ಹೂಗ್ಲಿ (ಪಶ್ಚಿಮ ಬಂಗಾಳ): ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ಮದ್ಯ ಕುಡಿಸಿದ ಆಘಾತಕಾರಿ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬೆಳಕಿಗೆ ಬಂದಿದೆ. ಎಂಟು ತಿಂಗಳ ಮಗುವಿನ ಗಂಟಲಿಗೆ ಮದ್ಯ ಸುರಿದ ಮಗುವಿನ ತಂದೆ ಹಾಗೂ ತಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಹೂಗ್ಲಿಯ ಪಾಂಡುವಾದ ಐಚ್‌ಗಢ ಎಂಬ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಅಂದು ರಾತ್ರಿ ಮದ್ಯ ಕುಡಿಸಿದ್ದರಿಂದ ಮಗು ಪ್ರಜ್ಞೆ ತಪ್ಪಿತ್ತು. ಗುರುವಾರ ಮಗುವಿಗೆ ಪ್ರಜ್ಞೆ ಬಂದ ಬಳಿಕ ಮಗುನಿನ ತಾಯಿ ನೀಡಿದ ದೂರಿನನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶುಕ್ರವಾರ ಇಬ್ಬರನ್ನು ಚಿನ್ಸೂರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು, ಆರೋಪಿಗಳಿಗೆ 14 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಬುಧವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ ಮಗುವಿನ ತಂದೆ, ಪತ್ನಿಯ ಜೊತೆಗೆ ಜಗಳ ತೆಗೆದಿದ್ದಲ್ಲದೇ ಹಲ್ಲೆಗೂ ಮುಂದಾಗಿದ್ದಾನೆ. ಜಗಳದ ಬಳಿಕ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿ ಬಾಗಿಲು ಬಂದ್​ ಮಾಡಿದ್ದಾನೆ. ಇವರ ಗಲಾಟೆಯಿಂದ ಮಲಗಿದ್ದ ಎಂಟು ತಿಂಗಳ ಮಗು ಎಚ್ಚರಗೊಂಡು ಅಳಲು ಆರಂಭಿಸಿತ್ತು. ಅಳುತ್ತಿದ್ದ ಮಗುವನ್ನು ಸಮಾಧಾನಪಡಿಸಲು ಇನ್ನಿಲ್ಲದ ಹರಸಾಹಸ ಮಾಡಿದ್ದ ಆತ, ಮಗುವಿನ ಗಂಟಲಿಗೆ ಮದ್ಯ ಸುರಿದಿದ್ದಾನೆ.

ಗಲಾಟೆಯ ಸದ್ದು ಕೇಳಿ ಅಕ್ಕ-ಪಕ್ಕದ ಮನೆಯವರು ಆಗಮಿಸಿ ಬಾಗಿಲು ಒಡೆದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದಿಂದ ಪ್ರಜ್ಞೆ ತಪ್ಪಿದ್ದ ಮಗುವನ್ನು ಪಾಂಡುವಾ ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಮಗುವಿನ ತಂದೆ ಹಾಗೂ ತಾತ ಇಬ್ಬರು ಮದ್ಯ ವ್ಯಸನಿಗಳಾಗಿದ್ದರಿಂದ ಮಗುವಿಗೆ ಮದ್ಯ ಕುಡಿಸಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಅವರ ಅನುಮಾನದ ಬಳಿಕ ಆಸ್ಪತ್ರೆ ನೀಡಿದ ವರದಿಯಲ್ಲಿಯೂ ಮಗು ಮದ್ಯ ಕುಡಿದಿರುವುದು ಕಂಡುಬಂದಿತ್ತು. ಆರೋಪಿಗಳ ವಿರುದ್ಧ ಕ್ರಮಕ್ಕಾಗಿ ಮಗುವಿನ ಪತ್ನಿ ಕೂಡ ಠಾಣೆಯ ಮೆಟ್ಟಿಲೇರಿದ್ದಳು.

"ಗುರುವಾರ ಮಗುವಿಗೆ ಪ್ರಜ್ಞೆ ಬಂದ ನಂತರ ಮಹಿಳೆಯು ತನ್ನ ಪತಿ ಮತ್ತು ಮಾವನ ವಿರುದ್ಧ ದೂರು ದಾಖಲಿಸಿದ್ದಳು. ಗುರುವಾರ ಸಂಜೆ ಪಾಂಡುವಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಮಾವನ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾಳೆ. ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಶುಕ್ರವಾರ ಚಿನ್ಸೂರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಆದೇಶ ನೀಡಿದೆ. ಮಗುವಿನ ಆರೋಗ್ಯ ಈಗ ಸ್ಥಿರವಾಗಿದೆ" ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಲಾರಿಯಲ್ಲಿ ಪ್ಲೈವುಡ್​ ನಡುವೆ ಅಕ್ರಮವಾಗಿ ಮದ್ಯ ಸಾಗಣೆ.. ಬೆಳಗಾವಿಯಲ್ಲಿ 28 ಲಕ್ಷ ಮೌಲ್ಯದ ಮದ್ಯ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.