ಹೈದ್ರಾಬಾದ್: ಕೋವಿಡ್-19 ಲಸಿಕೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಒಳಗೊಂಡಿರುವ ಟ್ವೀಟ್‌ಗಳನ್ನು ತೆಗೆದು ಹಾಕಲು, ನಿಯಮಗಳನ್ನು ಪದೇ ಪದೆ ಉಲ್ಲಂಘಿಸುವ ಖಾತೆಗಳನ್ನು ಅಂತಿಮವಾಗಿ ತೆಗೆದುಹಾಕಲು "ಸ್ಟ್ರೈಕ್ ಸಿಸ್ಟಮ್" ಅನ್ನು ಬಳಸುವುದಾಗಿ ಟ್ವಿಟರ್ ಹೇಳಿದೆ.
ಲಸಿಕೆ ಬಗ್ಗೆ ತಪ್ಪು ಮಾಹಿತಿಯ ವಿರುದ್ಧ ಟ್ವೀಟ್‌ಗಳು ತನ್ನ ನೀತಿ ಉಲ್ಲಂಘಿಸುತ್ತದೆಯೆ ಎಂದು ನಿರ್ಣಯಿಸಲು ವಿಮರ್ಶಕರನ್ನು ಬಳಸಲಾರಂಭಿಸಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ. ಅಂತಿಮವಾಗಿ, ಮಾನವ ಮತ್ತು ತಂತ್ರಜಾನ ಸಂಯೋಜನೆಯಿಂದ ಈ ಕೆಲಸ ಮಾಡಲಾಗುವುದು ಎಂದು ಹೇಳಿದೆ. ವೈರಸ್ ಹೇಗೆ ಹರಡುತ್ತದೆ, ಸೋಂಕು ಮತ್ತು ಸಾವಿನ ಅಪಾಯದ ಬಗ್ಗೆ ಸುಳ್ಳುಗಳನ್ನು ಒಳಗೊಂಡಂತೆ ಟ್ವಿಟರ್ ಈಗಾಗಲೇ ಡಿಸೆಂಬರ್‌ನಲ್ಲಿ ಕೋವಿಡ್ ಸಂಬಂಧಿತ ಕೆಲವು ತಪ್ಪು ಮಾಹಿತಿಯನ್ನು ನಿಷೇಧಿಸಿತ್ತು.
ಸ್ಟ್ರೈಕ್ ಸಿಸ್ಟಮ್ ಬಳಕೆಯ ಮೂಲಕ, ಕೆಲವು ವಿಷಯಗಳು ನಮ್ಮ ನಿಯಮಗಳನ್ನು ಏಕೆ ಉಲ್ಲಂಘಿಸುತ್ತವೆ ಎಂಬುದರ ಕುರಿತು ಜನರಿಗೆ ತಿಳಿಸಲು ನಾವು ಆಶಿಸುತ್ತೇವೆ. ಆದ್ದರಿಂದ ಅವರ ನಡವಳಿಕೆ ಮತ್ತು ಸಾರ್ವಜನಿಕ ಸಂಭಾಷಣೆಯ ಮೇಲೆ ಅವುಗಳ ಪ್ರಭಾವವನ್ನು ಮತ್ತಷ್ಟು ಪರಿಗಣಿಸಲು ಅವರಿಗೆ ಅವಕಾಶವಿದೆ ಎಂದು ಟ್ವಿಟರ್ ಸೋಮವಾರ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಎರಡು ಸ್ಟ್ರೈಕ್‌ಗಳು ಖಾತೆಯನ್ನು 12 ಗಂಟೆಗಳ ಕಾಲ ಲಾಕ್ ಮಾಡಲು ಕಾರಣವಾಗುತ್ತವೆ. ಐದು ಅಥವಾ ಹೆಚ್ಚಿನವರು ಬಳಕೆದಾರರನ್ನು ಟ್ವಿಟರ್‌ನಿಂದ ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಟ್ವಿಟರ್ ತನ್ನ ನೀತಿಗಳಲ್ಲಿ ಹೇಳಿಕೊಂಡಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್ ತನ್ನ ನೀತಿಗಳಲ್ಲಿ ವಿಶಾಲವಾದ ಆಂಟಿ-ವ್ಯಾಕ್ಸ್ ತಪ್ಪು ಮಾಹಿತಿಯನ್ನು ಸೇರಿಸಲು ಯೋಜಿಸುತ್ತಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆಯನ್ನು ಕೋರುವ ಸಂದೇಶಕ್ಕೆ ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದೆ.