ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸಿಯವರ ಸ್ಕ್ವೇರ್ ಸಂಸ್ಥೆಯು ಕ್ರಿಪ್ಟೋಕರೆನ್ಸಿಯಲ್ಲಿನ ಬಿಟ್‌ಕಾಯಿನ್‌ನಲ್ಲಿ 170 ಮಿಲಿಯನ್ ಡಾಲರ್ಸ್ ಹೂಡಿಕೆ ಮಾಡಿದೆ.
ಕಂಪನಿಯು ಸುಮಾರು 3,318 ಬಿಟ್‌ಕಾಯಿನ್‌ಗಳನ್ನು ಸರಾಸರಿ, 51,236 ಬೆಲೆಯಲ್ಲಿ ಖರೀದಿಸಿದೆ ಎಂದು ಕಂಪನಿಯು ತನ್ನ ತ್ರೈಮಾಸಿಕ ಗಳಿಕೆ ವರದಿಯಲ್ಲಿ ಬಹಿರಂಗಪಡಿಸಿದೆ. ಒಂದು ಬಿಟ್‌ಕಾಯಿನ್‌ನ ಪ್ರಸ್ತುತ ಬೆಲೆ ಕೇವಲ 50,000 ಡಾಲರ್ಸ್ಕ್ಕಿಂತ ಕಡಿಮೆ ಇದೆ.
ಕಂಪನಿಯ ಉದ್ದೇಶಕ್ಕೆ ಅನುಗುಣವಾಗಿ, ಸ್ಕ್ವೇರ್ ಕ್ರಿಪ್ಟೋಕರೆನ್ಸಿ ಆರ್ಥಿಕ ಸಬಲೀಕರಣದ ಸಾಧನವಾಗಿದೆ ಎಂದು ಹೇಳಿದೆ. ಇದು ವ್ಯಕ್ತಿಗಳಿಗೆ ಜಾಗತಿಕ ವಿತ್ತೀಯ ವ್ಯವಸ್ಥೆಯಲ್ಲಿ ಭಾಗವಹಿಸಲು ಮತ್ತು ತಮ್ಮದೇ ಆದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಒಂದು ಮಾರ್ಗವನ್ನು ಒದಗಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಹೂಡಿಕೆ ಬಿಟ್‌ಕಾಯಿನ್‌ಗೆ ಸ್ಕ್ವೇರ್‌ನ ನಿರಂತರ ಬದ್ಧತೆಯ ಭಾಗವಾಗಿದೆ, ಮತ್ತು ಕಂಪನಿಯು ತನ್ನ ಇತರ ಹೂಡಿಕೆಗಳಿಗೆ ಹೋಲಿಸಿದರೆ ಬಿಟ್‌ಕಾಯಿನ್‌ನಲ್ಲಿನ ಒಟ್ಟು ಹೂಡಿಕೆಯನ್ನು ನಿರ್ಣಯಿಸಲು ಯೋಜಿಸಿದೆ. ಈ ತಿಂಗಳ ಆರಂಭದಲ್ಲಿ, ಡಾರ್ಸೆ ಮತ್ತು ರಾಪ್ ಕಲಾವಿದ ಜೇ ಬಿಟ್‌ಕಾಯಿನ್ ಅಭಿವೃದ್ಧಿಗೆ ಧನಸಹಾಯಕ್ಕಾಗಿ 500 ಬಿಟ್‌ಕಾಯಿನ್‌ಗಳನ್ನು (ಅಂದಾಜು 174 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು.
ತನಗೆ ಬಿಟ್‌ಕಾಯಿನ್ ಒಂದು ಕಾವ್ಯದಂತಿದೆ ಮತ್ತು ಜಗತ್ತಿನಲ್ಲಿ ಬದಲಾವಣೆಯನ್ನು ತರಲು ಬಿಟ್‌ಕಾಯಿನ್‌ಗೆ ಸಾಕಷ್ಟು ಅವಕಾಶವಿದೆ ಎಂದು ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸಿ ಈ ಹಿಂದೆ ಹೇಳಿದ್ದರು.
ಈ ಮಧ್ಯೆ, ಕೆಲವು ಸಮಯದಿಂದ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಟ್ವೀಟ್ ಮಾಡುತ್ತಿರುವ ತೆಸ್ಲಾ ಸಿಇಒ ಎಲೋನ್ ಮಸ್ಕ್, ಬಿಟ್ ಕಾಯಿನ್ ಬೆಲೆಗಳು ಈಗ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಟೆಸ್ಲಾ ಬಿಟ್‌ಕಾಯಿನ್‌ನಲ್ಲಿ 1.5 ಬಿಲಿಯನ್ ಹೂಡಿಕೆ ಮಾಡಿದೆ ಎಂದು ಬಹಿರಂಗಪಡಿಸಿತು. ಇದು ಕ್ರಿಪ್ಟೋಕರೆನ್ಸಿಯ ಬೆಲೆಗಳ ಏರಿಕೆಗೆ ಕಾರಣವಾಗಿದೆ.
ಇದನ್ನೂ ಓದಿ:ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 13,742 ಹೊಸ ಕೊರೊನಾ ಕೇಸ್ ದಾಖಲು