ETV Bharat / bharat

ಆಟವಾಡುವ ವೇಳೆ 25ನೇ ಮಹಡಿಯಿಂದ ಬಿದ್ದು ಅವಳಿ ಮಕ್ಕಳು ಸಾವು - ಬಾಲ್ಕನಿಯಲ್ಲಿ ಆಟವಾಡುತ್ತಿದ್ದಮಕ್ಕಳು

ಆಟವಾಡುತ್ತಿದ್ದ ವೇಳೆ 25ನೇ ಮಹಡಿಯಿಂದ ಕೆಳಗೆ ಬಿದ್ದು 9ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಅವಳಿ ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ.

ಆಟವಾಡುವ ವೇಳೆ 25ನೇ ಮಹಡಿಯಿಂದ ಬಿದ್ದು ಅವಳಿ ಮಕ್ಕಳು ಸಾವು

author img

By

Published : Oct 17, 2021, 11:03 AM IST

ಗಾಜಿಯಾಬಾದ್: 9ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಅವಳಿ ಮಕ್ಕಳು ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ವೇಳೆ 25ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ಉತ್ತರ ಪ್ರದೇಶ- ನವದೆಹಲಿ ಗಡಿಭಾಗವಾದ ಗಾಜಿಯಾಬಾದ್​ನಲ್ಲಿ ನಡೆದಿದೆ.

ಗಾಜಿಯಾಬಾದ್‌ನ ಸಿದ್ಧಾರ್ಥ್ ವಿಹಾರದಲ್ಲಿರುವ ಅಪಾರ್ಟ್​ಮೆಂಟ್​ನ 25ನೇ ಮಹಡಿಯಲ್ಲಿ ಅವಳಿ ಮಕ್ಕಳಾದ ಸತ್ಯನಾರಾಯಣ ಮತ್ತು ಸೂರ್ಯನಾರಾಯಣ ತಮ್ಮ ಪೋಷಕರೊಂದಿಗೆ ವಾಸವಾಗಿದ್ದರು. ಮಕ್ಕಳ ತಂದೆ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ತಡರಾತ್ರಿ ತಾಯಿಯ ಕಣ್ಣು ತಪ್ಪಿಸಿ ಬಾಲ್ಕನಿಯಲ್ಲಿ ಮಕ್ಕಳು ಆಟವಾಡಲು ಆರಂಭಿಸಿದ್ದಾರೆ. ಈ ವೇಳೆ ಆಯತಪ್ಪಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಟೆರೆಸ್​ನಲ್ಲಿ ಮಕ್ಕಳು ಆಡುವಾಗ ಎಚ್ಚರ: ಬೆಂಗಳೂರಲ್ಲಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಘಟನೆ ಸಂಬಂಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆಟವಾಡುತ್ತಾ 8ನೇ ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕೆಲ ದಿನಗಳ ಹಿಂದೆ ಇದೇ ರೀತಿಯ ಅನಾಹುತ ಕರ್ನಾಟಕದ ಬೆಂಗಳೂರು ಮತ್ತು ಗುಜರಾತ್‌​ನ ಸೂರತ್​ನಲ್ಲಿ ಸಂಭವಿಸಿತ್ತು. ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ 5ನೇ ಮಹಡಿಗೆ ಬಿದ್ದು 10 ವರ್ಷದ ಬಾಲಕ ಅಸುನೀಗಿದ್ದನು. ಸೂರತ್‌ನ ​ಅಪಾರ್ಟ್​ಮೆಂಟ್​ವೊಂದರ 8ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಬಿದ್ದು ಮೃತಪಟ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.