ETV Bharat / bharat

ಪಾಕ್ ಪರ ಮೃದು ಧೋರಣೆ ಟ್ರಂಪ್ ಕಣ್ಣು ಅಫ್ಘಾನಿಸ್ತಾನದ ಮೇಲೆ - Trump on Afghanistan

ವಿಶ್ವದ ನೂತನ ಮತ್ತು ಅತಿದೊಡ್ಡ ಕ್ರಿಕೆಟ್ ಮೈದಾನ ಎನಿಸಿಕೊಂಡ ಅಹಮದಾಬಾದಿನ ಕ್ರೀಡಾಂಗಣದಲ್ಲಿ ಮಾಡಿದ ಇಂದಿನ ಭಾಷಣದಲ್ಲಿ ಟ್ರಂಪ್ ಭಯೋತ್ಪಾದನೆ ಎದುರಿಸುವ ಹೇಳಿಕೆಗಳಲ್ಲಿ ಮುಳುಗಿದರಾದರೂ ಪಾಕಿಸ್ತಾನದ ವಿರುದ್ಧ ಯಾವುದೇ ಸೊಲ್ಲು ಎತ್ತಿಲ್ಲ.

trump
ಟ್ರಂಪ್
author img

By

Published : Feb 25, 2020, 10:18 AM IST

Updated : Oct 10, 2022, 2:56 PM IST

"ಅದು ಏನು ಎಂದು ನಿಮಗೆ ಗೊತ್ತೆ?” ನಾವು ಐದು ಗಂಟೆ ಕಾಲ ಟೈಂಪಾಸ್ ಮಾಡುತ್ತೇವಲ್ಲಾ ಅದೇ ಇದು. ಅದನ್ನು ನೋಡಿ ನಾವು ಹೇಳಬೇಕಿರೋದು; “ಓಹ್ ಗ್ರಂಥಾಲಯಕ್ಕೆ ಕೃತಜ್ಞತೆಗಳು. ಇದನ್ನು ಆಫ್ಘಾನಿಸ್ತಾನದಲ್ಲಿ ಯಾರು ಬಳಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ.” ಹಿಂದೆ 2019ರ ಜನವರಿಯಲ್ಲಿ ಸಂಸತ್ ಭವನ ನಿರ್ಮಾಣಕ್ಕಾಗಿ ಆಫ್ಘಾನಿಸ್ತಾನಕ್ಕೆ ಭಾರತ ಸಹಾಯ ಹಸ್ತ ಚಾಚಿದಾಗ ಟ್ರಂಪ್ ಅಪಹಾಸ್ಯದ ಮಾತನ್ನು ಆಡುತ್ತಾ ಹೆಚ್ಚೆಂದರೆ ‘ಗ್ರಂಥಾಲಯ ನಿರ್ಮಿಸಿದ್ದಾರೆ’ ಎಂದು ಹೇಳಿದ್ದರು.

ಭಾರತದ ನೆರವಿನೊಂದಿಗೆ ನಿರ್ಮಿಸಲಾದ, ಪ್ರಧಾನಿ ಮೋದಿ ಅವರು 2015 ರಲ್ಲಿ ಉದ್ಘಾಟಿಸಿದ ಕಟ್ಟಡವನ್ನೇ ಟ್ರಂಪ್ ಗ್ರಂಥಾಲಯ ಎಂದು ಕರೆದಿರುವುದು. ಯುದ್ಧಗ್ರಸ್ಥ ದೇಶ ಆಫ್ಘಾನಿಸ್ತಾನದಿಂದ ಸೈನ್ಯ ಹಿಂಪಡೆಯುವ ನಿರ್ಧಾರ ಪ್ರಕಟಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾತುಗಳನ್ನು ಅವರು ಆಡಿದ್ದರು. ಇದರಿಂದ ಅಸಮಾಧಾನಗೊಂಡ ನವದೆಹಲಿ ಆಫ್ಘಾನಿಸ್ತಾನವನ್ನು ಮರು ನಿರ್ಮಿಸುವ ಬದ್ಧತೆಯಿಂದ 3 ಶತಕೋಟಿ ಡಾಲರ್ ಹಣ ವಿನಿಯೋಗ ಮತ್ತು ಸಹಾಯ ಮಾಡುತ್ತಿರುವುದಾಗಿ ಒತ್ತಿ ಹೇಳಿತು.

ವಿಶ್ವದ ನೂತನ ಮತ್ತು ಅತಿದೊಡ್ಡ ಕ್ರಿಕೆಟ್ ಮೈದಾನ ಎನಿಸಿಕೊಂಡ ಅಹಮದಾಬಾದಿನ ಕ್ರೀಡಾಂಗಣದಲ್ಲಿ ಮಾಡಿದ ಇಂದಿನ ಭಾಷಣದಲ್ಲಿ ಟ್ರಂಪ್ ಭಯೋತ್ಪಾದನೆ ಎದುರಿಸುವ ಹೇಳಿಕೆಗಳಲ್ಲಿ ಮುಳುಗಿದರಾದರೂ ಪಾಕಿಸ್ತಾನದ ವಿರುದ್ಧ ಯಾವುದೇ ಸೊಲ್ಲು ಎತ್ತಿಲ್ಲ.

"ಭಯೋತ್ಪಾದನೆ ತಡೆಯಲು ಮತ್ತು ಅಂತಹ ಸಿದ್ಧಾಂತಗಳ ವಿರುದ್ಧ ಹೋರಾಟ ನಡೆಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ. ಈ ಕಾರಣಕ್ಕಾಗಿ, ಅಧಿಕಾರ ವಹಿಸಿಕೊಂಡ ಕ್ಷಣದಿಂದ ನನ್ನ ಆಡಳಿತ ಬಹಳ ಕೆಲಸ ಮಾಡುತ್ತಿದೆ. ಗಡಿಯಲ್ಲಿ ಕ್ರಿಯಾಶೀಲವಾಗಿ ಇರುವ ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರಗಾಮಿಗಳನ್ನು ನಿಗ್ರಹಿಸಲು ಪಾಕಿಸ್ತಾನದ ಜೊತೆ ಸಕಾರಾತ್ಮಕ ಹೆಜ್ಜೆ ಹಾಕಲಾಗುವುದು” ಎಂದು ಅದ್ಭುತ ದೃಶ್ಯಗಳಿಂದ ಕಂಗೊಳಿಸುತ್ತಿದ್ದ ‘ನಮಸ್ತೆ ಟ್ರಂಪ್’ ವೇದಿಕೆಯಲ್ಲಿ ಬದಿಯಲ್ಲೇ ನಿಂತಿದ್ದ ಪ್ರಧಾನಿ ಮೋದಿ ಸಮ್ಮುಖದಲ್ಲಿ ಅಮೆರಿಕದ 45ನೇ ಅಧ್ಯಕ್ಷರು ಹೇಳಿದ್ದಾರೆ.

2010 ಮತ್ತು 2015 ರಲ್ಲಿ ಬರಾಕ್ ಒಬಾಮ ಅವರು ನೀಡಿದ್ದ ಭೇಟಿಯಂತೆ ಅಲ್ಲದೆ ಅಮೆರಿಕದ ಅಧ್ಯಕ್ಷರೊಬ್ಬರು ಭಾರತಕ್ಕೆ ಏಕಾಂಗಿಯಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಂಪ್ ಈ ಕುರಿತಂತೆ ಯಾವುದೇ ಮಹತ್ವದ ಹೇಳಿಕೆಗಳನ್ನು ದಾಖಲಿಸಿಲ್ಲ. ಪಾಕಿಸ್ತಾನದಿಂದಾಗಿ ಸರಾಗವಾಗಿ ನಡೆದ ಅಮೆರಿಕ- ತಾಲಿಬಾನ್ ‘ಶಾಂತಿ ಒಪ್ಪಂದ’ ಇನ್ನಷ್ಟೇ ಜಾರಿ ಆಗಬೇಕಿದ್ದು ಈ ಹಿನ್ನೆಲೆಯಲ್ಲಿ ಅದನ್ನು ಟ್ರಂಪ್ ಸ್ಪಷ್ಟವಾಗಿ ಧ್ಯಾನಿಸಿದ್ದಾರೆ. “ಪಾಕಿಸ್ತಾನದ ಜೊತೆಗಿನ ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಪಾಕಿಸ್ತಾನ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಸೂಚನೆಗಳನ್ನು ನಾವು ಕಾಣಲಾರಂಭಿಸಿದ್ದು ಈ ಪ್ರಯತ್ನಗಳಿಗೆ ಧನ್ಯವಾದಗಳು. ಕಡಿಮೆ ಉದ್ವಿಗ್ನತೆ, ಹೆಚ್ಚಿನ ಸ್ಥಿರತೆ ಮತ್ತು ದಕ್ಷಿಣ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೆ ಸಾಮರಸ್ಯದ ದಿನಗಳನ್ನು ಒದಗಿಸುವ ನಿಟ್ಟಿನಲ್ಲಿ ಆಶಾದಾಯಕವಾಗಿ ಇದ್ದೇವೆ” ಎಂದು ಅವರು ಹೇಳಿದ್ದಾರೆ.

“ಡೊನಾಲ್ಡ್ ಟ್ರಂಪ್ ಆಫ್ಘಾನಿಸ್ತಾನದ ಜೊತೆ ಮೈತ್ರಿಯೊಂದನ್ನು ಬಯಸಿದ್ದಾರೆ. ಅವರು ಮತ್ತೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ಒಪ್ಪಂದ ಅನಿವಾರ್ಯ ಆಗಿದೆ. ತಾವು ನೀಡಿದ್ದ ಭರವಸೆಯಂತೆ ನವೆಂಬರ್ 2020 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಮೆರಿಕ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮುಖ್ಯ ಆಗಿದೆ” ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಮಾಜಿ ವಿಶೇಷ ಕಾರ್ಯದರ್ಶಿ ಮತ್ತು ಬೆಂಗಳೂರಿನಲ್ಲಿರುವ ತಕ್ಷಶಿಲಾ ಸಂಸ್ಥೆಯ ಗುಪ್ತಚರ ವಿಶ್ಲೇಷಕ ಆನಂದ್ ಅರ್ನಿ ಹೇಳುತ್ತಾರೆ. 2018 ರ ಜನವರಿಯಲ್ಲಿ ಪಾಕಿಸ್ತಾನಕ್ಕೆ ಎಚ್ಚರ ನೀಡುವ ಟ್ವೀಟ್ ಮಾಡಿದ್ದ ಟ್ರಂಪ್ ಶ್ವೇತಭವನದಲ್ಲಿ ಮತ್ತು ಈ ವರ್ಷದ ಆರಂಭದ ವೇಳೆ ದಾವೋಸ್‌ನಲ್ಲಿ ತಮ್ಮ ಜೊತೆ ವೇದಿಕೆ ಹಂಚಿಕೊಂಡಿದ್ದ ಇಮ್ರಾನ್ ಖಾನ್ ಅವರನ್ನು ‘ಉತ್ತಮ ಸ್ನೇಹಿತ’ ಎಂದು ಕರೆದಿದ್ದರು.

"ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಹಳ ವ್ಯವಹಾರಮಯ. ಪಾಕಿಸ್ತಾನ ಸಹಾಯ ಮಾಡಬೇಕು ಎಂದು ಅಮೆರಿಕ ಈಗ್ಗೆ ಒಂದು ವರ್ಷದಿಂದ ಕೇಳುತ್ತಿದೆ. ಈ ಒಪ್ಪಂದ ಒಂದು ಸ್ಪಷ್ಟ ರೂಪು ಪಡೆಯಲು ಇಸ್ಲಾಮಾಬಾದ್ ಪಾತ್ರ ಮಹತ್ವದ್ದು. ಒಪ್ಪಂದ ಜಾರಿಗೆ ಬರುವ ಮೊದಲು ಹಿಂಸಾಚಾರ ಕಡಿಮೆ ಮಾಡುವ ಅವಧಿಯನ್ನು ಕಳೆದ ಶನಿವಾರವಷ್ಟೇ ಪ್ರಾರಂಭ ಮಾಡಲಾಗಿದೆ. ಆದ್ದರಿಂದ ಗುಜರಾತಿನಲ್ಲಿ ಟ್ರಂಪ್ ನೀಡಿದ ಹೇಳಿಕೆಗಳಿಂದ ಯಾರೂ ಅಚ್ಚರಿಪಡಬೇಕಿಲ್ಲ” ಎಂದು ರಾಜತಂತ್ರಜ್ಞ ಮತ್ತು ಪಾಕಿಸ್ತಾನದ ಮಾಜಿ ಹೈ ಕಮಿಷನರ್ ಶರತ್ ಸಬರ್ ವಾಲ್ ಹೇಳಿದ್ದಾರೆ. “ಭಯೋತ್ಪಾದನೆ ಹತ್ತಿಕ್ಕಲು ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ. ಆದರೆ ಆಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳುವ ತನಕ ಅದು ಇಸ್ಲಾಮಾಬಾದನ್ನು ಅವಲಂಬಿಸಿರುತ್ತದೆ. ಅಲ್ಲಿಯವರೆಗೂ ಅವರು ಕಠಿಣ ನೀತಿ ಅನುಸರಿಸಲಾರರು” ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಉದ್ದೇಶಿತ ಶಾಂತಿ ಒಪ್ಪಂದದ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಪಾತ್ರದ ಬಗ್ಗೆ ಭಾರತಕ್ಕೆ ಆತಂಕಗಳು ಇವೆ. ಅಂತಿಮವಾಗಿ ಸೈನ್ಯ ಹಿಂಪಡೆದ ನಂತರ ಮತ್ತು ಲಷ್ಕರ್ – ಇ – ತೋಯ್ಬಾ ಸೇರಿದಂತೆ ಭಯೋತ್ಪಾದನೆ ಸಂಘಟನೆಗಳು ತಮ್ಮ ತರಬೇತಿ ಶಿಬಿರಗಳನ್ನು ಆಫ್ಘನ್ ಗಡಿಗೆ ಸ್ಥಳಾಂತರಿಸಿ ಅಲ್ಲಿಂದ ಕಾಶ್ಮೀರಕ್ಕೆ ನುಗ್ಗಿಸಲು ಪ್ರಯತ್ನಿಸಿದರೆ ಎಂಬ ಕಳವಳ ಭಾರತದ್ದು. ಕಾಬೂಲ್‌ನಲ್ಲಿ ಅಬ್ದುಲ್ಲಾ ಅಬ್ದುಲ್ಲಾ ಅವರ ವಿರುದ್ಧ ಸ್ಪರ್ಧಿಸಿದ್ದ ಅಶ್ರಫ್ ಘನಿ ಪರ ಅಂತಿಮ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಹೊರಬಂದಿದೆ. ಈ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯಲಿರುವ ಔಪಚಾರಿಕ ಮಾತುಕತೆ ವೇಳೆ ಭಾರತ ಶಾಂತಿ ಒಪ್ಪಂದದ ಬಗ್ಗೆ ಟ್ರಂಪ್ ಜೊತೆ ತನ್ನ ಆತಂಕಗಳನ್ನು ತೋಡಿಕೊಳ್ಳುವ ನಿರೀಕ್ಷೆ ಇದೆ.

ಈ ಆಂತರಿಕ ರಾಜಕೀಯ ತಿಕ್ಕಾಟ ತಾಲಿಬಾನ್ ಜೊತೆ ಅಧಿಕಾರ ಹಂಚಿಕೊಳ್ಳುವ ಆಫ್ಘನ್ ಮಾತುಕತೆಯನ್ನು ಮತ್ತಷ್ಟು ಅಪಾಯಕ್ಕೆ ತಳ್ಳುವ ಸಾಧ್ಯತೆ ಇದೆ. ದ್ವಿಪಕ್ಷೀಯ ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಪದೇ ಪದೇ ಒತ್ತಿ ಹೇಳುತ್ತಿರುವಂತೆಯೇ ಇಸ್ಲಾಮಾಬಾದ್ ಮನವೊಲಿಸಲು ಡೊನಾಲ್ಡ್ ಟ್ರಂಪ್ ಬರುವ ದಿನಗಳಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡಬಾರದು. ಇದನ್ನು ಕೂಡ ಭಾರತ ಖಚಿತಪಡಿಸಿಕೊಳ್ಳಬೇಕಿದೆ.

ಸ್ಮಿತಾ ಶರ್ಮಾ, ನವದೆಹಲಿ.

Last Updated : Oct 10, 2022, 2:56 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.