ಗಾಂಧಿನಗರ(ಗುಜರಾತ್): ಹರಿಯಾಣ, ಜಾರ್ಖಂಡ್‌ನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಟ್ರಕ್ ಹರಿಸಿ ಕೊಲೆ ಮಾಡಿರುವ ಘಟನೆ ಬೆನ್ನಲ್ಲೇ ಗುಜರಾತ್ನಲ್ಲೂ ಅಂತಹದೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ರಾಜಸ್ಥಾನದ ಲೈಸೆನ್ಸ್ ನಂಬರ್ ಹೊಂದಿದ್ದ ಅನುಮಾನಾಸ್ಪದ ಟ್ರಕ್ ತಡೆಯಲು ಹೋದ ಗುಜರಾತ್ ಪೊಲೀಸ್ ಕಾನ್ಸ್ಟೇಬಲ್ ಮೇಲೆ ವಾಹನ ಹರಿಸಿ, ಕೊಲೆ ಮಾಡಲಾಗಿದೆ. ಈ ಮೂಲಕ ಕೇವಲ 24 ಗಂಟೆಗಳ ಅಂತರದಲ್ಲಿ ನಡೆದಿರುವ ಮೂರನೇ ಪ್ರಕರಣ ಇದಾಗಿದೆ.
-
Gujarat| A fatal attack on a police constable has come to light in Borsad; a suspicious truck from Rajasthan mowed policeman Kiran Raj at 1am, as he was trying to stop it. Truck driver fled away. Policeman died during treatment. Driver identified; probe underway: Anand DSP Ajit R pic.twitter.com/ym59OxltPp
— ANI (@ANI) July 20, 2022 " class="align-text-top noRightClick twitterSection" data="
">Gujarat| A fatal attack on a police constable has come to light in Borsad; a suspicious truck from Rajasthan mowed policeman Kiran Raj at 1am, as he was trying to stop it. Truck driver fled away. Policeman died during treatment. Driver identified; probe underway: Anand DSP Ajit R pic.twitter.com/ym59OxltPp
— ANI (@ANI) July 20, 2022Gujarat| A fatal attack on a police constable has come to light in Borsad; a suspicious truck from Rajasthan mowed policeman Kiran Raj at 1am, as he was trying to stop it. Truck driver fled away. Policeman died during treatment. Driver identified; probe underway: Anand DSP Ajit R pic.twitter.com/ym59OxltPp
— ANI (@ANI) July 20, 2022
ಗುಜರಾತ್ನ ಬೋರ್ಸಾದ್ ಎಂಬಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಅನುಮಾನಾಸ್ಪದ ಟ್ರಕ್ ನಿಲ್ಲಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಹರಿಸಲಾಗಿದ್ದು, ಇದರ ಬೆನ್ನಲ್ಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಡಿಎಸ್ಪಿ ಅಜಿತ್ ಆರ್ ಮಾತನಾಡಿದ್ದು, ಬುಧವಾರ ನಸುಕಿನ ಜಾವ ಕಾನ್ಸ್ಟೇಬಲ್ ಕಿರಣ್ ರಾಜ್ ರಾಜಸ್ಥಾನದ ಲೈಸನ್ಸ್ ಹೊಂದಿದ್ದ(ಫಲಕ) ಟ್ರಕ್ ತಡೆಯಲು ಮುಂದಾಗಿದ್ದಾರೆ. ಟ್ರಕ್ ಚಾಲಕ ವೇಗವಾಗಿ ಚಲಾಯಿಸಿ ಕಾನ್ಸ್ಟೇಬಲ್ ಮೇಲೆ ಹರಿಸಿದ್ದಾನೆ.
ಘಟನೆ ಬೆನ್ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಕಿರಣ್ ರಾಜ್ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಟ್ರಕ್ ಚಾಲಕನನ್ನ ಈಗಾಗಲೇ ಗುರುತಿಸಲಾಗಿದ್ದು, ಆತನ ಬಂಧನಕ್ಕಾಗಿ ಶೋಧಕಾರ್ಯ ಮುಂದುವರೆದಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಹರಿಯಾಣ ಘಟನೆ ಬಳಿಕ ಜಾರ್ಖಂಡ್‌ನಲ್ಲಿ ಮಹಿಳಾ ಪಿಎಸ್ಐ ಹತ್ಯೆ!
ನಿನ್ನೆ ಕೂಡ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಹರಿಯಾಣದ ಡಿಎಸ್ಪಿ ಮೇಲೆ ಟ್ರಕ್ ಹರಿಸಿ ಕೊಲೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾತ್ರಿ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಪಿಎಸ್ಐ ಮೇಲೆ ರಾಂಚಿಯಲ್ಲಿ ಟ್ರಕ್ ಹರಿಸಿ ಕೊಲೆ ಮಾಡಲಾಗಿದೆ.