ETV Bharat / bharat

ಮತದಾರರಿಗೆ ಹಣ ಹಂಚಿಕೆ ಕೇಸ್: ಟಿಆರ್​ಎಸ್​ ಸಂಸದೆಗೆ ಜೈಲು ಶಿಕ್ಷೆ - Bribing case

ಮತದಾರರಿಗೆ ಹಣ ಹಂಚಿಕೆ ಪ್ರಕರಣದಲ್ಲಿ ತೆಲಂಗಾಣದ ಸಂಸದೆಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

TRS MP Maloth Kavitha
ಟಿಆರ್​ಎಸ್​ ಸಂಸದೆಗೆ ಜೈಲು
author img

By

Published : Jul 25, 2021, 2:10 PM IST

ಹೈದರಾಬಾದ್ : ಅಪರೂಪದ ಘಟನೆಯಲ್ಲಿ, 2019 ರ ಸಾರ್ವತ್ರಿಕ ಚುನಾವಣೆಯ ವೇಳೆ ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್​ಎಸ್​) ಸಂಸದೆಗೆ ನ್ಯಾಯಾಲಯದಿಂದ ಜೈಲು ಶಿಕ್ಷೆ ಪ್ರಕಟವಾಗಿದೆ.

ಮೆಹಬೂಬಾಬಾದ್ ಟಿಆರ್​ಎಸ್​ ಸಂಸದೆ ಮಲೋತ್ ಕವಿತಾ ಮತ್ತು ಅವರ ಸಹವರ್ತಿಗಳಿಗೆ ಹೈದರಾಬಾದ್​ನ ನಾಂಪಲ್ಲಿಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ಆರೋಪಿಗಳಿಗೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಓದಿ : ವಿವಾದಿತ ಸ್ಥಳದಲ್ಲಿ ಕಟ್ಟಲಾಗಿದ್ದ ಸಿಎಂ ಮನೋಹರ್​​ ಲಾಲ್ ಖಟ್ಟರ್​​ ದೇವಾಲಯ ನೆಲಸಮ

ಮಲೋತ್ ಕವಿತಾ ತೆಲಂಗಾಣ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. 2019 ರ ಸಾರ್ವತ್ರಿಕ ಚುನಾವಣೆ ವೇಳೆ ಸಂಸದರ ಸಹಾಯಕ ಶೌಕತ್ ಅಲಿ ಬುರ್ಗಂಪಹಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕವಿತಾ ಪರ ಮತ ಚಲಾಯಿಸುವಂತೆ ಮತದಾರರಿಗೆ 500 ರೂಪಾಯಿ ಹಣ ಹಂಚುವಾಗ ಕಂದಾಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.