ETV Bharat / bharat

ಚಂದ್ರನ ಮೇಲೆ 3 ಎಕರೆ ಜಾಗ ಖರೀದಿಸಿದ್ದಾನಂತೆ ಈ ವ್ಯಕ್ತಿ!

ಚಂದ್ರನ ಮೇಲೆ ಜಾಗ ಖರೀದಿಸಿರುವುದಾಗಿ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದು, ಈಗಾಗಲೇ ಅಗತ್ಯ ದಾಖಲೆಗಳನ್ನು ಇಮೇಲ್ ಮೂಲಕ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

author img

By

Published : Feb 18, 2022, 6:44 AM IST

Updated : Feb 18, 2022, 7:14 AM IST

tripura-man-claims-to-have-brought-3-acres-land-on-moon
ಚಂದ್ರನ ಮೇಲೆ 3 ಎಕರೆ ಜಾಗ ಖರೀದಿಸಿದ್ದಾನಂತೆ ಈ ವ್ಯಕ್ತಿ!

ಅಗರ್ತಲಾ(ತ್ರಿಪುರಾ): ಇತ್ತೀಚೆಗಷ್ಟೇ ತ್ರಿಪುರಾದ ದಕ್ಷಿಣ ಜಿಲ್ಲೆಯ ಓರ್ವ ವ್ಯಕ್ತಿ ತಾನು ಚಂದ್ರನ ಮೇಲೆ ಜಾಗ ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ಇದೇ ರಾಜ್ಯದ ಪಶ್ಚಿಮ ಜಿಲ್ಲೆಗೆ ಸೇರಿದ ಮತ್ತೋರ್ವ ವ್ಯಕ್ತಿ ತಾನೂ ಕೂಡಾ ಚಂದ್ರನ ಮೇಲೆ ಮೂರೆಕರೆ ಜಾಗ ಖರೀದಿಸಿರುವುದಾಗಿ ಹೇಳಿದ್ದಾರೆ.

ಮೋಹನ್‌ಪುರ ಉಪವಿಭಾಗದ ಗ್ರಾಮವೊಂದರ ನಿವಾಸಿ ಚಂಪಕ್ ದೇಬನಾಥ್ ವೃತ್ತಿಯಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿದ್ದು ಇಂಟರ್ನ್ಯಾಷನಲ್ ಲೂನಾರ್ ಸೊಸೈಟಿಗೆ $139 ಡಾಲರ್ (10,432 ರೂಪಾಯಿ) ನೀಡಿ ಜಾಗ ಖರೀದಿಸಿದ್ದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಚಂದ್ರನ ಮೇಲೆ ಜಾಗ ಖರೀದಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳ ತಿಳಿದುಕೊಂಡಿದ್ದೆ. ನಮ್ಮ ರಾಜ್ಯದ ವ್ಯಕ್ತಿಯೊಬ್ಬರು ಚಂದ್ರನಲ್ಲಿರುವ ಜಾಗವನ್ನು ಖರೀದಿಸಿದ ನಂತರ ನಾನೂ ಖರೀದಿಸಬೇಕೆಂದು ನಿರ್ಧರಿಸಿದ್ದೆ. ನನ್ನ ಕಿರಿಯ ಸಹೋದರ ಜಯಂತ ದೇಬನಾಥ್ ಇಂಟರ್​ನೆಟ್​​ನಲ್ಲಿ ಹುಡುಕಿ ಇಂಟರ್ನ್ಯಾಷನಲ್ ಲೂನಾರ್ ಸೊಸೈಟಿ ಮೂಲಕ ಮೂರು ಎಕರೆ ಜಾಗವನ್ನು ಖರೀದಿಸಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ: ಸಿಂಗಾಪುರ ಸಂಸತ್​ನಲ್ಲಿ ನೆಹರು ಗುಣಗಾನ... ಕಾರಣ ಇಷ್ಟೇ!

ನಾನು ಈಗಾಗಲೇ ಇಮೇಲ್ ಮೂಲಕ ಅಗತ್ಯ ದಾಖಲೆಗಳನ್ನು ಇಂಟರ್ನ್ಯಾಷನಲ್ ಲೂನಾರ್ ಸೊಸೈಟಿಯಿಂದ ಪಡೆದುಕೊಂಡಿದ್ದೇನೆ. ಮೂಲ ಪ್ರತಿಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತದೆ ಮತ್ತು ಮುಂದಿನ ವಾರ ದಾಖಲೆಗಳು ನನಗೆ ತಲುಪುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ತ್ರಿಪುರಾದ ದಕ್ಷಿಣ ಜಿಲ್ಲೆಯ ಸುಮನ್ ದೇಬನಾಥ್ ಅವರು ಆಸ್ತಿಗಾಗಿ ಲೂನಾರ್ ಸೊಸೈಟಿ ಇಂಟರ್‌ನ್ಯಾಶನಲ್‌ಗೆ 6 ಸಾವಿರ ರೂಪಾಯಿ ಪಾವತಿಸಿ, ಜಾಗ ಕೊಂಡಿದ್ದರು.

Last Updated : Feb 18, 2022, 7:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.