ದಿಯೋಘರ್(ಜಾರ್ಖಂಡ್): ರೋಪ್‌ವೇಯಲ್ಲಿ ಪರಸ್ಪರ ಕೇಬಲ್ ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪವಿರುವ ತ್ರಿಕೂಟ್ ಬೆಟ್ಟದಲ್ಲಿ ನಡೆದಿದೆ. ರೋಪ್ ವೇಯಲ್ಲಿ ಕನಿಷ್ಠ 12 ಕ್ಯಾಬಿನ್‌ಗಳಲ್ಲಿ 50 ಜನರು ಇನ್ನೂ ಸಿಲುಕಿಕೊಂಡಿದ್ದು, ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದ್ರೂ ಸಹ ಯಶಸ್ಸು ಕಾಣುತ್ತಿಲ್ಲ ಎಂದು ತಿಳಿದುಬಂದಿದೆ.
ಕೇಬಲ್ ಕಾರುಗಳ ಡಿಕ್ಕಿಯಾದ ಪರಿಣಾಮ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಾಹನಗಳು ಅದೇ ಸ್ಥಳದಲ್ಲಿ ನಿಂತಿವೆ. ಘಟನೆಯ ನಂತರ ಕೇಬಲ್ ಕಾರಿನಿಂದ ಜಿಗಿಯಲು ಪ್ರಯತ್ನಿಸಿದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 48 ಜನರು 12 ಟ್ರಾಲಿಗಳಲ್ಲಿದ್ದಾರೆ. ಅವರು ಸಿಕ್ಕಿಹಾಕಿಕೊಂಡು ಸುಮಾರು 17 ಗಂಟೆಗಳು ಕಳೆದಿವೆ. ಇದೇ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ದೃಢಪಡಿಸಿದೆ.
-
Rescue Operation underway
— NDRF 🇮🇳 (@NDRFHQ) April 11, 2022 " class="align-text-top noRightClick twitterSection" data="
🔶@ Ropeway in Trikut, Devghar (JH)
🔶Multi agency coordination
🔶Rescues 18 person from 3 trollies
🔶Ops Continues #आपदा_सेवा_सदैव_सर्वत्र 🇮🇳@HMOIndia @BhallaAjay26@RanchiPIB @PIBHomeAffairs @NdrfP pic.twitter.com/BGONRZZXef
">Rescue Operation underway
— NDRF 🇮🇳 (@NDRFHQ) April 11, 2022
🔶@ Ropeway in Trikut, Devghar (JH)
🔶Multi agency coordination
🔶Rescues 18 person from 3 trollies
🔶Ops Continues #आपदा_सेवा_सदैव_सर्वत्र 🇮🇳@HMOIndia @BhallaAjay26@RanchiPIB @PIBHomeAffairs @NdrfP pic.twitter.com/BGONRZZXefRescue Operation underway
— NDRF 🇮🇳 (@NDRFHQ) April 11, 2022
🔶@ Ropeway in Trikut, Devghar (JH)
🔶Multi agency coordination
🔶Rescues 18 person from 3 trollies
🔶Ops Continues #आपदा_सेवा_सदैव_सर्वत्र 🇮🇳@HMOIndia @BhallaAjay26@RanchiPIB @PIBHomeAffairs @NdrfP pic.twitter.com/BGONRZZXef
ಓದಿ: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ: ಸರ್ಕಾರಕ್ಕೆ ಪ್ರಮೋದಾ ದೇವಿ ಸಲಹೆ
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ಗೆ ಸಹಾಯ ಮಾಡುತ್ತಿದ್ದಾರೆ ಎಂದು ದಿಯೋಘರ್ ಉಪ ಆಯುಕ್ತ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ. ಡಿಸಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಚಂದ್ರ ಜಾಟ್ ಇಬ್ಬರೂ ಸ್ಥಳದಿಂದ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಇನ್ನೂ ಕೆಲವರು ರೋಪ್‌ವೇಯಲ್ಲಿ ಕೇಬಲ್ ಕಾರ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಡಿಸಿ ಹೇಳಿದರು. ವದಂತಿಗಳನ್ನು ಹರಡದಂತೆ ಜನರಿಗೆ ಮನವಿ ಮಾಡಿದರು.
ಓದಿ: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ: ಪ್ರೊ. ರಂಗರಾಜು
ಜಾರ್ಖಂಡ್ ಪ್ರವಾಸೋದ್ಯಮವು ತ್ರಿಕೂಟ್ ರೋಪ್‌ವೇ ಭಾರತದ ಅತಿ ಎತ್ತರದ ಉದ್ದನೇಯ ರೋಪ್‌ವೇ ಆಗಿದೆ. ಗರಿಷ್ಠ 44 ಡಿಗ್ರಿ ಲೆನ್ಸ್ ಕೋನವನ್ನು ಹೊಂದಿದೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ರೋಪ್ ವೇ ಇದೆ. ಈ ರೋಪ್ ವೇ ಸುಮಾರು 766 ಮೀಟರ್ ಉದ್ದವಿದ್ದರೆ, ಬೆಟ್ಟವು 392 ಮೀಟರ್ ಎತ್ತರದಲ್ಲಿದೆ. ರೋಪ್ ವೇಯಲ್ಲಿ 25 ಕ್ಯಾಬಿನ್‌ಗಳಿವೆ. ಪ್ರತಿ ಕ್ಯಾಬಿನ್‌ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. ಘಟನೆಯ ನಂತರ ರೋಪ್ ವೇ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.