ETV Bharat / bharat

ಆಶ್ರಯ ಪಡೆದವರ ಮೇಲೆ ಉರುಳಿ ಬಿದ್ದ ಮರ, ಇಬ್ಬರು ಬಾಲಕರ ಸಾವು

ಜಾರ್ಖಂಡ್​ನ ಸಾರೈಕೇಲಾ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಗಾಳಿ ಮತ್ತು ಸಿಡಿಲು ಜೊತೆ ರಭಸದಿಂದ ಮಳೆ ಸುರಿಯುತ್ತಿದೆ. ಜನರು ಮಳೆ ಹಿನ್ನೆಲೆಯಲ್ಲಿ ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದರು. ಈ ವೇಳೆ ಮರ ಉರುಳಿ ಬಿದ್ದು ಬಾಲಕರಿಬ್ಬರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

Two children died  One person seriously injured  Keita village of Seraikela  Police of Saraikela police station  Seraikela-Kharsawan Main Road  Saraikela News  tree fell on children in storm in seraikela  child died in storm in seraikela  ಮರ ಉರುಳಿ ಬಿದ್ದು ಇಬ್ಬರು ಬಾಲಕರು ಸಾವು,  ಸಾರೈಕೆಲಾದಲ್ಲಿ ಮರ ಉರುಳಿ ಬಿದ್ದು ಇಬ್ಬರು ಬಾಲಕರು ಸಾವು,  ಸಾರೈಕೆಲಾ ಸುದ್ದಿ,
ಆಶ್ರಯ ಪಡೆದವರ ಮೇಲೆ ಉರುಳಿ ಬಿದ್ದ ಮರ, ಇಬ್ಬರು ಬಾಲಕರ ಸಾವು
author img

By

Published : May 7, 2021, 1:11 PM IST

ಸಾರೈಕೆಲಾ: ಮಳೆ ಸುರಿಯುತ್ತಿದ್ದ ವೇಳೆ ಮರದ ಕೆಳಗೆ ನಿಂತಿದ್ದವರ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಈ ಘಟನೆ ಜಾರ್ಖಂಡ್‌ನ ಕಿತಾ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣದಿಂದಾಗಿ ಕತ್ತಲಾವರಿಸುತ್ತಿದೆ. ಮಕ್ಕಳು ಮತ್ತು ಯುವಕರು ಸಂಜೆ ಆಗುತ್ತಿದ್ದಂತೆ ಗ್ರಾಮದ ಹೊರವಲಯದಲ್ಲಿರುವ ಮಾವಿನ ತೋಟಕ್ಕೆ ಹೋಗಿ ಹಣ್ಣು ಕೀಳುವುದರಲ್ಲಿ ನಿರತರಾಗುತ್ತಾರೆ. ಈ ಸಮಯದಲ್ಲಿ ಗಾಳಿ ಸಮೇತ ಜೋರು ಮಳೆ ಬಂದಿದ್ದು ಮಕ್ಕಳು ಮತ್ತು ಯುವಕರು ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದರು.

ಇದೇ ವೇಳೆ ಮಾವಿನ ಮರ ಉರುಳಿ ಬಿದ್ದಿದೆ. ಪರಿಣಾಮ ಮರದಡಿ ಸಿಲುಕಿಕೊಂಡ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.