ಜಮ್ಮು ಕಾಶ್ಮೀರ : ಸುಮಾರು 11 ತಿಂಗಳಿಂದ ಸ್ಥಗಿತವಾಗಿದ್ದ ರೈಲು ಸಂಚಾರ ಜಮ್ಮು ಕಾಶ್ಮೀರದಲ್ಲಿ ಮತ್ತೆ ಆರಂಭವಾಗಿದೆ. ಭಾಗಶಃ ರೈಲು ಸಂಚಾರ ಆರಂಭವಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಬಾರಾಮುಲ್ಲಾದಿಂದ 137 ಕಿಲೋಮೀಟರ್ ದೂರದಲ್ಲಿರುವ ಬನಿಹಾಲ್ಗೆ ಮೊದಲ ರೈಲು ಸಂಚರಿಸಿದ್ದು, ಈ ಮಾರ್ಗದ ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ. ಈ ಮಾರ್ಗ 17 ಸ್ಟೇಷನ್ಗಳನ್ನು ಹೊಂದಿದೆ.
ಇದನ್ನೂ ಓದಿ: ಮಹದಾಯಿ ವಿವಾದ: ಜಂಟಿ ಸಮಿತಿ ರಚಿಸಿ, ವರದಿ ಸಲ್ಲಿಸಲು ಸುಪ್ರೀಂ ನಿರ್ದೇಶನ
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಕೊರೊನಾ ಸೋಂಕಿನ ಕಾರಣಕ್ಕೆ ರೈಲು ಸಂಚಾರ ಸ್ಥಗಿತ ಮಾಡಲಾಗಿತ್ತು. ಕೆಲವು ದಿನಗಳ ಮೊದಲು ಜಮ್ಮು ಕಾಶ್ಮೀರ ಆಡಳಿತ ರಸ್ತೆ ಸಂಚಾರ ಮತ್ತು ವಿಮಾನ ಸಂಚಾರಕ್ಕೆ ಅನುಮತಿ ನೀಡಿತ್ತು.
ಈ ಬಗ್ಗೆ ಕೇಂದ್ರ ರೈಲ್ವೆ ಮಂತ್ರಿ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದು, ಜಮ್ಮು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಇದು ಉತ್ತೇಜನ ನೀಡಲಿದೆ ಎಂದಿದ್ದರು.