ಮಯಿಲಾಡುತುರೈ (ತಮಿಳುನಾಡು): ಮಯಿಲಾಡುತುರೈನ ಕೂರೈನಾಡು ವೆಂಕಟೇಶ್ ಹಾಗೂ ಶಿವಭಾರತಿ ದಂಪತಿ ರೈಲು ಕೋಚ್‌ನಂತಿರುವ ಬಿರಿಯಾನಿ ರೆಸ್ಟೋರೆಂಟ್ ಪರಿಚಯಿಸುವ ಮೂಲಕ ರೆಸ್ಟೋರೆಂಟ್‌ಗೆ ಹೊಸತನ ತಂದಿದ್ದಾರೆ. ಜೂನ್ 4 ರಂದು ರೆಸ್ಟೋರೆಂಟ್ ಉದ್ಘಾಟಿಸಲಾಗಿದ್ದು ಈಗ ಜನರಿಗೆ ಲಭ್ಯವಿದೆ.
ರೆಸ್ಟೋರೆಂಟ್‌ನಲ್ಲಿ ಹೊಸತನ ತಂದಿರುವುದರಿಂದ ಆಹಾರಪ್ರಿಯರಿಗೆ ಇದು ನೆಚ್ಚಿನ ತಾಣವಾಗಿದೆ. ಕೂರೈನಾಡಿನಲ್ಲಿರುವ ರೆಸ್ಟೊರೆಂಟ್ ಅನ್ನು ರೈಲು ಕೋಚ್‌ಗಳಂತೆ ನಿರ್ಮಿಸಲಾಗಿದೆ. ಬಿರಿಯಾನಿ ರೆಸ್ಟೊರೆಂಟ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕೋಚ್‌ನ ಪ್ರತಿ ವಿಭಾಗದಲ್ಲಿ 12 ಜನರಿಗೆ ಅನುಕೂಲಕರ ಸ್ಥಳಾವಕಾಶವಿದೆ. ಲಗೇಜ್‌ಗಳನ್ನಿಡಲು ಬೇಕಾದಷ್ಟು ಸ್ಥಳವಿದೆ.
ಊಟದ ಸ್ಥಳದ ಎರಡೂ ಬದಿಗಳಲ್ಲಿ ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಇದರಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬಹುದು. ಇಡೀ ಕಲ್ಪನೆಯು ರೈಲಿನಿಂದ ಪ್ರೇರಿತವಾಗಿದೆ. ಆಕರ್ಷಕವಾಗಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ಮೂಲಕ ಬಿರಿಯಾನಿ ರೆಸ್ಟೋರೆಂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರೈಲು ಪ್ರೇಮಿಗಳು ಮತ್ತು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ.
"ಇದು ಹೊಸ ಕಲ್ಪನೆ ಮತ್ತು ಮಕ್ಕಳು ಖಂಡಿತವಾಗಿಯೂ ವಾತಾವರಣದಲ್ಲಿ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಇದು ಜನರ ಗಮನ ಸೆಳೆದಿದೆ. ಎಲ್ಲ ಒಳಾಂಗಣದ ಕೆಲಸಗಳು ಮೋಡಿ ಮಾಡುತ್ತವೆ ಮತ್ತು ಆಹಾರ ಗುಣಮಟ್ಟವೂ ಉತ್ತಮವಾಗಿದೆ. ಹೊಸ ಪ್ರಯೋಗ ಖಂಡಿತವಾಗಿಯೂ ಎಲ್ಲರಿಗೂ ಇಷ್ಟವಾಗುತ್ತದೆ. ಜನರು ಹೊಸ ಜಾಗವನ್ನು ಆನಂದಿಸುತ್ತಿದ್ದಾರೆ" ಎಂದು ಗ್ರಾಹಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಎಸಿ ವ್ಯವಸ್ಥೆ ಇದೆ. ಇದೀಗ ಪ್ರಾರಂಭವಾಗಿರುವುದರಿಂದ ಬಿರಿಯಾನಿ ಮೇಲೆ ಆಫರ್‌ಗಳನ್ನು ನೀಡಲಾಗಿದೆ. ಒಂದನ್ನು ಖರೀದಿಸಿದರೆ ಮತ್ತೊಂದು ಬಿರಿಯಾನಿ ಉಚಿತವಾಗಿ ಸಿಗುತ್ತಿದೆ. ಜನರು ಕುತೂಹಲದಿಂದ ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಿದ್ದು, ಸೆಲ್ಫಿ ತೆಗೆದುಕೊಂಡು ಖುಷಿಪಡುತ್ತಿದ್ದಾರೆ. ತಮ್ಮ ಸಮಯವನ್ನು ಇಲ್ಲಿ ಆನಂದಿಸುತ್ತಿದ್ದಾರೆ. ಅನೇಕ ಗ್ರಾಹಕರು ಬಿರಿಯಾನಿ ಸವಿದು ಅವರ ವೀಕೆಂಡ್ ಆನಂದಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿರಿಯಾನಿ ರೆಸ್ಟೊರೆಂಟ್ ಸಾರ್ವಜನಿಕರು ಮತ್ತು ಮಕ್ಕಳ ಕಣ್ಮನ ಸೆಳೆಯುತ್ತಿದೆ.
ರೈಲು ನಿಲ್ದಾಣಗಳಲ್ಲಿ ರೈಲ್ ಕೋಚ್ ರೆಸ್ಟೋರೆಂಟ್: ಇತ್ತೀಚೆಗೆ ಉತ್ತರ ಪ್ರದೇಶದ ಬನಾರಸ್ ಹಾಗೂ ವಾರಣಾಸಿಯಲ್ಲಿ ಕಸವೆಂದು ಎಸೆದ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ರೆಸ್ಟಾರೆಂಟ್ ನಿರ್ಮಿಸಲಾಗಿದ್ದು, ಪ್ರವಾಸಿಗರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ. ಕಾಶಿಯ ಬನಾರಸ್ ರೈಲು ನಿಲ್ದಾಣದಲ್ಲಿ ಹಾಳಾಗಿದ್ದ ರೈಲು ಕೋಚ್ಗಳನ್ನು ರೆಸ್ಟಾರೆಂಟ್ಗಳಾಗಿ ಮಾರ್ಪಾಟು ಮಾಡಲಾಗಿದೆ. ರೆಸ್ಟಾರೆಂಟ್ ಆನ್ ವ್ಹೀಲ್ ಎನ್ನುವ ಥೀಮ್ನೊಂದಿಗೆ ಕಾಶೀಯ ಬನಾರಸ್ ಹಾಗೂ ವಾರಣಾಸಿ ರೈಲು ನಿಲ್ದಾಣಗಳಲ್ಲಿ ರೈಲ್ ಕೋಚ್ ರೆಸ್ಟಾರೆಂಟ್ಗಳು ಪ್ರಾರಂಭವಾಗಲಿದೆ. ಬನಾರಸ್ನಲ್ಲಿ ಈಗಾಗಲೇ ರೈಲ್ ಕೋಚ್ ರೆಸ್ಟಾರೆಂಟ್ ನಿರ್ಮಾಣ ಪೂರ್ಣವಾಗಿದ್ದು, ವಾರಾಣಸಿಯಲ್ಲೂ ತಯಾರಾಗುತ್ತಿದೆ. ಈ ಥೀಮ್ ಬೇಸ್ಡ್ ರೆಸ್ಟಾರೆಂಟ್ನಲ್ಲಿ ಬನಾರಸ್ನ ಸಂಸ್ಕೃತಿ, ಪರಂಪರೆ ಝಲಕ್ ನೀಡಲಾಗಿದೆ. ಈ ರೆಸ್ಟಾರೆಂಟ್ಗಳಿಗೆ ಬರುವವರಿಗೆ ತಿನಿಸು, ಊಟ ಸವಿಯುತ್ತಿರುವುದರ ಜೊತೆ ಜೊತೆಗೆ ರೈಲಿನಲ್ಲಿ ಪ್ರಯಾಣಿಸುವುದರ ಭಾವನೆಯೂ ಮೂಡಬೇಕು ಎನ್ನುವ ಉದ್ದೇಶ ರೈಲ್ವೆ ಮಾಲೀಕರದ್ದು.
ಇದನ್ನೂ ಓದಿ: ರೆಸ್ಟಾರೆಂಟ್ ಆನ್ ವ್ಹೀಲ್: ಬನಾರಸ್ನ ರೈಲು ನಿಲ್ದಾಣಗಳಲ್ಲಿ ರೈಲ್ ಕೋಚ್ ರೆಸ್ಟಾರೆಂಟ್