ಸುರೇಂದ್ರನಗರ: ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡಿ, ಒಂದು ವೇಳೆ ಆಗದಿದ್ದರೇ ಆಕೆ ಮತ್ತು ಆಕೆಯ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಆರೋಪ ಸೂರತ್ನ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಕೇಳಿಬಂದಿದೆ. ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸುರೇಂದ್ರನಗರದ ಘುಘಾರಿ ಪಾರ್ಕ್ ಸೊಸೈಟಿಯಲ್ಲಿ ವಾಸಿಸುತ್ತಿರುವ ಮಹಿಳೆ ಗುರುವಾರ ಸಂಜೆ ದೂರು ನೀಡಿದ್ದಾರೆ. ದೂರಿನಲ್ಲಿ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಯಶಪಾಲ್ ಗೋಹಿಲ್ 2016 ರಿಂದ ಅವರನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ನವೆಂಬರ್ 2021 ರಲ್ಲಿ ಗೋಹಿಲ್ ಅವರ ಚಾಲಕ ಜತಿನ್ ಮಹಿಳೆ ಸಂಪರ್ಕಿಸಿ, ಆರೋಪಿಯೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಬ್ರಿಟಿಷ್ ಮಹಿಳೆಗೆ ಕಿರುಕುಳ: ಪೊಲೀಸರ ಬಲೆಗೆ ಬಿದ್ದ ಎಂಬಿಎ ಪದವೀಧರ!
ಅದಕ್ಕೆ ಮಹಿಳೆ ಒಪ್ಪದ ಕಾರಣ ಆಕೆಗೆ ಕಪಾಳಮೋಕ್ಷ ಮಾಡಿ, ಮಕ್ಕಳು ಹಾಗೂ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನಂತೆ. ಗೋಹಿಲ್ ತನ್ನ ಕುಟುಂಬದವರ ಸೆಲ್ ನಂಬರ್‌ಗಳನ್ನು ಅಕ್ರಮವಾಗಿ ಕಣ್ಗಾವಲಿನಲ್ಲಿಟ್ಟು, ನನ್ನನ್ನು ಹಿಂಬಾಲಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಗೋಹಿಲ್ ವಿರುದ್ಧ ಹಿಂಬಾಲಿಸುವುದು, ಲೈಂಗಿಕ ದೌರ್ಜನ್ಯ, ಮನೆ ಅತಿಕ್ರಮಣ, ಸಾವು ಅಥವಾ ನೋವುಂಟುಮಾಡುವ ಬೆದರಿಕೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಇತರ ವಿಭಾಗಗಳ ಅಡಿ ಪ್ರಕರಣ ದಾಖಲಿಸಲಾಗಿದೆ.